Sandalwood Leading OnlineMedia

ಕನ್ನಡ ರಂಗಭೂಮಿಯಲ್ಲಿ  ಮೊಟ್ಟಮೊದಲ ಬಾರಿಗೆ ಇಮ್ಮೆರ್ಸಿವ್ ಥಿಯೇಟರ್ ಪ್ರೊಡಕ್ಷನ್ – IC47

ಇಮ್ಮರ್ಸಿವ್ ಥಿಯೇಟರ್ ಎನ್ನುವುದು ಪಶ್ಚಿಮದಲ್ಲಿ ಜನಪ್ರಿಯ ರಂಗ ಪ್ರಕಾರವಾಗಿದೆ . ಕನ್ನಡ ರಂಗಭೂಮಿಯಲ್ಲಿ ಈ ಪ್ರಕಾರದ ಹೆಚ್ಚಿನ ಪ್ರಯತ್ನಗಳು ನಡೆದಿಲ್ಲ. ಥೆಮಾ ಥಿಯೇಟರ್ ಕಂಪನಿಯ IC 47 ನಾಟಕವು  ಕನ್ನಡ ರಂಗ ಭೂಮಿಯಲ್ಲಿ ಈ ಪ್ರಕಾರದ  ಹೊಸ ಪ್ರಯತ್ನವಾಗಿದೆ. ಪ್ರೇಕ್ಷಕರು ಮತ್ತು ಕಲಾವಿದರನ್ನು  ಬೇರ್ಪಡಿಸುವ “ನಾಲ್ಕನೇ ಗೋಡೆ” ಯನ್ನು ಒಡೆಯುವ  ಮೂಲಕ ವಿನೂತನ ಅನುಭವವನ್ನು ನೀಡುತ್ತದೆ.

 

ವಿಭಿನ್ನ ಕಥಾಹಂದರದ “ಲೈನ್ ಮ್ಯಾನ್” ಚಿತ್ರಕ್ಕೆ ಚಾಮರಾಜನಗರದಲ್ಲಿ ಚಾಲನೆ‌.*

 

ಪ್ರೇಕ್ಷಕರು ನಾಟಕದಲ್ಲಿ ಸಕ್ರಿಯವಾಗಿ ಪಾಲ್ಗೊಂಡು , ಕಥೆ ಮತ್ತು ಭಾವನೆಗಳನ್ನು ಹೆಚ್ಚಾಗಿ ಅರ್ಥಿಸಿಕೊಳ್ಳುವಂತೆ ಮಾಡುವದು ಈ ಪ್ರಕಾರದ ಮೂಲ ಉದ್ದೇಶ. ಇದೇ ನಾಟಕದ ಹಿಂದಿನ ಪ್ರದರ್ಶನಗಳಿಗೆ  ಪ್ರೇಕ್ಷಕರ ಪ್ರತಿಕ್ರಿಯೆ ಅತ್ಯುತ್ತಮವಾಗಿತ್ತು. ಸಮಕಾಲೀನ ಕನ್ನಡ ರಂಗಭೂಮಿಯಲ್ಲಿ ಇದು ಅತ್ಯಂತ ಧೈರ್ಯಶಾಲಿ ಪ್ರಯತ್ನಗಳಲ್ಲಿ ಒಂದಾಗಿದೆ ಎಂಬುದು ಪ್ರೇಕ್ಷಕರ ಅಭಿಪ್ರಾಯ.

 

 

ದರ್ಶನ್ ಸಿನೆಮಾಗೆ ಆಯ್ಕೆಯಾಗಿರುವ ನಟಿ ಮಾಲಾಶ್ರೀ ಮಗಳ ವಯಸ್ಸು ಎಷ್ಟು ಗೊತ್ತೇ?

 

75 ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಥೆಮಾ  ಥಿಯೇಟರ್ ಕಂಪನಿಯು ಆಗಸ್ಟ್ 12, 13 ಮತ್ತು 14 ರಂದು ಆರು ಹೊಸ ಪ್ರದರ್ಶನಗಳನ್ನು ಹಮ್ಮಿಕೊಂಡಿದೆ. ಈ ನಾಟಕವನ್ನು ಕನ್ನಡ ರಂಗಭೂಮಿಯ ಖ್ಯಾತ ನಿರ್ದೇಶಕಿ ಹಾಗೂ ವಿಜಯನಗರ ಬಿಂಬದ ಪ್ರಾಂಶುಪಾಲರಾದ ಡಾಕ್ಟರ್ ಸುಷ್ಮಾ ಎಸ್ ವಿ ಅವರು ನಿರ್ದೇಶಿಸಿದ್ದಾರೆ  ಮತ್ತು ವಿಜಯನಗರ ಬಿಂಬದ ವಿದ್ಯಾರ್ಥಿ ಹಾಗು ಯುವ ಬರಹಗಾರ ಕೌಶಿಕ್ ಎಚ್ ಎ ಬರೆದಿದ್ದಾರೆ. ಕರ್ನಾಟಕ ನಾಟಕ ಅಕಾಡೆಮಿಯ ಅಧ್ಯಕ್ಷ ಭೀಮಸೇನ್ , ಬಾಬು ಹಿರಣಯ್ಯ, ಗುಂಡಣ್ಣ, ವಿಜಯಮ್ಮ, ಸುಚೇಂದ್ರ ಪ್ರಸಾದ್ ಮತ್ತು ಅಭಿಷೇಕ್ ಅಯ್ಯಂಗಾರ್ ಸೇರಿದಂತೆ ಜನಪ್ರಿಯ ರಂಗಕರ್ಮಿಗಳು ಭಾಗಿಯಾಗಲಿದ್ದಾರೆ.

 

Share this post:

Translate »