ದೂದ್ ಪೇಡ ದಿಗಂತ್ ಅವರು ಕ್ರೇಜಿಸ್ಟಾರ್ ಜೊತೆ ನಟಿಸಿರುವ ‘ದಿ ಜಡ್ಜ್ಮೆಂಟ್’ ಸಿನಿಮಾ ರಿಲೀಸ್ ಆಗುತ್ತಿದೆ. ಈ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ದಿಗಂತ್ ನಟಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ದೂದ್ ಪೇಡಾ ಸಂದರ್ಶನಗಳನ್ನು ನೀಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಮೋಹಕತಾರೆ ರಮ್ಯಾ ಬಗ್ಗೆ ಮಾತನಾಡಿದ್ದಾರೆ.
ಇದರಲ್ಲಿ ನಿರೂಪಕ ಗೌರೀಶ್ ಅಕ್ಕಿ, ನಟ ದಿಗಂತ್ಗೆ ನೀವು ಲಾಯರ್ ಅಥವಾ ಜಡ್ಜ್ ಆದರೆ, ಯಾರ ಮೇಲೆ ಕೇಸ್ ಹಾಕುವುದಕ್ಕೆ ಬಯಸುತ್ತೀರಾ? ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ದಿಗಂತ್ ರಮ್ಯಾ ಹೆಸರು ತೆಗೆದಿದ್ದಾರೆ.ಇದನ್ನೂ ಓದಿ:ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ ಅಣ್ಣ ತಂಗಿಯ ವಿಡಿಯೋ
“ನಾನು ನಿಜ ಜೀವನದಲ್ಲಿ ಲಾಯರ್ ಆಗಿದ್ದರೆ, ನಾನು ರಮ್ಯಾ ಅವರನ್ನು ಕರೆದು ಕೇಳುತ್ತೇನೆ. ಯಾಕೆ ನೀವು ಕಾಂಗ್ರೆಸ್ ಪಾರ್ಟಿಯಿಂದ ಹೊರಬಂದ್ರಿ ಅಂತ. ಅವರು ಇನ್ಫೋರ್ಮೆಷನ್ ಹೆಡ್ ಏನೋ ಆಗಿದ್ದರಂತಲ್ಲ. ಅದನ್ನು ಯಾಕೆ ಬಿಟ್ಟು ಬಂದ್ರಿ ಅಂತ. ಜನಕ್ಕೆ ಹೋಪ್ಸ್ ಇತ್ತಲ್ಲ. ರಮ್ಯಾ ಅವರು ಏನೋ ಬದಲಾವಣೆ ಮಾಡುತ್ತಾರೆ ಅಂತ” ಎಂದಿದ್ದಾರೆ.
ಇದೇ ವೇಳೆ ರಮ್ಯಾ ಜೊತೆಗೆ ಎರಡು ಸಿನಿಮಾಗಳಲ್ಲಿ ನಟಿಸಿದ್ದನ್ನು ನೆಎನಪಿಸಿಕೊಂಡಿದ್ದಾರೆ. ʻʻನಾನು ಅವರೊಂದಿಗೆ ಎರಡು ಸಿನಿಮಾದಲ್ಲಿ ಜೊತೆಯಲ್ಲಿ ನಟಿಸಿದ್ದೆ.
ಮೀರಾ ಮಾಧವ ರಾಘವ ಅಂತ ಸಿನಿಮಾ, ಕೋರ್ಟ್ ರೂಮ್ ಡ್ರಾಮಾ ಕಿಂಗ್ ಟಿ ಎನ್ ಸೀತಾರಾಮ್ ನಿರ್ದೇಶನದಲ್ಲಿ ಆ ಸಿನಿಮಾ ಮಾಡಿದ್ವಿ. ಆ ಮೇಲೆ ನಾಗರಹಾವು ಅಂತ ಸಿನಿಮಾ ಮಾಡಿದ್ವಿ.” ಎಂದು ಆ ಎರಡು ಸಿನಿಮಾಗಳನ್ನು ನೆನಪಿಸಿಕೊಂಡಿದ್ದಾರೆ.