Hero Intro Theme Video | Gadayuddha Movie | Sumit | Danya Patil |
ಪ್ರಪಂಚದಲ್ಲಿ ಭೂತಪ್ರೇತಗಳು ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ವಾಮಾಚಾರ ಎನ್ನುವುದು ಮಾತ್ರ ಇಂದಿಗೂ ಜೀವಂತವಾಗಿದೆ. ಕೇವಲ ವೈಯಕ್ತಿಕ ದ್ವೇಷ, ಧನದಾಹದಿಂದ ಮನುಷ್ಯ ರನ್ನು ಕೊಲ್ಲುವುದಕ್ಕಾಗಿ ಇದನ್ನು ಬಳಸಿಕೊಳ್ಳಲಾಗುತ್ತಿದೆ. ಇದೇ ವಿಷಯ ಇಟ್ಟುಕೊಂಡು ಚಲನಚಿತ್ರವೊಂದು ನಿರ್ಮಾಣವಾಗಿದೆ. ಆ ಚಿತ್ರದ ಹೆಸರು ಗಧಾಯುದ್ದ. ನಾಯಕನ ರೂಪದಲ್ಲಿ ಮರುಜನ್ಮ ತಳೆದ ಭೀಮ ಗದಾಯುದ್ದದ ಮೂಲಕ ಹೇಗೆ ಇಂಥವಾಮಾಚಾರಿಗಳನ್ನು ಸಂಹರಿಸುತ್ತಾನೆ ಎನ್ನುವುದೇ ಈ ಚಿತ್ರದ ಸಾರಾಂಶ. ಹಿಂದೆ ಮೃಗಶಿರ ಎಂಬ ಚಿತ್ರ ನಿರ್ದೇಶಿಸಿದ್ದ ಶ್ರೀವತ್ಸ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನೆರವೇರಿತು. ವಿ.ಮನೋಹರ್, ಹೆಚ್. ವಾಸು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು.
ಬೆಳಗಾವಿ ಮೂಲದ ನಿತಿನ್ ಶಿರಗುರ್ ಕರ್ ಅವರ ನಿರ್ಮಾಣದ ಈ ಚಿತ್ರದಲ್ಲಿ ಅವರ ಪುತ್ರ ಸುಮಿತ್ ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಧನ್ಯ ಪಾಟೀಲ್ ನಾಯಕಿಯಾಗಿದ್ದು, ಡ್ಯಾನಿ ಕುಟ್ಟಪ್ಪ ವಾಮಾಚಾರಿಯಾಗಿ ನಟಿಸಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ನಿರ್ಮಾಪಕರು ನಾನೊಬ್ಬ ಕಂಟ್ರಾಕ್ಟರ್. ಕ್ರಿಕೆಟಿಗ ಕೂಡಾ, ಚಿಕ್ಕಂದಿನಿಂದ ಸಿನಿಮಾ ನೋಡೋ ಹುಚ್ಚಿತ್ತು. ಮರಾಠಿಯಲ್ಲೇ ಸಾಕಷ್ಟು ಆಫರ್ ಬಂದರೂ, ಕನ್ನಡ ಚಿತ್ರವನ್ನೇ ಮಾಡಬೇಕೆಂದು ಈ ಸಿನಿಮಾ ಕೈಗೆತ್ತಿಕೊಂಡು ಐದು ಭಾಷೆಗಳಲ್ಲಿ ರಿಲೀಸ್ ಮಾಡುತ್ತಿದ್ದೇನೆ ಎಂದರು.ನಿರ್ದೇಶಕ ಶ್ರೀವತ್ಸ ಮಾತನಾಡಿ ಪ್ರತಿದಿನ ಹಲವಾರು ಆತ್ಮಹತ್ಯೆ ಪ್ರಕರಣಗಳು ನಡೆಯುತ್ತಿವೆ. ಅದರಲ್ಲಿ ಬಹುತೇಕ ಪ್ರಕರಣಗಳು ಕೊಲೆ ಎನ್ನುವುದು ಪ್ರೂವ್ ಆಗಿದೆ. ಅವುಗಳ ಹಿಂದೆ ವಾಮಾಚಾರದ ಪ್ರೇರಣೆಯಿರುತ್ತದೆ. ಇದೇ ಕಂಟೆಂಟ್ ಇಟ್ಟುಕೊಂಡು ಸೈನ್ಸ್ ಫಿಕ್ಷನ್ ಚಿತ್ರ ಮಾಡಿದ್ದೇನೆ. ಹಿಂದೆ ನಡೆದ ಪೌರಾಣಿಕ ಘಟನೆ ಹಾಗೂ ಈಗಿನ ಕಥೆಯನ್ನಿಟ್ಟುಕೊಂಡು ಗದಾಯುದ್ದ ಮಾಡಿದ್ದೇನೆ.
`ದಿ ಚೆಕ್‌ಮೇಟ್’; ಬ್ರೇಕಪ್‌ಪಾರ್ಟಿ ಕಥೆ
ಮೊದಲು ನಾಯಕನ ಪಾತ್ರವನ್ನು ಚಿರಂಜೀವಿ ಸರ್ಜಾ ಅವರೇ ಮಾಡಬೇಕಿತ್ತು. ಅವರಿಗೆ ಪಾತ್ರ ಹೇಳಿ ಒಪ್ಪಿಯೂ ಆಗಿತ್ತು. ಚೆಕ್ ನೀಡಲು ಅವರ ಮನೆಗೆ ಹೋದಾಗ ನಿರ್ಮಾಪಕರೆಲ್ಲಿ ಎಂದರು ಮನೆಯಲ್ಲಿ ಪೂಜೆ ಇಟ್ಟುಕೊಂಡಿದ್ದರಿಂದ ಬಂದಿಲ್ಲವೆಂದು ಅವರ ಫೋಟೋ ತೋರಿಸಿದೆ. ಅವರ ಜೊತೆಗಿದ್ದ ಸುಮಿತ್ ನೋಡಿ ನಾಯಕನ ಪಾತ್ರವನ್ನು ಇವರಕೈಲೇ ಮಾಡಿಸಿ, ನಾನು ಆಂಜನೇಯನ ಪಾತ್ರ ಸೆಂ ಭಾವನೆ ತೆಗೆದುಕೊಳ್ಳದೆ ಮಾಡುತ್ತೇನೆಂದು ಚೆಕ್ ವಾಪಸ್ ಮಾಡಿದ್ದರು. ಅ ಪಾತ್ರವನ್ನು ಗ್ರಾಫಿಕ್ಸ್ ನಲ್ಲೇ ಮಾಡಿದ್ದೇವೆ.ಚಿತ್ರ ಸೆನ್ಸಾರ್ ಹಂತದಲ್ಲಿದ್ದು ಇನ್ನೆರಡು ತಿಂಗಳಲ್ಲಿ ರಿಲೀಸ್ ಮಾಡುತ್ತೇವೆಂದರು. ಸಂಗೀತ ನಿರ್ದೇಶಕ ಸಾಲೋಮನ್ ರ ಸಂಗೀತ, ಸುರೇಶಬಾಬು ಅವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಐಶ್ವರ್ಯ ಸಿಂದೋಗಿ ಬಹುಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸ್ಪರ್ಷ ರೇಖಾ, ಶರತ್ ಲೋಹಿತಾಶ್ವ, ಯತಿರಾಜ್ ಅಲ್ಲದೆ ಸತ್ಯಜಿತ್, ಶಿವರಾಮಣ್ಣ ಅವರ ಅಭಿನಯದ ಕೊನೇ ಚಿತ್ರವೂ ಹೌದು.