Kullanna Hendathi Trailer – 2022 | ASHRITH VISWANATH | RAASIKA BIRENDRA | VISAKH S. S.
ಸ್ಟಾರ್ ವೆಂಚರ್ಸ್ ಬ್ಯಾನರ್ ಮೂಲಕ ನಿರ್ಮಾಣವಾಗಿರುವ, ವಿಭಿನ್ನ ಪ್ರೇಮಕಥಾಹಂದರ ಹೊಂದಿರುವ ಚಿತ್ರ ಕುಳ್ಳನ ಹೆಂಡತಿ ಈ ಶುಕ್ರವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ವಿಶಾಖ್ ಅವರು ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಆಶ್ರಿತ್ ವಿಶ್ವನಾಥ್ ಹಾಗೂ ರಾಸಿಕಾ ಬೀರೇಂದ್ರ ನಾಯಕ, ನಾಯಕಿಯಾಗಿ ನಟಿಸಿದ್ದಾರೆ.
ಡಿಸೆಂಬರ್ ನಲ್ಲಿ ಬಹುನಿರೀಕ್ಷಿತ ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಚಿತ್ರದ ಟ್ರೈಲರ್ ಬಿಡುಗಡೆ
ಕುಳ್ಳನ ಹೆಂಡತಿ, ವಯಸಿನ ಅಂತರದ ಮೇಲೆ ನಡೆಯುವ ಕಥೆಯಾಗಿದ್ದು, 26ರ ಹರೆಯದ ಹುಡುಗನಿಗೆ 33ರ ವಯಸಿನ ನರ್ಸ್ ಮೇಲೆ ಲವ್ ಆದರೆ ಹೇಗಿರುತ್ತೆ ಎಂಬುದನ್ನು ಈ ಚಿತ್ರದ ಮೂಲಕ ಹೇಳಲಾಗಿದೆ. ಡಾಕ್ಟರ್ ಹಾಗೂ ರೋಗಿಯ ನಡುವೆ ನಡೆಯೋ ಕಥೆಯಿದು. ಸಮಾಜಕ್ಕೆ ಒಂದೊಳ್ಳೆಯ ಮೆಸೇಜ್ ಕೂಡ ಈ ಚಿತ್ರದಲ್ಲಿದೆ. ಚಿತ್ರದಲ್ಲಿ 5 ಹಾಡುಗಳಿದ್ದು, ಪರಮ್ ನಿರ್ವಿಕಾರ್ ಮೊದಲಬಾರಿಗೆ ಸಂಗೀತನಿರ್ದೇಶನ ಮಾಡಿದ್ದಾರೆ. ಉಳಿದಂತೆ ದೀಪಿಕಾ, ಅರಸೀಕೆರೆ ರಾಜು, ಕೆಂಚಣ್ಣ, ಜಯಾ ಅಲ್ಲದೆ ಬಾಲ ಕಲಾವಿದೆ ದ್ರಿಯಾ ಅಭಿನಯಿಸಿದ್ದಾರೆ.
ನಿರ್ದೇಶಕರ ಸಂಘದಿಂದ ಅಪರೂಪದ ಕಾರ್ಯಕ್ರಮ
ಸ್ಟಾರ್ ವೆಂಚರ‍್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಅಪರೂಪದ ಪ್ರೇಮ ಕಥೆಯ ಕುಳ್ಳನ ಹೆಂಡತಿ ಚಿತ್ರದ ಟ್ರೇಲರ್ ಈಗಾಗಲೇ ಬಿಡುಗಡೆ ಯಾಗಿದ್ದು ಒಂದಷ್ಟು ವಿಭಿನ್ನತೆಯಿಂದ ಕೂಡಿದೆ. ವಿಶಾಖ್ ನಿರ್ದೇಶನದಲ್ಲಿ ಮೂಡಿಬಂದಿರುವ ಈ ಚಿತ್ರದಲ್ಲಿ ಆಶ್ರಿತ್ ವಿಶ್ವನಾಥ್ ನಾಯಕ ನಾಗಿ ನಟಿಸಿದ್ದು, ರಾಸಿಕಾ ಬೀರೇಂದ್ರ ನಾಯಕಿಯಾಗಿ ಬಣ್ಣಹಚ್ಚಿ ದ್ದಾರೆ. ಈಗಾಗಲೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿದ್ದು ತೆರೆಗೆ ಸಿದ್ಧವಾಗಿದೆ. ಕುಳ್ಳನ ಹೆಂಡತಿ ಎಂದಾಕ್ಷಣ ಗಂಡ ಕುಳ್ಳ ಇರಬಹುದು ಎನಿಸುತ್ತದೆ, ಆದರೆ ಈ ನಿರ್ದೇಶ ಕರು ವಯಸಿನ ಅಂತರದ ಮೇಲೆ ಸ್ಟೋರಿ ರೆಡಿ ಮಾಡಿದ್ದು, ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ಹೇಳುವ ಪ್ರಯತ್ನ ಮಾಡಿದ್ದಾರೆ. ಇಪ್ಪತ್ತಾರರ ಹರೆಯದ ಹುಡುಗನಿಗೆ ಮೂವತ್ತ ಮೂರರ ವಯಸ್ಸಿನ ನರ್ಸ್ ಮೇಲೆ ಪ್ರೀತಿ ಮೂಡಿದರೆ ಹೇಗಿರುತ್ತದೆ ಎಂಬುದನ್ನು ಈ ಚಿತ್ರದ ಮೂಲಕ ಹೇಳ ಹೊರಟಿದ್ದೇನೆ. ಒಂದು ಸುಂದರ ಲವ್ ಸ್ಟೋರಿ ಚಿತ್ರದಲ್ಲಿದ್ದು ಅದಕ್ಕೆ ಭಾವನಾತ್ಮಕ ಅಂಶಗಳನ್ನು ಬೆರೆಸಿ ತೆರೆಗೆ ತರುತ್ತಿದ್ದೇವೆ.
ನವೆಂಬರ್ 18ರಿಂದ ರಾಜ್ಯಾದ್ಯಂತ `ಅಬ್ಬರ’!
ನಲವತ್ತೈದು ದಿನಗಳ ಕಾಲ ಎರಡು ಹಂತಗಳಲ್ಲಿ ಚಿತ್ರೀಕರಣ ನಡೆಸಿದ್ದೇವೆ ಎನ್ನುತ್ತಾರೆ ನಿರ್ದೇಶಕ ವಿಶಾಖ್. ಹಲವು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸಿರುವ ಆಶ್ರಿತ್ ವಿಶ್ವನಾಥ್ ಈ ಚಿತ್ರದ ಮೂಲಕ ಹಿರಿತೆರೆಗೆ ಎಂಟ್ರಿ ಕೊಟುತ್ತಿದ್ದಾರೆ. ರಾಸಿಕಾ ಬೀರೇಂದ್ರ ಜೋತಿರ್ಮಹಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ದೀಪಿಕಾ, ಅರಸಿಕೆರೆ ರಾಜು, ಕೆಂಚಣ್ಣ, ಜಯಾ ಬೇಬಿ ದ್ರಿಯಾ ಚಿತ್ರದ ತಾರಾಬಳಗದಲ್ಲಿದ್ದಾರೆ. ಚಿತ್ರದಲ್ಲಿ ಐದು ಹಾಡುಗಳಿದ್ದು ಪರಮ್ ನಿರ್ವಿಕಾರ್ ಸಂಗೀತ ಸಂಯೋಜಿಸಿ ದ್ದಾರೆ.