Sandalwood Leading OnlineMedia

ಸಂಗೀತ ನಿರ್ದೇಶಕ ಗುರುಕಿರಣ್ ಮನೆಯಲ್ಲಿ ಕಳ್ಳತನ

ಬೆಂಗಳೂರು: ಸ್ಯಾಂಡಲ್ ವುಡ್ ನ ಜನಪ್ರಿಯ ಸಂಗೀತ ನಿರ್ದೇಶಕ ಗುರುಕಿರಣ್ ಮನೆಯಲ್ಲಿ ಕಳ‍್ಳತನವಾಗಿರುವ ವರದಿಯಾಗಿದೆ.ಗುರುಕಿರಣ್ ಮನೆಯಲ್ಲಿದ್ದ ಸುಮಾರು 2.5 ಲಕ್ಷ ರೂ. ಮೌಲ್ಯದ ಹಣ ಕಾಣೆಯಾಗಿದೆ ಎಂದು ಚಂದ್ರ ಲೇ ಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ಈ ಹಣ ಗುರುಕಿರಣ್ ಅವರ ಅತ್ತೆಗೆ ಸೇರಿದ್ದಾಗಿದೆ. ಆದರೆ ಮನೆಯಲ್ಲಿಟ್ಟಿದ್ದ ಹಣ ನಾಪತ್ತೆಯಾಗಿದೆ ಎಂದು ಗುರುಕಿರಣ್ ಅತ್ತೆ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಗುರುಕಿರಣ್ ಮನೆಗೆ ಕೆಲಸಕ್ಕೆ ಬರುತ್ತಿದ್ದ ಚಂದ್ರಮ್ಮ ಎಂಬಾಕೆಯ ಮೇಲೆ ಮನೆಯವರು ಅನುಮಾನ ಹೊಂದಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Share this post:

Related Posts

To Subscribe to our News Letter.

Translate »