ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನೇ ಹೋಲುವ ಝಲಕ್ ಒಳಗೊಂಡ ಸಿಂಹಗುಹೆ ಚಿತ್ರದ ಟೀಸರ್ ಇದೀಗ ಭಾರೀ ಸದ್ದು ಮಾಡುತ್ತಿದೆ. ಅಶ್ಲೀಲ ವಿಡಿಯೋ ಪ್ರಕರಣ, ಪೆನ್ ಡ್ರೈವ್ ನಂಥ ವಿಚಾರಗಳೂ ಈ ಟೀಸರ್ ನಲ್ಲಿದೆ. ಈಗಾಗಲೇ ಬಿಡುಗಡೆಯಾದ ಈ ಟೀಸರ್ ಹಲವಾರು ಪ್ರಶ್ನೆ ಹಾಗು ಕುತೂಹಲ ಹುಟ್ಟು ಹಾಕಿದೆ.
ಸಮರ್ಥ, ತಾಜಾ ಚಿತ್ರಗಳ ನಂತರ ಎಸ್.ಜಿ.ಆರ್. ಅವರ ನಿರ್ದೇಶನದಲ್ಲಿ ಮೂಡಿ ಬಂದಿರುವ ಸಿಂಹಗುಹೆ ಚಿತ್ರದ ಟೀಸರ್ ಸದ್ಯ ಒಂದಷ್ಟು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.
ಇದನ್ನೂ ಓದಿ :ಸಲ್ಮಾನ್ ಖಾನ್ ಮೇಲೆ ಯಾಕಿಷ್ಟು ದ್ವೇಷ : ಅವರ ಹತ್ಯೆ ಪ್ರಕರಣದಲ್ಲಿ ಕೇಳಿ ಬಂತು ಹೊಸ ಹೆಸರು..!
ನಿರ್ದೇಶಕ ಎಸ್‌ಜಿಆರ್ ಮಾತನಾಡಿ, ಸಸ್ಪೆನ್ಸ್, ಕ್ರೈಂ, ಮರ್ಡರ್ ಮಿಸ್ಟ್ರಿ ಕಥೆ ಇರುವ ನಮ್ಮ ಚಿತ್ರದಲ್ಲಿ ಹೊರಗಡೆ ನಡೆಯುತ್ತಿರುವ ವಿಚಾರಗಳೇ ಇರಬಹುದು ಎನಿಸಿದರೂ ಅದು ಕಾಕತಾಳೀಯ. ವರ್ಷದ ಹಿಂದೆಯೇ ನಮ್ಮ ಚಿತ್ರ ಸೆನ್ಸಾರರ ಆಗಿತ್ತು. ಹೀರೋನೇ ಅಂಥಾ ವಿಡಿಯೋ ಮಾಡ್ತಾನಾ;? ಯಾರು ಯಾಕೆ ಮಾಡ್ತಾನೆ ಅನ್ನೋದೇ ಸಸ್ಪೆನ್ಸ್.
ಇನ್ನು ಅನೇಕ ವಿಚಾರಗಳು ಚಿತ್ರದಲ್ಲಿವೆ. ಸಮಾಜದಲ್ಲಿ ಹೇಗಿರಬೇಕು, ಹೇಗಿರಬಾರದು ಅಂತ ಮೆಸೇಜ್ ಹೇಳಿದ್ದೇವೆ. ಮೊಬೈಲ್ ನಿಂದ ಏನೇನಾಗುತ್ತೆ ಅನ್ನೋದೂ ಚಿತ್ರದಲ್ಲಿದೆ.
ಹಾಸನ, ಸಕಲೇಶಪುರ, ಮೂಡಿಗೆರೆ ಸುತ್ತಮುತ್ತ ಚಿತ್ರದ ಚಿತ್ರೀಕರಣ ನಡೆಸಿದ್ದೇವೆ. ಚಿತ್ರವೀಗ ಬಿಡುಗಡೆಗೆ ರೆಡಿ ಇದ್ದು, ಜೂನ್ ವೇಳೆಗೆ ರಿಲೀಸ್ ಮಾಡುವ ಪ್ಲಾನಿದೆ ಎಂದು ಹೇಳಿದರು.
ಸಹ ನಿರ್ಮಾಪಕ ಕೃಷ್ಣ ಮಾತನಾಡಿ, ಡೈರೆಕ್ಟರ್ ಬಂದು ಒಂಟಿ ಮನೆಯಲ್ಲಿ ಈ ಥರ ನಡೆಯುತ್ತೆ ಅಂತ ಹೇಳಿದರು. ಕಥೆ ಇಂಟರೆಸ್ಟಿಂಗ್ ಆಗಿದೆ ಅಂತ ನಿರ್ಮಾಣಕ್ಕೆ ಮುಂದಾದೆವು ಎಂದರು.
ಸಂಗೀತ ನಿರ್ದೇಶಕ ಸತೀಶ್ ಆರ್ಯನ್ ಮಾತನಾಡಿ, ನಾನು ಚಿತ್ರದ ಸಾಂಗ್, ಆರ್.ಆರ್. ಮಾಡಿದ್ದೇನೆ. ನಾನೂ ಸಹ ೨
2 ಹಾಡುಗಳನ್ನು ಹಾಡಿದ್ದೇನೆ. ಈಗಾಗಲೇ ರಿಲೀಸ್ ಆಗಿರುವ ಸಾಂಗ್ ವೈರಲ್ ಆಗಿದೆ ಎಂದರು.
ನಟಿ ಅನುರಾಧಾ ಮಾತನಾಡಿ, ಈವರೆಗೆ ಸಣ್ಣಪುಟ್ಟ ರೋಲ್ ಮಾಡಿಕೊಂಡಿದ್ದೆ. ಇದೇ ಫಸ್ಟ್ ಟೈಂ ಸೆಕೆಂಡ್ ಲೀಡ್ ಮಾಡಿದ್ದೇನೆ. ಹಳ್ಳಿ ಹುಡುಗಿ ನಾಯಕನ ಲವರ್ ಪಾತ್ರ ಎಂದರು.
ನಾಯಕ ರವಿ ಶಿರೂರ್ ಅವರು ಅಭಿನಯದೊಂದಿಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.
ನಿವಿಶ್ಕಾ ಪಾಟೀಲ್ ಚಿತ್ರದ ನಾಯಕಿ,
ಎ.ಸಿ. ಮಹೇಂದರ್ ಅವರ ಛಾಯಾಗ್ರಹಣ, ಶಿವನಂಜೇಗೌಡ ಅವರ ಸಾಹಿತ್ಯ, ಸೈ ರಮೇಶ್ ಅವರ ಕೊರಿಯೋಗ್ರಫಿ ಈ ಚಿತ್ರಕ್ಕಿದೆ,