ಹರಿಚೇತ್ ಕಥೆ, ಚಿತ್ರಕಥೆ ಸಂಭಾಷಣೆ ಬರೆದು ನಿರ್ದೇಶಿಸಿರುವ, ನಿಮೀಶ್ ಸಾಗರ್, ರಶ್ಮಿತ ರೋಜ ಅಭಿನಯದ “ಮೊದಲ ಮಿಡಿತ” ಚಿತ್ರದ ಹಾಡು ಮತ್ತು ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಕಲಾವಿದರ ಸಂಘದ ಆವರಣದಲ್ಲಿ ನೆರವೆರಿತು.ಹಿರಿಯ ನಿರ್ದೇಶಕ ದೊರೆ ಭಗವಾನ್ , ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್ ಸೇರಿದಂತೆ ಅನೇಕರು ಹಾಜರಿದ್ದು ಚಿತ್ರಕ್ಕೆ ಶುಭ ಹಾರೈಸಿದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ “ಡವ್ ಮಾಸ್ಟರ್” ಚಿತ್ರದ ಟ್ರೇಲರ್ ಬಿಡುಗಡೆ
ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ಹರಿಚೇತ್, ೩ ವರ್ಷ ಮಾದ್ಯಮದಲ್ಲಿ ಕೆಲಸಮಾಡಿದೆ. ನನ್ನ ಫಸ್ಟ್ ಸಿನಿಮಾನ ಫ್ಯಾಮಿಲಿ ಆಡಿಯನ್ಸ್ ಯಾವುದೇ ಮುಜುಗರವಿಲ್ಲದೆ ಕುಳಿತು ನೋಡಬೇಕು ಎಂದು ಈ ಕಥೆ ರೆಡಿಮಾಡಿದೆ. ಆರಂಭದಲ್ಲಿ ಹಣಕಾಸಿನ ಸಮಸ್ಯೆ ಆದಾಗ ಬೆಂಬಲಕ್ಕೆ ನಿಂತವರು ನಿರ್ಮಾಪಕರಾದ ಕೃಷ್ಣಪ್ಪ ಗುಂಡಸಂದ್ರ, ಗಟ್ಟಹಳ್ಳಿ ವಿಶ್ವನಾಥ್. ಚಿತ್ರಕ್ಕೆ ಸೆನ್ಸಾರ್ ನಿಂದ ಯು/ಎ ಸಿಕ್ಕಿದ್ದು, ಡಿಸೆಂಬರ್ ನಲ್ಲಿ ಚಿತ್ರವನ್ನು ತೆರೆಗೆ ತರುವ ಯೋಚನೆ ಇದೆ. ಚಿತ್ರದಲ್ಲಿ ನಾಲ್ಕು ಆ್ಯಕ್ಷನ್, ನಾಲ್ಕು ಹಾಡುಗಳಿದ್ದು, ನೋಡುಗರ ಮನ ಮಿಡಿಯುವ ಪ್ರೇಮಕಥೆ, ತಂದೆ ಮಗನ ಬಾಂಧ್ಯವ್ಯ, ತಾಯಿ ಮಗನ ಮಮಕಾರ, ಹಾಸ್ಯದ ಸಿಂಚನ ಎಲ್ಲವೂ ಈ ಚಿತ್ರದಲ್ಲಿ ಅಡಕವಾಗಿದೆ ಎಂದರು.
ನವೆಂಬರ್ 26 ರಂದು ಬಿಡುಗಡೆಯಾಗಲಿದೆ ಬಹುನಿರೀಕ್ಷಿತ `ಇನಾಮ್ದಾರ್’ ಟೀಸರ್
ನಾಯಕಿ ರಶ್ಮಿತಾ ರೋಜಾ ಮಾತನಾಡಿ ಕನ್ನಡ ಇಂಡಸ್ಟ್ರಿ ಈಗ ತುಂಬಾ ಬೆಳೆದಿದೆ. ಇದೊಂದು ಫ್ಯಾಮಿಲಿ ಸಬ್ಜೆಕ್ಟ್, ಯೂಥ್ ಗೆ ಇಷ್ಡವಾಗುವ ಸಿನಿಮಾ,ಪ್ರಿಯಾ ಎಂಬ ಇನ್ನೋಸೆಂಟ್ ಹುಡುಗಿ ಎಂದರೆ, ನಾಯಕ ನಿಮೀಶ್ ಸಾಗರ್ ಮಾತನಾಡಿ, ರಾಹುಲ್ ಎಂಬ ಶ್ರೀಮಂತ ಮನೆತನದ ಹುಡುಗ. ಪ್ರೀತಿಗಾಗಿ ಏನೆಲ್ಲಾ ಹೋರಾಟ ಮಾಡ್ತಾನೆ, ಆ ಹೋರಾಟದಲ್ಲಿ ಏನೆಲ್ಲ ಆಗುತ್ತದೆ ಅನ್ನುವುದು ಚಿತ್ರದ ತಿರುಳು ಎಂದರು. ಹಾಸ್ಯ ಕಲಾವಿದ ಕೆಂಪೇಗೌಡ ಮಾತನಾಡುತ್ತ, ಒಳ್ಳೆಯ ಕಥೆ, ಕಾಲೇಜು ಸ್ಟೋರಿ, ಹೀರೋ ಸ್ನೇಹಿತನಾಗಿ ಕಾಣಿಸಿಕೊಂಡಿದ್ದೇನೆ ಎಂದರು.