Sandalwood Leading OnlineMedia

ತಂದೆ-ಮಗನ ಬಾಂಧವ್ಯ ಹೊತ್ತು ಬರ್ತಿದೆ ಹೊಸಬರ ʻಜನಕʼ

ಅಪ್ಪ ಎಂದರೆ ಅದೆಷ್ಟೋ ಜನರ ಪಾಲಿಗೆ ಆಕಾಶವಿದ್ದಂತೆ. ಯಾವ ಕಷ್ಟವೂ ಬಾರದಂತೆ ಕಾಪಾಡುತ್ತಾನೆ. ತನ್ನೆಲ್ಲಾ ಕಷ್ಟಗಳನ್ನು ಮರೆಮಾಚಿ ಮಕ್ಕಳಿಗೆ ಉಜ್ವಲ ಭವಿಷ್ಯ ಕಲ್ಪಿಸಿಕೊಡುವಾತ. ತಂದೆ ಮಗನ ಬಗೆಗಿನ ಸಿನಿಮಾಗಳನ್ನು ಎಂಥವರನ್ನು ಹಿಡಿದಿಟ್ಟುಕೊಂಡು ಬಿಡುತ್ತವೆ. ಈಗ ಗಾಂಧಿನಗರದಲ್ಲಿ ಅಪ್ಪಮಗನ ಬಾಂಧವ್ಯದ ಸಿನಿಮಾವೊಂದು ಸದ್ದು ಮಾಡುತ್ತಿದೆ.

ಇದನ್ನೂ ಓದಿ :CHETHAN KUMAR

ಮನು ಮತ್ತು ತಂಡದವರು ಸೇರಿಕೊಂಡು ಜನಕ ಎಂಬ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾದ ನಿರ್ದೇಶಕ ಮನು, ಮೊದಲಿನಿಂದಾನೂ ಸಿನಿಮಾದಲ್ಲಿ ಇಂಡಸ್ಟ್ರಿಯಲ್ಲಿ ಕೆಲಸ ಮಾಡಬೇಕೆಂಬ ಆಸೆ ಹೊತ್ತು ಬಂದವರು. ಗ್ರಾಫಿಕ್ಸ್ ಡಿಸೈನ್ ಕಲಿತು, ಸಿಜಿ ಕೆಲಸವನ್ನು ಪರ್ಫೆಕ್ಟ್ ಆಗಿ ಮಾಡುತ್ತಾರೆ.

ಶಾರ್ಟ್ ಮೂವಿಗಳಲ್ಲಿ, ಆಲ್ಬಂ ಸಾಂಗ್ಸ್ ಗಳಲ್ಲಿ ನಟಿಸಿದ ಅನುಭವವೂ ಇವರಿಗಿದೆ. ನನ್ನವಳೇ ಸಿನಿಮಾದಲ್ಲೂ ಹೀರೋ ಆಗಿದ್ದರು, ಆದರೆ ಆ ಸಿನಿಮಾ ಕಾರಣಾಂತರಗಳಿಂದ ಇನ್ನು ತೆರೆಗೆ ಬಂದಿಲ್ಲ. ಆದರೆ ಇದೀಗ ಮನು ಅವರದ್ದೇ ಸ್ವಂತ ಬ್ಯಾನರ್ ನಲ್ಲಿ ರೆಡಿಯಾದ ಜನಕ ಸಿನಿಮಾ ರಿಲೀಸ್ ಗೆ ರೆಡಿ ಇದೆ.

ಇತ್ತೀಚೆಗಷ್ಟೇ ಈ ಖುಷಿಯ ವಿಚಾರವನ್ನು ಸಿನಿಮಾ ತಂಡ ಹೇಳಿಕೊಂಡಿದೆ. ಈ ವೇಳೆ ಈ ಹೊಸ ತಂಡಕ್ಕೆ ಇಂಡಸ್ಟ್ರಿಯವರ ಬೆಂಬಲವೂ ಸಿಕ್ಕಿದೆ. ಟ್ರೇಲರ್ ಹಾಗೂ ಹಾಡು ರಿಲೀಸ್ ಮಾಡಲು ನಿರ್ದೇಶಕ ಓಂ ಸಾಯಿಪ್ರಕಾಶ್, ಡಿಂಗ್ರಿ ನಾಗರಾಜ್ ಸೇರಿದಂತೆ ಹಲವರು ಬಂದಿದ್ದರು. ಟ್ರೇಲರ್ ಮತ್ತು ಸಾಂಗ್ಸ್ ರಿಲೀಸ್ ಮಾಡಿ, ಶುಭ ಹಾರೈಸಿದರು.

ಇದನ್ನೂ ಓದಿ:ಕ್ರಿಕೆಟ್ ಪ್ರೇಮಿಗಳ ಮನಗೆದ್ದ `ಸಹರಾ’ ಟ್ರೇಲರ್; ಕ್ರಿಕೆಟ್ ಆಧರಿತ ಕಥೆಗೆ ಪ್ರೇಕ್ಷಕ ಫಿದಾ

ಈ ಸಿನಿಮಾಗೆ ಎ ಪ್ರೇಮಾ ಬಂಡವಾಳ ಹೂಡಿದ್ದಾರೆ. ರಾಘವ ಸುಭಾಷ್ ಸಂಗೀತ ನೀಡಿದ್ದು, ಕೌರವ ವೆಂಕಟೇಶ್ ಸಾಹಸ ನೀಡಿದ್ದಾರೆ. ರಣಧೀರ ಕ್ಯಾಮರಾ ಹಿಡಿದಿದ್ದು, ಬಾಬು ಅವರು ಈ ಸಿನಿಮಾದ ಪಿಆರ್ಓ ಆಗಿ ಕೆಲಸ ಮಾಡಿದ್ದಾರೆ.

Share this post:

Related Posts

To Subscribe to our News Letter.

Translate »