`ನೀರ್ ದೋಸೆ’ ಯಶಸ್ಸಿನ ಬಳಿಕ ಜಗ್ಗೇಶ್ ಹಾಗೂ ವಿಜಯ ಪ್ರಸಾದ್ ಜೋಡಿ `ತೋತಾಪುರಿ’ ಮೂಲಕ ಕಮಾಲ್ ಮಾಡಲು ಸಜ್ಜಾಗಿದೆ. ಈ ವರ್ಷದ ನಿರೀಕ್ಷಿತ ಸಿನಿಮಾ ಇದಾಗಿದ್ದು, ಕಾಮಿಡಿ ಜತೆಗೆ ಭರಪೂರ ಮನರಂಜನೆ ಒದಗಿಸುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದನ್ನು ಟ್ರೇಲರ್ ಮೂಲಕ ಝಲಕ್ ತೋರಿಸಿದ್ದಾರೆ. ಇದಕ್ಕೆ ದೇಶಾದ್ಯಂತ ಸಖತ್ ರೆಸ್ಪಾನ್ಸ್ ಪಡೆದುಕೊಂಡ ಖುಷಿ ಚಿತ್ರತಂಡಕ್ಕಿದೆ. ಇದೇ ಮೊದಲ ಬಾರಿಗೆ ಕಾಮಿಡಿ ಸಿನಿಮಾವೊಂದು ಎರಡೂ ಭಾಗದ ಚಿತ್ರೀಕರಣವನ್ನೂ ಮೊದಲೇ ಮಾಡಿಕೊಂಡು ಬಿಡುಗಡೆಗೂ ಮುನ್ನವೇ ಸಾಕಷ್ಟು ಸದ್ದು ಮಾಡುತ್ತಿದೆ. ಚಾಪ್ಟರ್-1 ಹಾಗೂ ಚಾಪ್ಟರ್-2ರೂಪದಲ್ಲಿ ರಿಲೀಸ್ ಆಗಲಿರುವ `ತೋತಾಪುರಿ’, ಮೊದಲಿಗೆ ಸೆಪ್ಟೆಂಬರ್ 30ರಂದು ಚಾಪ್ಟರ್-೧ ವಿಶ್ವಾದ್ಯಂತ ತೆರೆಕಾಣಲಿದೆ. ಪ್ರಾರಂಭದಿAದಲೂ ಸಿಕ್ಕಾಪಟ್ಟೆ ಕುತೂಹಲ ಹುಟ್ಟು ಹಾಕಿರುವ ಈ ಸಿನಿಮಾದ ಟ್ರೇಲರ್ ಹಾಗೂ ಹಾಡಿಗೆ ದೇಶ-ವಿದೇಶ ಗಳಿಂದ ಸಖತ್ ರೆಸ್ಪಾನ್ಸ್ ಪಡೆದುಕೊಂಡಿದೆ ಚಿತ್ರತಂಡ.
ಓಟಿಟಿ ಟಾಪರ್ ಆಗಿ ಬಿಗ್ ಬಾಸ್ ಸೀಸನ್ 9ಕ್ಕೆ ಎಂಟ್ರಿ ಪಡೆದ ರೂಪೇಶ್ ಶೆಟ್ಟಿ
ದಾಖಲೆಯ ಬಾಗ್ಲು ತೆರೆದ `ಬಾಗ್ಲು ತೆಗಿ ಮೇರಿ ಜಾನ್…’
ತೋತಾಪುರಿ ಸಿನಿಮಾದ `ಬಾಗ್ಲು ತೆಗಿ ಮೇರಿ ಜಾನ್…’ ಹಾಡು ವಿಶ್ವದಾದ್ಯಂತ ಸದ್ದು ಮಾಡಿದ್ದು ಗೊತ್ತೇ ಇದೆ. ವಯಸ್ಸಿನ ಲೆಕ್ಕವಿಲ್ಲದೆ, ಎಲ್ಲಾ ವಯೋಮಾನದವರು ಈ ಹಾಡನ್ನು ಮೆಚ್ಚಿದ್ದು, ದೇಶ-ವಿದೇಶದವರೂ ಈ ಹಾಡಿಗೆ ಫಿದಾ ಆಗಿದ್ದಾರೆ. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣಗಳಿಂದ ಹಿಡಿದು ಯಾವುದೇ ಸಮಾರಂಭ, ಮನೆ, ಕಾರು, ಕಚೇರಿ ಮೊದಲಾದ ಕಡೆಯೂ ತೋತಾಪುರಿ ಹಾಡಿನದ್ದೇ ಕಲರವ. ಹಾಡನ್ನು ರೀ ಕ್ರಿಯೇಟ್ ಮಾಡಿದವರೆಷ್ಟೋ, ರೀಲ್ಸ್, ಡಾನ್ಸ್ ಮಾಡಿದವರು ಸಾವಿರಾರು ಮಂದಿ. ಇವೆಲ್ಲದರ ಜತೆಗೆ `ಬಾಗ್ಲು ತೆಗಿ ಮೇರಿ ಜಾನ್’ ೨೦೦ ಮಿಲಿಯನ್ ಹಿಟ್ಸ್ ದಾಖಲಿಸುವಲ್ಲಿ ಯಶಸ್ವಿಯಾಗಿದೆ. ಅನೂಪ್ ಸೀಳಿನ್ ಸಂಗೀತ ಸಂಯೋಜಿಸಿರುವ ಈ ಹಾಡಿಗೆ ವಿಜಯ ಪ್ರಸಾದ್ ಸಾಹಿತ್ಯ ರಚಿಸಿದ್ದು, ವ್ಯಾಸರಾಜ್ ಸೋಸಲೆ ಹಾಗೂ ಅನನ್ಯ ಭಟ್ ದನಿಗೂಡಿಸಿದ್ದಾರೆ. ಕಲರ್`ಫುಲ್ ಸೆಟ್’ನಲ್ಲಿ ನೂರಾರು ಡಾನ್ಸರ್’ಗಳೊಂದಿಗೆ ಶೂಟ್ ಮಾಡಿರುವ ಈ ಹಾಡು `ಮೋನಿಫ್ಲಿಕ್ಸ್ ಆಡಿಯೋಸ್’ ಯೂಟ್ಯೂಬ್ ಚಾನಲ್‌ನಲ್ಲಿ ರಿಲೀಸ್ ಆಗಿದೆ.
EXCLUSIVE INTERVIEW WITH RADHANA RAM ; ದರ್ಶನ್ ತೆರೆಯ ಮೇಲೆ ಕಂಡ ಹಾಗೆ ಅಲ್ಲ
ಬಿಗ್ ಬಜೆಟ್, ದೊಡ್ಡ ತಾರಾಗಣ
ತೋತಾಪುರಿ ಎರಡು ಭಾಗಗಳಲ್ಲಿ ತಯಾರಾಗಿದ್ದು, ನೂರಾರು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ. ಕಾಮಿಡಿ ಸಿನಿಮಾವೊಂದಕ್ಕೆ ಈ ಪರಿ ಶೂಟಿಂಗ್ ಮಾಡಿರುವುದು ಒಂದೆಡೆಯಾದರೆ, ಜಗ್ಗೇಶ್ ನಟಿಸಿರುವ ಸಿನಿಮಾಗಳ ಪೈಕಿ ತೋತಾಪುರಿ ಬಿಗ್ ಬಜೆಟ್ ಸಿನಿಮಾ ಎಂಬುದು ಗಮನಾರ್ಹ. ಹಾಗೆಯೇ ಚಿತ್ರದಲ್ಲಿ ಸಾಕಷ್ಟು ತಾರಾ ಸಮೂಹವೇ ಇದೆ ಎಂಬುದು ಮತ್ತೊಂದು ಗಮನಾರ್ಹ ವಿಷಯ. ಡಾಲಿ ಧನಂಜಯ್, ಅದಿತಿ ಪ್ರಭುದೇವ, ಸುಮನ್ ರಂಗನಾಥ್, ವೀಣಾ ಸುಂದರ್, ದತ್ತಣ್ಣ, ಹೇಮಾದತ್ ಸೇರಿದಂತೆ ಅನೇಕ ಕಲಾವಿದರು ತೋತಾಪುರಿ ತಾರಾಗಣದಲ್ಲಿದ್ದಾರೆ.
`ನೀರ್‌ದೋಸೆ’ ಇತಿಹಾಸದ ನೆರಳಿನಲ್ಲಿ `ತೋತಾಪರಿ’ ನಿರೀಕ್ಷೆ
ಜಗ್ಗೇಶ್ ಹಾಗೂ ವಿಜಯಪ್ರಸಾದ್ ಜೋಡಿ ಈಗಾಗಲೇ `ನೀರ್ ದೋಸೆ’ ಸಿನಿಮಾ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದೆ ಎಂಬುದಕ್ಕೆ ಆ ಚಿತ್ರಕ್ಕೆ ಸಿಕ್ಕಿರುವ ಅಭೂತಪೂರ್ವ ಗೆಲುವೇ ಸಾಕ್ಷಿ. ಮುಖ್ಯವಾಗಿ ಮಹಿಳೆಯರು ಹಾಗೂ ಕುಟುಂಬವರ್ಗ ವೀಕ್ಷಿಸಿದ ನೀರ್ ದೋಸೆ `ಬಾಕ್ಸಾಫೀಸ್’ನಲ್ಲೂ ದೊಡ್ಡ ಮಟ್ಟದಲ್ಲಿ ದಾಖಲೆ ಮಾಡಿದೆ. ಇನ್ನು ನೀರ್ ದೋಸೆ ಹಾಗೂ ತೋತಾಪುರಿ ಇವರಿಬ್ಬರ ಕಾಂಬಿನೇಷನ್ ಎಂಬುದು ಒಂದೆಡೆಯಾದರೆ, ನೀರ್ ದೋಸೆ ರಿಲೀಸ್ ಆಗಿದ್ದು ದಸರಾ ವೇಳೆಯಲ್ಲಿ. ಈಗ ತೋತಾಪುರಿ ಸಹ ದಸರಾ ವೇಳೆಗೆ ಕಂಗೊಳಿಸಲು ಸಜ್ಜಾಗಿದೆ. ಸೆಪ್ಟೆಂಬರ್ ೨ರಂದು ನೀರ್ ದೋಸೆ ಬಿಡುಗಡೆಯಾಗಿ ರಾಜ್ಯಾದ್ಯಂತ ಸಖತ್ ಕಮಾಲ್ ಮಾಡಿತ್ತು. ಇದೀಗ ಸೆಪ್ಟೆಂಬರ್ ೩೦ರಂದು ತೋತಾಪುರಿ ವಿಶ್ವದಾದ್ಯಂತ ರಂಗೇರಲು ತಯಾರಿ ನಡೆಸಿದೆ ಚಿತ್ರತಂಡ.
ಮತ್ತೆ ಗೆಲುವಿನತ್ತ…
ಸ್ಯಾಂಡಲ್‌ವುಡ್‌ನಲ್ಲಿ ಸಾಲು ಸಾಲು ಹಿಟ್ ಸಿನಿಮಾಗಳನ್ನು ನಿರ್ಮಿಸಿ ಸದಭಿರುಚಿಯ ನಿರ್ಮಾಪಕ ಎಂದೇ ಖ್ಯಾತರಾಗಿರುವ ಕೆ.ಎ.ಸುರೇಶ್ ನಿರ್ಮಿಸಿರುವ ಮತ್ತೊಂದು ಮಹಾನ್ ಸಿನಿಮಾ-ತೋತಾಪುರಿ. ಎರಡನೇ ಮದುವೆ, ಗೋವಿಂದಾಯ ನಮಃ, ಶ್ರಾವಣಿ ಸುಬ್ರಮಣ್ಯ, ಆರ್ ಎಕ್ಸ್ ಸೂರಿ, ಶಿವಲಿಂಗ, ರಾಜು ಕನ್ನಡ ಮೀಡಿಯಂ ಎಂಬ ಬೃಹತ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಕೆ.ಎ.ಸುರೇಶ್, `ತೋತಾಪುರಿ’ ಸಿನಿಮಾವನ್ನು ಮೋನಿಫ್ಲಿಕ್ಸ್ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ.