ಸ್ಯಾಂಡಲ್ ವುಡ್ ಅಂಗಳದಲ್ಲಿ ಸದ್ದಿಲ್ಲದೇ ಸಿದ್ದವಾಗಿರೋ ಹೊಸ ಸಿನ್ಮಾ ದ ರೂಲರ್ಸ್. ಟೈಟಲ್ ನಡಿಯಲ್ಲಿ Power of Constitution ಅನ್ನೋ ಅಡಿ ಬರಹವನ್ನಿಟ್ಟಿರೋ ಈ ಸಿನಿಮಾದ ಟೀಸರ್ ಹೊಸ ವರ್ಷದ ಮೊದಲ ದಿನ ಎ2 ಮ್ಯೂಸಕ್ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಿತ್ತು.
ಇದೀಗ ನಾಲ್ಕೇ ದಿನದಲ್ಲೇ ಒಂದು ಮಿಲಿಯನ್ ಜನರನ್ನ ಈ ಟೀಸರ್ ಸೆಳೆದಿದ್ದು, ರಾಜ್ಯದಾದ್ಯಂತ ಸಿನಿಪ್ರಿಯರಿಂದ ಪ್ರಶಂಸೆಯ ಪ್ರತಿಕ್ರಿಯೆಗಳು ಮತ್ತು ಅಭಿನಂದನೆಯ ಕಮೆಂಟ್ ಗಳು ಬಂದಿವೆ. ಈ ವಿಚಾರವಾಗಿ ಪತ್ರಿಕಾಗೋಷ್ಠಿ ಕರೆದಿದ್ದ ಚಿತ್ರತಂಡ. ದ ರೂಲರ್ಸ್ ಚಿತ್ರದ ಅಪ್ಡೇಟ್ ಜೊತೆಗೆ ಚಿತ್ರದ ವಿಶೇಷತೆಗಳನ್ನ ಹಂಚಿಕೊಂಡಿದ್ದಾರೆ.
ದ ರೂಲರ್ಸ್ ನೈಜ ಘಟನೆಗಳನ್ನಾಧರಿಸಿ ಮಾಡಿರೋ ಚಿತ್ರ. ಕೋಲಾರ ಜಿಲ್ಲೆಯಲ್ಲಿ ನಡೆದಿರೋ,ನಡೆಯುತ್ತಿರೋ ಘಟನಾವಳಿಗಳನ್ನಾಧರಿಸಿ ಮಾಡಿರೋ ಕಥೆ. ಸಂವಿಧಾನವೊಂದು ಆಸರೆ ಮತ್ತು ಶಕ್ತಿ ಎಂಥಹದ್ದು, ಅದು ಭಾರತೀಯ ಪ್ರಜ್ಞೆಗೆ ಕೊಟ್ಟಿರೋ ಶಕ್ತಿ ಎಂಥಹದ್ದು ಅನ್ನೋ ವಿಚಾರವನ್ನ ಮೂಲವಾಗಿಸಿಕೊಂಡು ದ ರೂಲರ್ಸ್ ಚಿತ್ರವನ್ನ ಮಾಡಲಾಗಿದೆ.
ಇಲ್ಲಿ ಮೇಲೂ ಕೀಳು ಅನ್ನೋ ಸಮುದಾಯಗಳ ಸಂಘರ್ಷದಿ ಮರೆಯಾದ ಮಾನವೀಯತೆಯನ್ನ ಒಂದು ಕಡೆ ಬಂಬಿಸಿದ್ರೆ, ಮತ್ತೊಂದು ಕಡೆ ಸಂವಿಧಾನ ಕೊಟ್ಟಿರೋ ಸಮಾನತೆಯ ಹಕ್ಕನ್ನ ಪ್ರತಿಪಾದಿಸೋ, ಅದ್ರ ಶಕ್ತಿಯನ್ನ ಪ್ರದರ್ಶಿಸೋ ಮತ್ತೊಂದು ಮಜಲನ್ನ ಅನಾವರಣಗೊಳಿಸಿದ್ದಾರಂತೆ.