Left Ad
ಪ್ರಚಾರವಿಲ್ಲದೆಯೇ ಗೆಲ್ಲುವ ಗುಟ್ಟು! - Chittara news
# Tags

ಪ್ರಚಾರವಿಲ್ಲದೆಯೇ ಗೆಲ್ಲುವ ಗುಟ್ಟು!

ಭಾನುವಾರ ಮಾಲ್ ಒಂದರಲ್ಲಿದ್ದೆ. ಒಂದು ಕುಟುಂಬ , ಸಿನಿಮಾ ಗಲ್ಲಾಪೆಟ್ಟಿಗೆಯ ಬಳಿ ಬಂದು ಚರ್ಚೆಗೆ ತೊಡಗಿದರು. ಮಕ್ಕಳು ಅಲ್ಲಿದ್ದ ಕ್ಯಾಪ್ಟನ್ ಅಮೇರಿಕ ನೋಡಬೇಕೆಂದವು. ಆದರೆ ಅವರು
ತಂದೇಲ್ ಸಿನಿಮಾಕ್ಕೆ ಬಂದದ್ದು ಎಂದುಗೊತ್ತಾಯಿತು ಅಲ್ಲಿ ಬಂದಾದ ಮೇಲೆ ಮಕ್ಕಳು ಕ್ಯಾಪ್ಟನ್ ಅಮೇರಿಕಾ ಗೆ ಹಠ ಹಿಡಿದವು. ಅದು ಈ ವಾರ ಬಿಡುಗಡೆ ಇಲ್ಲ ಎಂಬುದು ಗೊತ್ತಾದಮೇಲೆ
ತಂದೇಲ್ ಗೆ ಟಿಕೆಟ್ ತೆಗೆದುಕೊಂಡರು. ಹಾಗೆ ನೋಡಿದರೆ ಈ ವಾರ 8 ಕನ್ನಡ ಸಿನಿಮಾಗಳು ಮತ್ತು ತಮಿಳಿನ ವಿಡಾಮುಯಾರ್ಚಿ ಯಲ್ಲಿ ಕಳೆದುಹೋಗಿದ್ದ ನನಗೆ ತಂದೇಲ್ ಮುಖ್ಯವಾಹಿನಿಯ ಸಿನಿಮಾ ಎಂದೆನಿಸಿರಲಿಲ್ಲ.  ತಂದೇಲ್ ನಾಗಚೈತನ್ಯ ಅಭಿನಯದ ಚಿತ್ರವಾದರೂ ಅಂತಹ ದೊಡ್ಡ ಸಿನಿಮಾ ಅಲ್ಲ. ಅಥವಾ ನಾಗಚೈತನ್ಯ ನಮ್ಮವರೆಗೂ ತಲುಪಿರುವ ಸ್ಟಾರ್ ಅಲ್ಲ ಎಂದೇ ತಿಳಿದುಕೊಂಡಿದ್ದೆ. ಆದರೆ ಅದರ ಪ್ರದರ್ಶನಗಳ ಸಂಖ್ಯೆ ನೋಡಿ ಕಳೆದುಹೋಗಿದ್ದೆ. ನಮ್ಮ ಕನ್ನಡದ ಒಂಭತ್ತು ಸಿನಿಮಾಗಳಿಗೆ ಸಿಕ್ಕ ಪರದೆಗಳಿಗೂ ದುಪ್ಪಟ್ಟು ಪರದೆ ಆ ಸಿನಿಮಾಕ್ಕೆ ಸಿಕ್ಕಿದೆ.
ಟಿಕೆಟ್ ಕೌಂಟರ್ ನಲ್ಲಿ ವಿಚಾರಿಸಿದಾಗ ತಂದೇಲ್ ಕಲೆಕ್ಷನ್ ಚೆನ್ನಾಗಿದೆ (ನಿನ್ನೆಯ ಮಟ್ಟಿಗೆ ) ಎನ್ನುವ ಸುದ್ದಿ ಬಂದಿತು.
 
 
ತಂದೇಲ್ ಚಿತ್ರದವರು ಕರ್ನಾಟಕದಲ್ಲಿ ಪತ್ರಿಕಾಗೋಷ್ಠಿ ಮಾಡಿಲ್ಲ, .. ಗೋಡೆ ಗೋಡೆಗಳಲ್ಲಿ ಪೋಸ್ಟರ್ ಅಂಟಿಸಿಲ್ಲ … ದಿನಪತ್ರಿಕೆಗಳಿಗೆ ಲಕ್ಷಾಂತರ ಖರ್ಚು ಮಾಡಿ ಜಾಹೀರಾತು ಕೊಟ್ಟಿಲ್ಲ ….
ಕರ್ನಾಟಕದ ಯು ಟ್ಯೂಬ್ , ಸುದ್ದಿವಾಹಿನಿಗಳಿಗೆ ಹಣ ಕೊಟ್ಟು ಪ್ಯಾಕೇಜ್ ತೆಗೆದುಕೊಂಡಿಲ್ಲ …. ಟ್ರೋಲ್ ಪೇಜ್ , ಸಿನಿಮಾ ಪೇಜ್ ಗಳ ಸಹವಾಸಕ್ಕೆ ಹೋಗಿಲ್ಲ … ಹಾಗೆಯೇ ತಂದೇಲ್ pan india ಸಿನಿಮಾ ಅಲ್ಲ , ತುಂಬಾ ಚೆನ್ನಾಗಿದೆ ಎನ್ನುವ ವಿಮರ್ಶೆ,. ಬಾಯ್ಮಾತಿನ ಪ್ರಚಾರವೂ ಇಲ್ಲ … ಆದರೂ ನೂರಾರುಗಟ್ಟಲೆ ಪರದೆಗಳಲ್ಲಿ ಬಿಡುಗಡೆ ಮಾಡುವ ಧೈರ್ಯ ಸಿನಿಮಾದ ಕಂಟೆಂಟ್ ಗಿಂತ ಹೆಚ್ಚಾಗಿ ಇಲ್ಲಿನ ತೆಲುಗರ ಮೇಲಿನ ವಿಶ್ವಾಸ , ಹೇಗಿದ್ದರೂ ನಮ್ಮ ಸಿನಿಮಾ ಎಂದು ಅವರು ತೋರಿಸುವ ಅಭಿಮಾನ ಎನಿಸುತ್ತದೆ. ಅಂದ ಹಾಗೆ ನೀವ್ ನೋಡಿದ್ದೀರಾ ?
 
Spread the love
Translate »
Right Ad