Sandalwood Leading OnlineMedia

ಗೂಗಲ್ ಸರ್ಚ್ ಟಾಪ್ 10ನಲ್ಲಿ ಕನ್ನಡ ಸಿನಿಮಾಗಳ ಹೆಸರೇ ಇಲ್ಲ!

2024ನೇ ಇಸವಿಯಲ್ಲಿ ಗೂಗಲ್‌ನಲ್ಲಿ ಅತಿ ಹೆಚ್ಚು ಹುಡುಕಾಟಗೊಂಡ ಟಾಪ್ 10 ಭಾರತೀಯ ಚಲನಚಿತ್ರಗಳ ಪಟ್ಟಿಯನ್ನು ಗೂಗಲ್ ಟ್ರೆಂಡ್ಸ್ ಬಿಡುಗಡೆ ಮಾಡಿದೆ. ತೆಲುಗು, ತಮಿಳು, ಮಲಯಾಳಂ ಮತ್ತು ಹಿಂದಿ ಚಿತ್ರಗಳು ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ‘ಸ್ತ್ರೀ 2’ ಅತಿ ಹೆಚ್ಚು ಹುಡುಕಾಟಗೊಂಡ ಚಿತ್ರವಾಗಿದ್ದು, ‘ಕಲ್ಕಿ 2898 ಎಡಿ’, ’12th ಫೇಲ್’ ಮುಂತಾದ ಚಿತ್ರಗಳು ಅಗ್ರ ಸ್ಥಾನಗಳನ್ನು ಪಡೆದಿವೆ. ನೋಡ ನೋಡುತ್ತಿದ್ದಂತೆ 2024ನೇ ಇಸ್ವಿ ಪೂರ್ಣಗೊಳ್ಳುವ ಹಂತಕ್ಕೆ ಬಂದಿದೆ. ಇನ್ನು 20 ದಿನ ಕಳೆದರೆ 2025 ಬರಲಿದೆ. ಚಿತ್ರರಂಗದ ಪಾಲಿಗೆ ಈ ವರ್ಷ ಆಶಾದಾಯಕವಾಗಿತ್ತು. ಹಲವು ಸಿನಿಮಾಗಳು ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡವು. ಈಗ ಗೂಗಲ್ ಟ್ರೆಂಡ್ಸ್ ಈ ವರ್ಷ ಸರ್ಚ್ ಆದ ಟಾಪ್ 10 ಸಿನಿಮಾಗಳ ಪಟ್ಟಿಯನ್ನು ರಿಲೀಸ್ ಮಾಡಿದೆ. ಈ ಪೈಕಿ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಸಿನಿಮಾಗಳು ಸ್ಥಾನ ಪಡೆದಿವೆ. ಕನ್ನಡದ ಯಾವುದೇ ಸಿನಿಮಾಗೂ ಸ್ಥಾನ ಸಿಕ್ಕಿಲ್ಲ. 

                 ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ  ಜನವರಿ 10ರಂದು ಶರಣ್ ಅಭಿನಯದ “ಛೂಮಂತರ್”

ಈ ವರ್ಷ ‘ಸ್ತ್ರೀ 2’ ಚಿತ್ರ ಅತಿ ಹೆಚ್ಚು ಸರ್ಚ್​ ಆದ ಭಾರತೀಯ ಸಿನಿಮಾಗಳಲ್ಲಿ ಒಂದು. ಈ ಸಿನಿಮಾ ಬಾಲಿವುಡ್ ಬಾಕ್ಸ್ ಆಫೀಸ್​ನಲ್ಲಿ 600 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಚಿತ್ರ ಅತಿ ಹೆಚ್ಚು ಸರ್ಚ್ ಆದ ಸಿನಿಮಾಗಳಲ್ಲಿ ಮೊದಲ ಸ್ಥಾನದಲ್ಲಿ ಇದೆ. ಈ ಚಿತ್ರದಲ್ಲಿ ಶ್ರದ್ಧಾ ಕಪೂರ್, ರಾಜ್​ಕುಮಾರ್ ರಾವ್, ಪಂಕಜ್ ತ್ರಿಪಾಠಿ ಮೊದಲಾದವರು ನಟಿಸಿದ್ದಾರೆ. ಎರಡನೇ ಸ್ಥಾನದಲ್ಲಿ ‘ಕಲ್ಕಿ 2898 ಎಡಿ’ ಚಿತ್ರ ಇದೆ. ಈ ಸಿನಿಮಾದಲ್ಲಿ ದೊಡ್ಡ ಕಲಾವಿದರ ದಂಡೇ ಇದೆ. ಹಿಂದಿ ಹಾಗೂ ಟಾಲಿವುಡ್ ಕಲಾವಿದರು ಈ ಸಿನಿಮಾದಲ್ಲಿ ಇದ್ದಾರೆ. ಪ್ರಭಾಸ್, ಅಮಿತಾಭ್ ಬಚ್ಚನ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಆ ಬಳಿಕ ‘12th ಫೇಲ್’ ಸಿನಿಮಾ ಇದೆ. ಕಡಿಮೆ ಬಜೆಟ್​ನಲ್ಲಿ ಸಿದ್ಧವಾದ ಈ ಸಿನಿಮಾಗೆ ಮೂರನೇ ಸ್ಥಾನ ಸಿಕ್ಕಿದೆ.

 

ಈ ಬಾರಿ ಆಸ್ಕರ್ ಅವಾರ್ಡ್​ ರೇಸ್​ಗೆ ಭಾರತದಿಂದ ಅಧಿಕೃತವಾಗಿ ಆಯ್ಕೆಯಾದ ಸಿನಿಮಾ, ‘ಲಾಪತಾ ಲೇಡೀಸ್’. ಈ ಚಿತ್ರಕ್ಕೆ ನಾಲ್ಕನೇ ಸ್ಥಾನ ಸಿಕ್ಕಿದೆ. ತೆಲುಗಿನ ‘ಹನುಮಾನ್’ ಐದನೇ ಸ್ಥಾನ, ಕಾಲಿವುಡ್​ನ ಸೂಪರ್ ಹಿಟ್ ಚಿತ್ರ ‘ಮಹರಾಜ’ ಆರನೇ ಸ್ಥಾನ ಅಲಂಕರಿಸಿದೆ. ಮಲಯಾಳಂನ ‘ಮಂಜುಮ್ಮೇಲ್ ಬಾಯ್ಸ್​’ ಚಿತ್ರಕ್ಕೆ ಏಳನೇ ಸ್ಥಾನ, ದಳಪತಿ ವಿಜಯ್ ನಟನೆಯ ‘GOAT’ ಚಿತ್ರಕ್ಕೆ ಎಂಟನೇ ಸ್ಥಾನ ‘ಸಲಾರ್’ ಚಿತ್ರಕ್ಕೆ 9ನೇ ಸ್ಥಾನ, ‘ಆವೇಶಂ’ ಚಿತ್ರಕ್ಕೆ 10ನೇ ಸ್ಥಾನ ಸಿಕ್ಕಿದೆ. ಈ ಬಾರಿ ಹೆಚ್ಚು ಸರ್ಚ್ ಆದ ಬಹುತೇಕ ಸಿನಿಮಾಗಳು ದಕ್ಷಿಣ ಭಾರತದವು ಅನ್ನೋದು ವಿಶೇಷ. ಆದರೆ, ಇದರಲ್ಲಿ ಯಾವುದೇ ಕನ್ನಡದ ಸಿನಿಮಾಗಳು ಇಲ್ಲ ಎಂಬುದು ಬೇಸರದ ಸಂಗತಿ.

 

 

 

Share this post:

Translate »