ಕನ್ನಡ ಚಿತ್ರರಂಗದಲ್ಲಿ ಶಂಕರ್ ನಾಗ್ ಅವರ “ಇದು ಸಾಧ್ಯ”, ಎಸ್ ನಾರಾಯಣ್ ಅವರ ” ದಕ್ಷ” ಸೇರಿದಂತೆ ಕೆಲವು ಚಿತ್ರಗಳ ಚಿತ್ರೀಕರಣ ಕೆಲವೇ ಗಂಟೆಗಳಲ್ಲಿ ಮುಗಿದಿದ್ದು ಎಲ್ಲರಿಗೂ ತಿಳಿದ ಸಂಗತಿ.ಈಗ ನೂತನ ಉತ್ಸಾಹಿ ತಂಡವೊಂದು “ಯಂಗ್ ಮ್ಯಾನ್” ಚಿತ್ರದ ಇಡೀ ಚಿತ್ರೀಕರಣವನ್ನು ಕೇವಲ ಆರು ಗಂಟೆಗಳಲ್ಲಿ ಮುಗಿಸುವ ಪ್ರಯತ್ನಕ್ಕೆ ಮುಂದಾಗಿದೆ. ಸೆಪ್ಟೆಂಬರ್ ಎರಡನೇ ವಾರದಲ್ಲಿ ಚಿತ್ರೀಕರಣ ಬೆಂಗಳೂರಿನಲ್ಲಿ ನಡೆಯಲಿದೆ. ಎರಡು ತಿಂಗಳಿನಿಂದ ಪೂರ್ವ ತಯಾರಿ ನಡೆಯುತ್ತಿದೆ. ಚಿತ್ರದ ಅವಧಿ ಮಾಮೂಲಿ ಚಿತ್ರಗಳ ತರಹ ಎರಡು ಗಂಟೆಗೂ ಅಧಿಕ ಸಮಯವಿರುತ್ತದೆ.
`ಆಪರೇಷನ್ ಲಂಡನ್ ಕೆಫೆ’ ಯಲ್ಲಿ ಶಿವಾನಿ ಸುರ್ವೆ ಡೆಡ್ಲಿ ಲುಕ್!
ಮುತ್ತುರಾಜ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ವಿಜಯಲಕ್ಷ್ಮಿ ರಾಮೇಗೌಡ ನಿರ್ಮಾಣ ಮಾಡುತ್ತಿದ್ದಾರೆ. ಕ್ರಿಯೇಟಿವ್ ಹಡ್ ಆಗಿ ಮುರಳಿ ಎಸ್ ವೈ ಕಾರ್ಯ ನಿರ್ವಹಿಸಲಿದ್ದಾರೆ. ಲೋಕಿ ಸಂಗೀತ ನಿರ್ದೇಶನ ಹಾಗೂ ನಾಗರಾಜ್ ವೀನಸ್ ಮೂರ್ತಿ ಛಾಯಾಗ್ರಹಣ ಈ ಚಿತ್ರಕ್ಕಿದೆ. ಸುನೀಲ್ ಗೌಡ, ರಾಶಿಕಾ ಕರಾವಳಿ, ಹರೀಶ್ ಆಚಾರ್ಯ, ಶೃತಿ ಗೌಡ, ಋಷಿ ಅನಿತಾ, ಆನಂದ ಕುಮಾರ್, ನಯನ ಪುಟ್ಡಸ್ವಾಮಿ, ತನುಜಾ, ಅನುಕುಮಾರ್, ಜಯರಾಮ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.
`AAO4′ ಮಹೇಶ್&ಅಭಿಷೇಕ್ ಕಾಂಬಿನೇಶನ್ ನಿರ್ದೇಶನದಲ್ಲಿ ಅದ್ದೂರಿ ಚಿತ್ರ
ದೇಶಪ್ರೇಮ ಕುರಿತಾದ ಕಥಾಹಂದರ ಹೊಂದಿರುವ “ಯಂಗ್ ಮ್ಯಾನ್” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ನಾಗಮಂಗಲದ ಮುಳ್ಳ್ ಕಟ್ಟಮ್ಮ ದೇವಸ್ಥಾನದಲ್ಲಿ ನೆರವೇರಿತು. ಶಾಸಕ ಸುರೇಶ್ ಗೌಡ ಆರಂಭ ಫಲಕ ತೋರುವ ಮೂಲಕ ಚಿತ್ರಕ್ಕೆ ಚಾಲನೆ ನೀಡಿದರು.