ನಟರಾಗಿ, ಗಾಯಕರಾಗಿ, ಕವಿಯಾಗಿ, ಬರಹಗಾರರಾಗಿ ಗುರುತಿಸಿಕೊಂಡಿರುವ ಬಹುಮುಖ ಪ್ರತಿಭೆಯ ಕಲೀಮ್ ಪಾಷ, ಈಗ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಅವರು ‘ದಿ ಸೂಟ್’ ಎನ್ನುವ ಚಿತ್ರದಲ್ಲಿ ನಟಿಸಿದ್ದು, ಮಾಲತಿ ಗೌಡ ನಿರ್ಮಿಸಿರುವ ಈ ಚಿತ್ರವನ್ನು ಭಗತ್ ರಾಜ್ ನಿರ್ದೇಶನ ಮಾಡಿದ್ದಾರೆ.
ಇದನ್ನೂ ಓದಿ ಜನವರಿ 12 ರಂದು ಬಿಡುಗಡೆಯಾಗಲಿದೆ ಬಹು ನಿರೀಕ್ಷಿತ “BAD” ಚಿತ್ರದ ಟ್ರೇಲರ್
ಜೀವನದ ಹಲವು ಮುಖಗಳನ್ನು ಮತ್ತು ಭಾವನೆಗಳನ್ನು ಹಿಡಿದಿಡುವ ‘ದಿ ಸೂಟ್’ ಚಿತ್ರದಲ್ಲಿ ಕಲೀಮ್ ಪಾಷ ಅವರು ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ಕಲೀಮ್ ಅವರು ತಮ್ಮ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಿದ್ದು, ಮುಂದಿನ ದಿನಗಳಲ್ಲಿ ಉದಯೋನ್ಮುಖ ನಟರಿಗೆ ಮಾದರಿಯಾಗಲಿದ್ದಾರೆ ಎಂದು ಚಿತ್ರತಂಡದವರು ಅಭಿಪ್ರಾಯಪಟ್ಟಿದ್ದಾರೆ.
ಚಿತ್ರರಂಗಕ್ಕೆ ಹಲವು ನಟರು ಬಂದು ಹೋಗಿದ್ದಾರೆ. ಆದರೆ, ಕೆಲವರು ಮಾತ್ರ ಇಲ್ಲಿ ನೆಲೆಯೂರುವುದಕ್ಕೆ ಸಾಧ್ಯವಾಗಿದೆ. ಅದಕ್ಕೆ ಕಾರಣ ಅಭಿನಯ. ಕಲೀಂ ಪಾಷ ಅವರ ಪಾತ್ರ ಸಹ ಚಿತ್ರದ ಒಂದು ಹೈಲೈಟ್ ಆಗಿದ್ದು, ಚಿತ್ರ ನೋಡುವ ಪ್ರೇಕ್ಷಕರಿಗೆ ಅವರು ಹಲವು ದಿಗ್ಗಜ ನಟರನ್ನು ತಮ್ಮ ಅಭಿನಯದಿಂದ ನೆನಪಿಸುತ್ತಾರೆ ಎಂದು ಚಿತ್ರತಂಡದವರು ಹೇಳುತ್ತಾರೆ.
‘ದಿ ಸೂಟ್’ ಚಿತ್ರವು 2024ರ ಜನವರಿಯಲ್ಲಿ ಬಿಡುಗಡೆ ಆಗುತ್ತಿದೆ.