Sandalwood Leading OnlineMedia

`ತಿಮ್ಮನ ಮೊಟ್ಟೆಗಳು’ ಚಿತ್ರೀಕರಣ ಮುಕ್ತಾಯ

ಆದರ್ಶ್ ಅಯ್ಯಂಗಾರ್ ಅವರ “ಶ್ರೀಕೃಷ್ಣ ಬ್ಯಾನರ್ ಅಡಿಯಲ್ಲಿ “ರಕ್ಷಿತ್ ತೀರ್ಥಹಳ್ಳಿ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ “ತಿಮ್ಮನ ಮೊಟ್ಟೆಗಳು ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ.ಶಿವಮೊಗ್ಗ ಮೂಲದ ಅಮೇರಿಕ ನಿವಾಸಿ ಆದರ್ಶ್ ಅಯ್ಯಂಗಾರ್ ಈ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಗಾಯಕರಾಗಿರುವ ಆದರ್ಶ್ ಅಯ್ಯಂಗಾರ್ ಈ ಮೊದಲು ತಮ್ಮ ಶ್ರೀಕೃಷ್ಣ ಪ್ರೊಡಕ್ಷನ್ಸ್ ಅಡಿಯಲ್ಲಿ ಉತ್ತಮ ಸಂದೇಶಗಳನ್ನೊಳಗೊಂಡ ವಿಡಿಯೋ ಹಾಡುಗಳನ್ನು ನಿರ್ಮಿಸಿ ಹಾಡಿದ್ದರು. ಇದೀಗ ಮೊದಲ ಬಾರಿಗೆ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಹೊಂಬಣ್ಣ ಎಂಬ ಚಿತ್ರ ನಿರ್ದೇಶಿಸಿದ್ದ ರಕ್ಷಿತ್ ತೀರ್ಥಹಳ್ಳಿ  “ಎಂಥಾ ಕಥೆ ಮಾರಾಯ ಎಂಬ ತಮ್ಮ ಎರಡನೆ ಚಿತ್ರದ ಬಿಡುಗಡೆಯ ಸನ್ನಾಹದಲ್ಲಿದ್ದಾರೆ.ಇದೀಗ “ಕಾಡಿನ ನೆಂಟರು  ಎಂಬ ತಮ್ಮ ಸ್ವರಚಿತ ಕಥಾ ಸಂಕಲನದಿಂದ ಒಂದು ಕಥೆಯನ್ನು ಆಯ್ದುಕೊಂಡು ಮೂರನೆ ಚಿತ್ರವಾಗಿ “ತಿಮ್ಮನ ಮೊಟ್ಟೆಗಳು ಚಿತ್ರೀಕರಣ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕಾರ್ಯದಲ್ಲಿ ತೊಡಗಿದ್ದಾರೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರು ಸುತ್ತಮುತ್ತಲೂ ಒಂದೇ ಹಂತದಲ್ಲಿ ಚಿತ್ರೀಕರಣ ಮುಗಿಸಿದ್ದು ಮಲೆನಾಡಿನ ಜೀವನ ಶೈಲಿ, ಪ್ರಕೃತಿ ಮತ್ತು ಮಾನವೀಯ ಮೌಲ್ಯಗಳನ್ನೊಳನ್ನು ಈ ಚಿತ್ರ ಒಳಗೊಂಡಿದೆ.

 

ಅಜಯ್ ರಾವ್ ನೂತನ ಸಿನಿಮಾಗೆ ‘ಯುದ್ಧಕಾಂಡ’ ಟೈಟಲ್ – ಮೊದಲ ಬಾರಿ ಲಾಯರ್ ಪಾತ್ರದಲ್ಲಿ ಅಜಯ್ ರಾವ್  

 

 

ತಿಮ್ಮನ ಮೊಟ್ಟೆಗಳು ತಾರಾಬಳಗದಲ್ಲಿ ಶೃಂಗೇರಿಯ ಕೇಶವ್ ಗುತ್ತಳಿಕೆ, ಸುಚೇಂದ್ರ ಪ್ರಸಾದ್, ಶೃಂಗೇರಿ ರಾಮಣ್ಣ, ಕಿರಿಕ್ ಪಾರ್ಟಿ ರಾಘು,ಆಶಿಕಾ ಸೋಮಶೇಕರ್, ಪ್ರಗತಿ, ವಿನಯ್ ಕಣಿವೆ,ಮಾಸ್ಟರ್ ಶ್ರೀಹರ್ಷ ಮುಂತಾದವರು ಅಭಿನಯಿಸಿದ್ದಾರೆ. ಪ್ರವೀಣ್ ಎಸ್ ಅವರ  ಛಾಯಾಗ್ರಹಣ ಹಾಗೂ ಹೇಮಂತ್ ಜೋಯಿಸ್ ಅವರ ಸಂಗೀತ ಚಿತ್ರಕ್ಕಿದೆ.

ಚಿತ್ರ    :      ತಿಮ್ಮನ ಮೊಟ್ಟೆಗಳು (“ಕಾಡಿನ ನೆಂಟರು ಪುಸ್ತಕ ಆಧಾರಿತ )

ಬ್ಯಾನರ್                 :       ಶ್ರೀಕೃಷ್ಣ ಪ್ರೊಡಕ್ಷನ್ಸ್

ನಿರ್ಮಾಪಕರು            :       ಆದರ್ಶ್ ಅಯ್ಯಂಗಾರ್

ರಚನೆ – ನಿರ್ದೇಶನ       :        ರಕ್ಷಿತ್ ತೀರ್ಥಹಳ್ಳ

 ಛಾಯಾಗ್ರಹಣ               :        ಪ್ರವೀಣ್ ಎಸ್

  ಸಂಗೀತ                    :       ಹೇಮಂತ್ ಜೋಯಿಸ್

  ತಾರಾಗಣ                    :       ಕೇಶವ್ ಗುತ್ತಳಿಕೆ,ಸುಚೇಂದ್ರ ಪ್ರಸಾದ್, ಶೃಂಗೇರಿ ರಾಮಣ್ಣ,

                                  ಕಿರಿಕ್ ಪಾರ್ಟಿ ರಾಘು,ಆಶಿಕಾ ಸೋಮಶೇಕರ್, ಪ್ರಗತಿ,     

                                 ಮಾಸ್ಟರ್ ಶ್ರೀಹರ್ಷ, ವಿನಯ್ ಕಣಿವೆ

 

Share this post:

Related Posts

To Subscribe to our News Letter.

Translate »