Naguvina Odeya | Dr. Puneeth Rajkumar | A Tribute Song
ಶಿವೋಹಂ ಎಂಟರ್‌ಟೈರ‍್ಸ್ ತಂಡದ ಕಡೆಯಿಂದ ಡಾ.ಪುನೀತ್‌ರಾಜ್‌ಕುಮಾರ್‌ರವರಿಗೆ ಒಂದು ಅಧ್ಬುತ ಸಾಂಗ್ ಡೆಡಿಕೇಟ್ ಮಾಡಿದ್ದು, ಎಲ್ಲಾಕಡೆಯಿಂದ ಅದ್ಭುತ ಪ್ರಶಂಸೆ ಪಡೆಯುತ್ತಿದೆ. ಈ ಸಾಂಗ್ ಅನ್ನು ವೇದಾಂತಚಾರಿಯವರು ತಮ್ಮ ವಿ-ಟ್ರಸ್ಟ್ ವತಿಯಿಂದ ನಿರ್ಮಾಣ ಮಾಡಿದ್ದು, ಎಸ್.ವಿ.ಚಂದ್ರರವರ ನಿರ್ದೇಶನದಲ್ಲಿ ಗೀತೆ ಮೂಡಿ ಬಂದಿದೆ.
‘ವಿಕಿಪೀಡಿಯ’ ಮೂಲಕ ಮೊದಲ ಹೆಜ್ಜೆಯಲ್ಲಿಯೇ ಯಶಸ್ಸು ಕಂಡ ಯಶವಂತ್
ಡಾ.ಶಿವರಾಜ್ ಕುಮಾರ್‌ರವರು ಸಾಂಗ್ ನೋಡಿ ಮೆಚ್ಚಿಕೊಂಡಿದ್ದು, ಸಾಂಗ್‌ನಲ್ಲಿ ಇರುವ ಕೆಲವು ಅದ್ಭುತ ವಿಶಯಗಳ ಬಗ್ಗೆ ಪ್ರತ್ಯೇಕವಾಗಿ ಮಾತನಾಡಿ ತಂಡಕ್ಕೆ ಶುಭಕೋರಿದ್ದು ವಿಶೇಷವಾಗಿತ್ತು. ಇನ್ನು, ಕನ್ನಡ ಕೋಗಿಲೆ ಖ್ಯಾತಿಯ ದೇಸಿ ಮೋಹನ್‌ರವರ ಸಂಗೀತ, ಶ್ರೇಯಸ್&ಚಂದನ್ರ ಸಾಹಿತ್ಯ&ಗಾಯನ, ಸುನಿಲ್ ಹೊನ್ನಳಿಯವರ ಆಕರ್ಷಕ ಛಾಯಾಗ್ರಹಣ, ಮಧುಕುಮಾರ್ ಅವರ ಕೊರಿಯೋಗ್ರಫಿ, ಎಸ್.ವಿ.ಚಂದ್ರರವರ ಸಂಕಲನ, ನಾಗರಾಜ್ ಹುಲಿವನ ರವರ ಮಿಕ್ಸಿಂಗ್& ಮಾಸ್ಟರಿಂಗ್ ಕೆಲಸ ಅದ್ಭತವಾಗಿ ಮೂಡಿ ಬಂದಿದೆ.
ಗೌರಿಹಬ್ಬದಂದು ಬಿಡುಗಡೆ ಆಯ್ತು “ಲಂಕಾಸುರ” ನ ಸ್ಪೆಶಲ್ ಹಾಡು
ತಂಡದ ಕಲಾವಿದರಾದ ತ್ವಿಷಾ, ಪ್ರಕಾಶ್, ತಾರುಷ್, ರಾಜ್ವೀರ್, ಶ್ರೇಯಸ್, ಚಂದನ್, ಎಸ್.ವಿ.ಚಂದ್ರ ಎಲ್ಲರೂ ಸಾಂಗ್‌ನಲ್ಲಿ ಕಾಣಿಸಿಕೊಂಡಿದ್ದು, ಡಾ.ಪುನೀತ್‌ರನ್ನು ಎಷ್ಟು ಇಷ್ಟ ಪಡುತ್ತಾರೆ ಎಂದು ಅವರ ಅಭಿನಯದಲ್ಲಿಕಾಣಬಹುದು.ಇನು ್ನಕೊನೆಯಲ್ಲಿ ನಿರ್ದೆಶಕರಾದ ಎಸ್. ವಿ.ಚಂದ್ರರವರು ಹೇಳಿರುವ ಮಾತುಗಳು ಮನ ಮುಟ್ಟುವಂತಿವೆ. ಶಿವೋಹಂ ಎಂಟರ್‌ಟೈರ‍್ಸ್ಯೂಟ್ಯೂಬ್‌ಚಾನೆಲ್ ನಲ್ಲಿ ಈಗಾಗಲೇ ಸಾಂಗ್ ರೀಲೀಸ್ ಆಗಿದ್ದು, ಪುನೀತ್ ಅಭಿಮಾನಿಗಳು ಇಡೀ ತಂಡದ ಅಪರೂಪದ ಪ್ರಯತ್ನನ್ನು ಮೆಚ್ಚಿಕೊಂಡಿದ್ದಾರೆ.