ಕರ್ನಾಟಕದ ಅತ್ಯಂತ ಕಠಿಣವಾದ ಟ್ರೆಕ್ಕಿಂಗ್ ಸ್ಥಳ ಯಾವುದು ಅಂತ ಹೇಳಿ ನೋಡೋಣ? ಬಹುಶಃ ನೀವು ಇಲ್ಲಿ ಟ್ರೆಕ್ಕಿಂಗ್ ಮಾಡಿರಬಹುದು.
ಟ್ರೆಕ್ಕಿಂಗ್ ಅಥವಾ ಚಾರಣ ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಹೇಳಲಾಗುತ್ತದೆ. ಇದು ದೇಹದ ಬೆವರನ್ನು ಹೆಚ್ಚಿಸುವ ಮೂಲಕ, ತೂಕವನ್ನು ಕಡಿಮೆ ಮಾಡುವ ಮತ್ತು ಮನಸ್ಸಿಗೆ ಶಾಂತವಾದ ಅನುಭವ ನೀಡುವ ಪರಿಣಾಮಕಾರಿ ಚಿಕಿತ್ಸೆ ಎಂದೇ ಹೇಳಬಹುದು. ಚಾರಣದ ಹಾದಿಯಲ್ಲಿ ನೈಸರ್ಗಿಕ ನೋಟವನ್ನು ಕಣ್ತುಂಬಿಕೊಳ್ಳುತ್ತಾ ಪ್ರಶಾಂತತೆಯನ್ನು ಆನಂದಿಸಬಹುದು.
ಇನ್ನು ವಿಷಯಕ್ಕೆ ಬಂದರೆ ನಮ್ಮ ಕರ್ನಾಟಕದಲ್ಲಿ ಟ್ರೆಕ್ಕಿಂಗ್ ಮಾಡಬಹುದಾದ ಅನೇಕ ಸುಂದರವಾದ ತಾಣಗಳಿವೆ. ಅವುಗಳನ್ನು ಮಧ್ಯಮ ಕಷ್ಟದ, ಸುಲಭದ ಅಥವಾ ಕಠಿಣವಾದ ಚಾರಣ ಎಂದು ವಿಗಂಡಿಸಲಾಗುತ್ತದೆ. ಹಾಗಾದರೆ ಕರ್ನಾಟಕದ ಯಾವ ಸ್ಥಳ ಬಹಳ ಕಷ್ಟಕರವಾದ ಟ್ರೆಕ್ಕಿಂಗ್ ಎಂದು ಹೇಳಲಾಗುತ್ತದೆ ಗೊತ್ತಾ?
ಇದು ಕರ್ನಾಟಕದ ಕಷ್ಟಕರ ಟ್ರೆಕ್ಕಿಂಗ್ ಪ್ಲೇಸ್:
ಕುಮಾರ ಪರ್ವತ ಚಾರಣ, ಪುಷ್ಪಗಿರಿ ಎಂದೂ ಕರೆಯಲ್ಪಡುವ ಕುಮಾರ ಪರ್ವತವು ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯದ ಅತ್ಯಂತ ಎತ್ತರದ ಶಿಖರವಾಗಿದೆ. ಅಲ್ಲದೆ, ಇದು ಕರ್ನಾಟಕದ 6 ನೇ ಅತಿ ಎತ್ತರದ ಶಿಖರ ಎಂದೆನಿಸಿಕೊಂಡಿದೆ. ಇಲ್ಲಿಗೆ ಚಾರಣ ಮಾಡಲು 2 ದಿನಗಳ ಬೇಕಾಗುತ್ತದೆ. ಕುಮಾರಪರ್ವತ ಚಾರಣವು ದಕ್ಷಿಣದ ಅತ್ಯಂತ ಸವಾಲಿನ ಚಾರಣಗಳಲ್ಲಿ ಒಂದಾಗಿದೆ.
4000 ಅಡಿಗಳ ಎತ್ತರಕ್ಕೆ ತಲುಪಬೇಕಾಗುತ್ತದೆ
ಸುಮಾರು 13 ಕಿಲೋಮೀಟರ್‌ಗಳ ದೂರದ ಈ ಚಾರಣವನ್ನು ಪೂರ್ತಿಗೊಳಿಸಲು ನೀವು 4000 ಅಡಿಗಳಷ್ಟು ಎತ್ತರಕ್ಕೆ ಹೋಗಬೇಕಾಗುತ್ತದೆ.
ಕುಮಾರಪರ್ವತವು ತನ್ನ ಸವಾಲಿನ ಮಾರ್ಗಗಳಿಂದ ಚಾರಣಿಗರನ್ನು ಆಕರ್ಷಿಸುವುದಲ್ಲದೆ ಪುಷ್ಪಗಿರಿ ವನ್ಯಜೀವಿ ಅಭಯಾರಣ್ಯವು ವನ್ಯಜೀವಿ ಪ್ರೇಮಿಗಳನ್ನು ಎಲ್ಲಿಲ್ಲದೆ ಸೆಳೆಯುತ್ತದೆ. ಈ ಪರ್ವತವು ಒಂದೇ ಶಿಖರದಂತೆ ಕಂಡರೂ ವಾಸ್ತವದಲ್ಲಿ ‘ಶೇಷ ಪರ್ವತ’, ‘ಸಿದ್ಧ ಪರ್ವತ’ ಮತ್ತು ‘ಕುಮಾರ ಪರ್ವತ’ ಎಂಬ ಮೂರು ಶಿಖರಗಳನ್ನು ಹೊಂದಿದ
3 ಸುಂದರ ಪರ್ವತಗಳು
3 ಸುಂದರ ಪರ್ವತಗಳಲ್ಲಿ ಶೇಷ ಪರ್ವತವು ದಕ್ಷಿಣಕ್ಕೆ ಮುಖಮಾಡಿದೆ ಮತ್ತು ಏಳು ಹೆಡೆಗಳನ್ನು ಹೊಂದಿರುವ ಸರ್ಪದಂತೆ ಕಾಣುತ್ತದೆ. ಸಿದ್ಧ ಪರ್ವತವಯ ಮತ್ತೊಂದು ಭಾಗ ಮತ್ತು ಇದು ಪ್ರವೇಶಿಸಲಾಗುವುದಿಲ್ಲ. ಈಗಲೂ ಇಲ್ಲಿ ಶ್ರೀ ವಿಷ್ಣುತೀರ್ಥಾಚಾರ್ಯರು ತಪಸ್ಸು ಮಾಡುತ್ತಿದ್ದಾರೆ ಎಂದು ನಂಬಲಾಗಿದೆ. ಕುಮಾರಪರ್ವತವನ್ನು ತಲುಪಲು ಶೇಷ ಪರ್ವತವನ್ನು ದಾಟಬೇಕಾಗುತ್ತದೆ
ಕುಮಾರ ಪರ್ವತ ಟ್ರೆಕ್
2 ನೇ ಅತಿ ಎತ್ತರದ ಶಿಖರವಾದ ಕುಮಾರ ಪರ್ವತಕ್ಕೆ ನೀವು ಸಾಹಸಮಯ ಚಾರಣ ರೋಮಾಂಚಕವಾಗಿರುತ್ತದೆ.
ಅನುಭವಿ ಮಾರ್ಗದರ್ಶಕರು ಈ ರೋಮಾಂಚಕಾರಿ ಚಟುವಟಿಕೆಯ ಸಮಯದಲ್ಲಿ ಕೆಲವು ಆಸಕ್ತಿದಾಯಕ ಸಂಗತಿಗಳನ್ನು ತಿಳಿಯಬಹುದು.
ಪರ್ವತ ತಲುಪಿದಾಗ ಸುಂದರವಾದ ಸೂರ್ಯಾಸ್ತ ಮತ್ತು ಭವ್ಯವಾದ ಜಲಪಾತಗಳ ವಿಹಂಗಮ ನೋಟಗಳನ್ನು ಆನಂದಿಸಬಹುದು.
ರಮಣೀಯವಾದ ಹಾದಿಗಳ ಮೂಲಕ ಹಾದುಹೋಗುವಾಗ ಕಣಿವೆಗಳು, ಕಾಡುಗಳು ಮತ್ತು ಪರ್ವತಗಳ ಉಸಿರು ನೋಟಗಳನ್ನು ಕಣ್ತುಂಬಿಕೊಳ್ಳಿ.
ಕುಮಾರ ಪರ್ವತ ಟ್ರೆಕ್ಕಿಂಗ್ ವಿವರ
ಸ್ಥಳ: ಕೂರ್ಗ್, ಕರ್ನಾಟಕ