ಬೆಂಗಳೂರು ಗ್ಲೋಬಲ್ ಗಾರ್ನರ್ ಸಂಸ್ಥೆ 17 ಮತ್ತು 18 ರಂದು `ಗ್ಲೋಬಲ್ ಗಾರ್ನರ್ ಎಕ್ಸ್ಪೋ’ಆಯೋಜಿಸಲಾಗಿದೆ. ಮೇಳವು ಅರಮನೆ ಮೈದಾನದಲ್ಲಿರುವ `ಪ್ರಿನ್ಸಸ್ ಗಾಲ್ಫ್ ಗೇಟ್’ನಲ್ಲಿ ನಡೆಯಲಿದೆ. ಗ್ರಾಹಕರು ಮತ್ತು ಉತ್ಪಾದಕರು ಇಬ್ಬರಿಗೂ ಸಹಾಯವಾಗುವ ರೀತಿಯಲ್ಲಿ ಮೇಳವನ್ನು ಆಯೋಜಿಸಲಾಗಿದೆ. ಹೊಸದಾಗಿ ಬಿಜಿನೆಸ್ ಆರಂಭಿಸುವವರಿಗೆ ಮಾಹಿತಿ, ತರಬೇತಿ ನೀಡಲಾಗುತ್ತದೆ. ಹೊಸದಾಗಿ ಉತ್ಪನ್ನಗಳನ್ನು ತಯಾರಿಸುವವರಿಗೆ ಮಾರುಕಟ್ಟೆ ಕಲ್ಪಿಸಲು ಬೇಕಾದ ಸಿದ್ಧತೆಗಳನ್ನು ಕೂಡ ಮೇಳದಲ್ಲಿ ತಿಳಿಸಿಕೊಡಲಾಗುತ್ತದೆ.
ಅದೇ ರೀತಿ, ಇಲ್ಲಿ ಯಾವುದೇ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಖರೀದಿಸಬಹುದಾಗಿದೆ. ಇದೊಂದು ಬಹು ಆಯಾಮದ ಮೇಳವಾಗಿರಲಿದ್ದು, ಇಲ್ಲಿ ವಿದ್ಯಾರ್ಥಿಗಳು, ಮಹಿಳೆಯರು, ವ್ಯಾಪಾರಿಗಳು, ಗ್ರಾಹಕರು, ಉತ್ಪಾದಕರು, ನವೋದ್ಯಮ ಆರಂಭಿಸಲು ಚಿಂತನೆ ನಡೆಸುತ್ತಿರುವವರು, ಹೊಸದಾಗಿ ಬಿಜಿನೆಸ್ ಆರಂಭಿಸಲು ಸಹಾಯ ಬಯಸುತ್ತಿರುವವರು ಸೇರಿ ಎಲ್ಲ ವರ್ಗದ ಜನರಿಗೆ ಈ ಮೇಳವು ಸಹಾಯವಾಗಲಿದೆ.
`Vijayanand’ Movie Review : A story worth telling, a movie worth watching
ಮೇಳದಲ್ಲಿ ಹೊಸದಾಗಿ ಉತ್ಪನ್ನಗಳನ್ನು ತಯಾರಿಸಿ ಮಾರ್ಕೆಟ್ ಮಾಡುವುದು ಹೇಗೆಂದು ತಿಳಿಯದಿದ್ದವರಿಗೆ ವೇದಿಕೆ ಕಲ್ಪಿಸಲಾಗುತ್ತಿದ್ದು, ಈಗಾಗಲೇ ಮಾರುಕಟ್ಟೆ ಮಾಡುತ್ತಿರುವವರಿಗೆ ಮಾರುಕಟ್ಟೆ ವಿಸ್ತರಿಸಲು ಬೇಕಾದ ಕೌಶಲಗಳನ್ನು ಕೂಡ ನೀಡಲಾಗುತ್ತದೆ. ಗ್ಲೋಬಲ್ ಗಾರ್ನರ್ ಸಂಸ್ಥೆಯಲ್ಲಿ 20 ಕೋಟಿ ರೂ.ಗಳಿಗೂ ಹೆಚ್ಚಿನ ಮೊತ್ತದ ವಸ್ತುಗಳಿದ್ದು, ಸುಲಭವಾಗಿ ಖರೀದಿಸಬಹುದಾಗಿದೆ. ಎಲೆಕ್ಟ್ರಾನಿಕ್ಸ್ ಪರಿಕರಗಳು ಇಲ್ಲಿ ಲಭ್ಯವಾಗಲಿವೆ. ಈ ಎಲ್ಲ ವಸ್ತುಗಳನ್ನು ರಿಯಾಯಿತಿ ದರದಲ್ಲಿ ಗ್ರಾಹಕರು ಖರೀದಿ ಮಾಡಬಹುದಾದ ಉತ್ತಮ ಅವಕಾಶವನ್ನು `ಗ್ಲೋಬಲ್ ಗಾರ್ನರ್ ಎಕ್ಸ್ಪೋ’ಕಲ್ಪಿಸಲಿದೆ. ಈ ಮೇಳಕ್ಕೆ `ಚಿತ್ತಾರ’ ಪತ್ರಿಕೆ ಕೂಡ ಸಹಕಾರ ನೀಡುತ್ತಿದೆ.
ಕನ್ನಡ ಸಿನಿಮಾ ಮೇಲೆ ಪ್ರೀತಿ ಇದೆ, ಉಳಿದಿದ್ದು ಅವರಿಗೆ ಬಿಟ್ಟದ್ದು: ಬ್ಯಾನ್ ಬಗ್ಗೆ ರಶ್ಮಿಕಾ ಪ್ರತಿಕ್ರಿಯೆ