Sandalwood Leading OnlineMedia

ಜನವರಿ 31ರಿಂದ ರಾಜ್ಯಾದ್ಯಂತ “ರಾವುತ”ನ ಓಟ ಶುರು .

 

ಶ್ರೀ ವಿಶ್ವಕರ್ಮ ಸಿನಿಮಾಸ್ ನಿರ್ಮಾಣದ ರಾವುತ ಚಿತ್ರವು ಒಂದು ವಿಭಿನ್ನ ಪ್ರಯತ್ನದ ಸಿನಿಮಾ, ಗಂಡುಗಲಿ ಕುಮಾರರಾಮ ಕಾಲದ ಸಾಮಾನ್ಯ ಜನರ ಮತ್ತು ಸಾಧಕರ ಕಥೆ. ಆದರೆ ಸಿನಿಮಾ ಎಂದರೆ ಸಾಹಸ, ಪ್ರೀತಿ, ದ್ವೇಷ, ಅಂಥ ಹಲವು ಮಜಲು ಇಟ್ಟುಕೊಂಡು ಬರುತ್ತೇವೆ. ರಾವುತ ಸಿನಿಮಾ ಹಾಗಿಲ್ಲ, ಅದರ ಎಳೆಯೇ ಕೂತೂಹಲ ಭರಿತವಾಗಿದೆ, ಅದೇನೆಂದರೆ ಸಾವಿನ ನಂತರ ಏನಾಗುತ್ತೆ ಅನ್ನೋದನ್ನ ಕಥೆಯ ಸಾರವಾಗಿಸಿದ್ದಾರೆ ಕಥೆಗಾರ ಸಿದ್ದುವಜ್ರಪ್ಪ.ಇದರ ವಿಭಿನ್ನ ಕ್ಲೈಮ್ಯಾಕ್ಸ್ ಅರ್ಥವೇ ಸಿನಿಮಾದ ಸಾವಿನ ನಂತರದ ಪಯಣ ತಿಳಿಸುತ್ತದೆ ಎಂದು ಹೇಳಿರುವ ನಿರ್ಮಾಪಕರು ಜನವರಿ 31 ರಂದು ” ರಾವುತ” ಚಿತ್ರವನ್ನು ರಾಜ್ಯಾದ್ಯಂತ ಬಿಡುಗಡೆ ಮಾಡುತ್ತಿರುವುದಾಗಿ ಹೇಳಿದ್ದಾರೆ.

ಈ ಸಿನಿಮಾವು ಕನ್ನಡದ ಇನ್ನೊಂದು ನಾಗಮಂಡಲ ಆಗುವ ಲಕ್ಷಣವಿದೆ. ಅದಕ್ಕೆ ಕಾರಣ ಸಂಪೂರ್ಣ ಉತ್ತರ ಕರ್ನಾಟಕ ಶೈಲಿಯ ಸಂಸ್ಕೃತಿಯ ದೃಶ್ಯ ಚಿತ್ರಣವಿರುವುದೇ ಇದಕ್ಕೆ ಕಾರಣ ಎಂದೂ ಇತ್ತೀಚಿಗೆ ನಡೆದ ಪ್ರೀಮಿಯರ್ ಶೋ ನೋಡಿದ ಗಣ್ಯರು ಮಿತ್ರರು ತಿಳಿಸಿದ್ದಾರೆ.

ಜನವರಿ 31 ಕ್ಕೆ ಜನ ಮನ್ನಣೆ ಪಡೆಯಲು ಚಿತ್ರಮಂದಿರಕ್ಕೆ ಬರಲಿದೆ ರಾವುತ. ಹೆಸರಾಂತ ನಿರ್ಮಾಪಕ ಜಾಕ್ ಮಂಜು ಅವರ್ ಶಾಲಿನಿ ಆರ್ಟ್ಸ್ ಸಂಸ್ಥೆಯ ಮುಖಾಂತರ ರಾಜ್ಯಾಧ್ಯಂತ ಬಿಡುಗಡೆಗೊಂಡು ಕನ್ನಡ ಪ್ರೇಕ್ಷಕರ ಮುಂದೆ “ರಾವುತ” ಚಿತ್ರ ಬರುತ್ತಿದೆ. ನಾಯಕನಾಗಿ ರಾಜ್ ಪ್ರವೀಣ್, ನಾಯಕಿಯಾಗಿ ಭವಾನಿ ಪುರೋಹಿತ್, ಹಾಗೂ ಇನ್ನೊಳಿದ ಕಲಾವಿದರೂ ಅವರ ಪಾತ್ರಕ್ಕೆ ಜೀವ ತುಂಬಿದ್ದಾರೆ. ನಿರ್ಮಾಪಕ ಈರಣ್ಣ ಶುಭಾಷ್ ಬಡಿಗೇರ್ ನಿರ್ದೇಶಕ ಸಿದ್ದುವಜ್ರಪ್ಪ ಮೊದಲ ಚಿತ್ರ ಪ್ರದರ್ಶನದ ತಯ್ಯಾರಿಲೀ ಇದ್ದಾರೆ. ಜ 31ಕ್ಕೆ ಚಿತ್ರ ಬಿಡುಗಡೆ ಇರುವ ಕಾರಣ ಸದ್ಯದಲ್ಲೇ ಟ್ರೇಲರ್ ಸಹ ಬಿಡುಗಡೆ ಆಗಲಿವೆ.

 

Share this post:

Related Posts

To Subscribe to our News Letter.

Translate »