ಭಾಗ್ಯಾ ಹೋಟೆಲ್ನಲ್ಲೊ ತನಗಾದ ಅವಮಾನಕ್ಕೆ ಸರಿಯಾಗಿ ಉತ್ತರಿಸಿಯೇ ಬರಬೇಕು ಎಂದು ನಿರ್ಧರಿಸಿದ ಹಾಗಿದೆ. ಯಾಕೆಂದರೆ ಅವಳು ತಾನು ಅಡುಗೆ ಮಾಡುತ್ತೇನೆ. ಅದು ತೀರಾ ಎಲ್ಲರಿಗೂ ಸುಲಭವಾಗಿ ಬರುವ ಒಂದು ಪಾಕ ವಿಧಾನ. ಮದುವೆಯಾದ ಗೃಹಿಣಿಯರಂತೂ ಇದನ್ನು ತುಂಬಾ ಚೆನ್ನಾಗಿ ಮಾಡ್ತಾರೆ. ಆದ್ರೆ ನೀವು ಇದಕ್ಕೆ ಬೇರೆ ಹೆಸರು ಇಟ್ಟಿದ್ದೀರಾ.
ಅದನ್ನು ನಾನು ಬೇಕಿದ್ರೆ ಈಗಲೇ ತುಂಬಾ ಸುಲಭವಾಗಿ ಮಾಡ್ತೀನಿ ಒಂದು ಅವಕಾಶ ನೀಡಿ ಎಂದು ಹೇಳುತ್ತಾಳೆ. ಆದರೆ ಅವರು ಅವಳಿಗೆ ಅವಕಾಶ ಮಾಡಿ ಕೊಡುತ್ತಾ ಇಲ್ಲಾ. ಹೀಗೆ ಅವರಲ್ಲಿ ವಾದ ವಿವಾದ ನಡೆಯುತ್ತಾ ಇದೆ. ನಿಮ್ಮನ್ನು ಇಷ್ಟೊತ್ತು ಇಲ್ಲಿ ಇಟ್ಟುಕೊಂಡಿರೋದೇ ತಪ್ಪು ಎಂದು ಅವರು ಹೇಳುತ್ತಾ ಇದ್ದಾರೆ. ಇದನ್ನೂ ಓದಿ:ಮಕ್ಕಳ ವಿಚಾರಕ್ಕೆ ಚಂದನ್ – ನಿವೇದಿತಾ ದೂರವಾದ್ರಾ..? ಅವರ ಆಪ್ತ ಬಳಗ ಹೇಳುತ್ತಿರುವುದು ಏನು..?
ನಂತರ ಅವಳು ತುಂಬಾ ಆಗ್ರಹ ಮಾಡುತ್ತಾ ಇದ್ದಳು ಆದರೆ ಅವರು ಒಪ್ಪುತ್ತಾ ಇರಲಿಲ್ಲ. ಮನೆಯಲ್ಲಿ ಕುಸುಮಾ ತೀರಾ ಅನಾರೋಗ್ಯದಿಂದ ಬಳಲುತ್ತಾ ಇರುವ ಕಾರಣ ಅಲ್ಲಿಗೆ ಡಾಕ್ಟರ್ ಬಂದಿದ್ದಾರೆ. ಡಾಕ್ಟರ್ ಬಂದು ಅವಳ ಆರೋಗ್ಯ ತಪಾಸಣೆ ಮಾಡುತ್ತಾ ಇದ್ದಾರೆ. ಆಗ ಅವರು ಹೇಳುತ್ತಾರೆ. ಇವರು ಆರೋಗ್ಯವನ್ನು ತುಂಬಾ ನಿರ್ಲಕ್ಷ ಮಾಡುತ್ತಾ ಇದ್ದಾರೆ ಎಂದು.
ನಿರ್ಲಕ್ಷ ಮಾಡುತ್ತಾ ಇದ್ದಾರೆ ಆದ್ದರಿಂದ ಹೀಗಾಗ್ತಾ ಇದೆ. ನೀವಾದ್ರೂ ಹೇಳ್ಬಾರ್ದಾ ಅಂತ ಕೇಳುತ್ತಾರೆ. ಆಗ ಯಾರೂ ಏನೂ ಮಾತಾಡೋದಿಲ್ಲಾ. ಆದ್ರೆ ಸುನಂದಾ ಮಾತಾಡ್ತಾಳೆ. ಅವರು ತುಂಬಾ ಸ್ರ್ಟೆಸ್ ತಗೋತಾ ಇದಾರೆ. ಅದನ್ನು ಕಡಿಮೆ ಮಾಡಬೇಕು ಎಂದು ಡಾಕ್ಟರ್ ಹೇಳಿದಾಗ ಅದು ಸಾಧ್ಯ ಇಲ್ಲ ಬಿಡಿ ಅನ್ನುತ್ತಾರೆ.
ಮನೆಯಲ್ಲಿ ಈ ರೀತಿ ಬಗೆಹರಿಸಲಾಗದ ಸಮಸ್ಯೆ ಇರುವಾಗ ನೆಮ್ಮದಿಯಿಂದ ಎಲ್ಲಿ ಇರೋಕೆ ಆಗುತ್ತದೆ ಎಂದು ಅವಳು ಕೇಳುತ್ತಾಳೆ. ಇನ್ನು ತನ್ಮಯ್ ಹಾಗೂ ತನ್ವಿ ಇಬ್ಬರೂ ಅಲ್ಲಿ ನೋಡುತ್ತಾ ನಿಂತಿದ್ದಾರೆ. ಆದರೆ ಮನೆಯಲ್ಲಿ ಏನಾಗ್ತಾ ಇದೆ ಅನ್ನೋದು ಮಾತ್ರ ಭಾಗ್ಯಾಗೆ ಗೊತ್ತಾಗ್ತಾ ಇಲ್ಲ.
ಇನ್ನು ಅಲ್ಲಿ ಎಲ್ಲರೂ ಸೇರಿ ಭಾಗ್ಯಾಳನ್ನು ಹೊರಗಡೆ ಹಾಕುತ್ತಾ ಇರುವ ಸಂದರ್ಭದಲ್ಲಿ ಹೋಟೆಲ್ಗೆ ಬಂದವರು ಅವಳನ್ನು ಕಳಿಸಬೇಡಿ ಎಂದು ಹೇಳುತ್ತಾನೆ. ನಂತರ ಏನಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ. ಭಾಗ್ಯಾ ತುಂಬಾ ಕಷ್ಟಪಟ್ಟು ಕೆಲಸ ಮಾಡಬೇಕು ಎಂದು ಮನಸು ಮಾಡಿದ್ದಳು. ಆದರೆ ಅವಳು ಈಗ ಅವಕಾಶ ವಂಚಿತಳಾಗಿದ್ಧಾಳೆ. ಅದೂ ಅಲ್ಲದೇ ಹೋಟೆಲ್ನಲ್ಲಿ ಅವಳಿಗೆ ಅವಮಾನ ಮಾಡುತ್ತಾ ಇದ್ದಾರೆ. ಅವಮಾನ ಮಾಡಿದ ಕಾರಣಕ್ಕಾಗಿ ಅವಳು ಒಂದು ಛಾಲೇಂಜ್ ಮಾಡಿದ್ದಾಳೆ. ಅದೇನು ಎಂಬುದನ್ನು ನಾವು ನಿಮಗಿಲ್ಲಿ ನೀಡಿದ್ದೇವೆ ಗಮನಿಸಿ.ಇದನ್ನೂ ಓದಿ:ರಮೇಶ್ ಅರವಿಂದ್ ಅವರಿಂದ ಅನಾವರಣವಾಯಿತು ಡಾರ್ಕ್ ಕಾಮಿಡಿ ಜಾನರ್ ನ “chef ಚಿದಂಬರ” ಚಿತ್ರದ ಟ್ರೇಲರ್
ಅಲ್ಲಿನ ಒಂದು ಮುಖ್ಯವಾದ ತಿಂಡಿ ಅವತ್ತು ಖಾಲಿ ಆಗಿ ಹೋಗಿರುತ್ತದೆ. ಒಂದು ಅವಕಾಶ ಮಾಡಿಕೊಟ್ರೆ ನಾನೇ ಅದನ್ನು ಮಾಡಿ ತೋರಿಸುತ್ತೀನಿ ಎಂದು ಹೇಳುತ್ತಾಳೆ. ನಿಮಗೇನು ಮಾಡೋಕೆ ಬರುತ್ತೆ. ಅದೆಲ್ಲಾ ಅಷ್ಟು ಸುಲಭ ಅಲ್ಲಾ. ನಿಮಗೆ ಯಾವುದೇ ಕ್ವಾಲಿಫಿಕೇಶನ್ ಇಲ್ಲಾ ಎಂದು ಹೇಳುತ್ತಾರೆ.