ಅಮೋಘ ಆಭಿನಯದ ಮೂಲಕ ಅಭಿಮಾನಿಗಳ ಮನ ಗೆದ್ದಿರುವ ಅನಂತನಾಗ್ ಹಾಗೂ ದೂದ್ ಪೇಡ ದಿಗಂತ್ ತಾತ – ಮೊಮ್ಮಗನ ಪಾತ್ರದಲ್ಲಿ ಕಾಣಿಸಿಕೊಂಡಿರುವ
“ತಿಮ್ಮಯ್ಯ & ತಿಮ್ಮಯ್ಯ” ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಚಿತ್ರದ ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ಬಹು ನಿರೀಕ್ಷಿತ ಈ ಚಿತ್ರ ಡಿಸೆಂಬರ್ 2 ರಂದು ತೆರೆ ಕಾಣುತ್ತಿದೆ.
Thimayya & Thimayya | Official Trailer |
*ಪ್ರತಿಷ್ಠಿತ ಗೋವಾ ‘ಇಂಟರ್ ನ್ಯಾಶನಲ್ ಫಿಲ್ಮಂ ಫೆಸ್ಟಿವಲ್’ ನಲ್ಲಿ ‘ರೆಮೋ’ ಕಮಾಲ್
ನನಗೆ ಮುಂಬೈನಿಂದ ನಿರ್ದೇಶಕ ಸಂಜಯ್ ಶರ್ಮ ಈ ಚಿತ್ರದ ಸ್ಕ್ರಿಪ್ಟ್ ಕಳುಹಿಸಿದ್ದರು. ಸ್ಕ್ರಿಪ್ಟ್ ಇಂಗ್ಲಿಷ್ ನಲ್ಲಿತ್ತು. ಓದುತ್ತಾ ಹೋದಾಗ, ಕಥೆ ತುಂಬಾ ಹಿಡಿಸಿತು. ಬೆಂಗಳೂರಿಗೆ ಬನ್ನಿ ಮಾತನಾಡೋಣ ಎಂದೆ. ಕರ್ನಾಟಕದವರೆ ಆಗಿದ್ದು, ಮುಂಬೈನಲ್ಲಿ ಆ್ಯಡ್ ಡೈರೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಸಂಜಯ್ ಶರ್ಮ, ನಿಜಕ್ಕೂ ಒಳ್ಳೆಯ ಕಥೆ ಮಾಡಿದ್ದಾರೆ. ಅವರ ತಮ್ಮ ರಾಜೇಶ್ ಶರ್ಮ ನಿರ್ಮಾಣ ಮಾಡಿದ್ದಾರೆ. ನಾನು ಈವೆರೆಗೂ ಮಾಡಿರದ ಪಾತ್ರವನ್ನು ಈ ಚಿತ್ರದಲ್ಲಿ ಮಾಡಿದ್ದೀನಿ ಎಂದರು ಅನಂತನಾಗ್.
31 ಗೋವು ದತ್ತು ಪಡೆದ ಚಿತ್ರನಟ ಸುದೀಪ್
ನನಗೆ ಸಂಜಯ್ ಅವರು ಈ ಕಥೆ ಹೇಳಿದಾಗ, ತಾತನ ಪಾತ್ರ ಅನಂತನಾಗ್ ಅವರು ಮಾಡುತ್ತಾರೆ ಎಂದರು. ಹೌದು ಈ ತರಹ ಪಾತ್ರ ಅನಂತನಾಗ್ ಸರ್ ಅವರಿಂದ ಮಾತ್ರ ಮಾಡಲು ಸಾಧ್ಯ. ನಾನು ಅವರ ಜೊತೆಗೆ ಸಾಕಷ್ಟು ಚಿತ್ರದಲ್ಲಿ ಅಭಿನಯಿಸಿದ್ದೇನೆ. ಆದರೆ ಈ ಚಿತ್ರದಲ್ಲಿ ಅಭಿನಯಿಸಿದ್ದು ಹೆಚ್ಚು ಖುಷಿಯಾಗಿದೆ. ನನ್ನ ಹೆಂಡತಿ ಐಂದ್ರಿತಾ ರೇ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ನಮ್ಮ ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದರು ನಾಯಕ ದಿಗಂತ್.
ನನಗೆ ಯೂರೋಪಿನಿಂದ ಒಂದು ಡಾಕ್ಯುಮೆಂಟರಿ ಮಾಡಲು ಆಫರ್ ಬಂದಿತ್ತು. ಆ ಸಮಯದಲ್ಲಿ ಎರಡು, ಮೂರು ಕಥೆಗಳು ನನಗೆ ಸಿಕ್ಕವು. ಅದರಲ್ಲಿ ತಾತ – ಮೊಮ್ಮಗನ ಬಾಂಧವ್ಯದ ಈ ಕಥೆಯನ್ನು ಸಿನಿಮಾ ಮಾಡಲು ನಿರ್ಧಾರ ಮಾಡಿದ್ದೆವು. ತಾತನ ಪಾತ್ರವನ್ನು ಅನಂತನಾಗ್ ಸರ್ ಅವರ ಹತ್ತಿರ ಮಾಡಿಸಬೇಕೆಂಬ ಆಸೆಯಾಯಿತು. ಅವರು ಕಥೆ ಒಪ್ಪಿ ಅಭಿನಯಿಸಲು ಒಪ್ಪಿದ್ದು ಖುಷಿಯಾಯಿತು. ಮೊಮ್ಮಗನ ಪಾತ್ರ ಮಾಡಿರುವ ದಿಗಂತ್ ಸೇರಿದಂತೆ ಎಲ್ಲಾ ಕಲಾವಿದರ ಅಭಿನಯ ಚೆನ್ನಾಗಿದೆ. ಅನೂಪ್ ಸೀಳಿನ್ ಸಂಗೀತ ಚಿತ್ರದ ಮತ್ತೊಂದು ಹೈಲೆಟ್. ನನ್ನ ಇಡೀ ತಂಡಕ್ಕೆ ಧನ್ಯವಾದ. ಚಿತ್ರ ಡಿಸೆಂಬರ್ 2 ರಂದು ಬಿಡುಗಡೆಯಾಗುತ್ತಿದೆ ನೋಡಿ ಹಾರೈಸಿ ಎಂದರು ನಿರ್ದೇಶಕ ಸಂಜಯ್ ಶರ್ಮ.
ಕಂಟೆ0ಟ್‌ನಿ0ದ ಸದ್ದು ಮಾಡುತ್ತಿದೆ `ಆರ್ಟಿಕಲ್ 370’ ಟ್ರೈಲರ್
ನಾನು ಚಿಕ್ಕ ವಯಸ್ಸಿನಲ್ಲಿ ಶಾಲೆಗೆ ಬಂಕ್ ಹಾಕಿ, ಅನಂತನಾಗ್ ಅವರ ಸಿನಿಮಾಗಳನ್ನು ನೋಡುತ್ತಿದ್ದೆ. ಈಗ ಅವರ ಅಭಿನಯದ ಸಿನಿಮಾ ನಿರ್ಮಾಣ ಮಾಡಿರುವುದು ನಿಜಕ್ಕೂ ಖುಷಿ ತಂದಿದೆ ಎಂದರು ನಿರ್ಮಾಪಕ ರಾಜೇಶ್ ಶರ್ಮ. ಸಂಗೀತ ನಿರ್ದೇಶಕ ಅನೂಪ್ ಸೀಳಿನ್ ಹಾಡುಗಳ ಬಗ್ಗೆ ಹೇಳಿದರು. ಚಿತ್ರದಲ್ಲಿ ನಟಿಸಿರುವ ಐಂದ್ರಿತಾ ರೇ, ಶುಭ್ರ ಅಯ್ಯಪ್ಪ, ವಿನೀತ್, ಪ್ರಕಾಶ್ ತುಮ್ಮಿನಾಡು, ಸುನೀಲ್ ಬಿ.ಟಿ ವೆಂಕಟೇಶ್ ಮುಂತಾದವರು ಚಿತ್ರದ ಕುರಿತು ಮಾತನಾಡಿದರು. ಬಾಲಕೃಷ್ಣ ತೋಟ ಛಾಯಾಗ್ರಹಣ, ಸುರೇಶ್ ಅರಸ್ ಸಂಕಲನ, ಗುಣ ಕಲಾ ನಿರ್ದೇಶನ ಹಾಗೂ ದೀಕ್ಷಿತ್ ಕುಮಾರ್ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ.