ಜಗಜ್ಯೋತಿ ಮೂವೀ ಮೇಕರ್ಸ್ ನಿರ್ಮಾಣದ ದಿ ಚೆಕ್‌ಮೇಟ್ ಚಿತ್ರದ ಟ್ರೈಲರ್ ಬಿಡುಗಡೆ ಹಾಗೂ ಡ್ಯುಯೆಟ್
ಹಾಡೊಂದರ ಪ್ರದರ್ಶನ ಇತ್ತೀಚೆಗೆ ನಡೆಯಿತು. ಈ ಹಿಂದೆ ಪಾರು ಐ ಲವ್ ಯು ಎಂಬ ಚಿತ್ರದಲ್ಲಿ ನಟಿಸಿದ್ದ ರಂಜನ್‌ಹಾಸನ್ ಚೆಕ್‌ಮೇಟ್ ಚಿತ್ರದಲ್ಲಿ ನಾಯಕನಾಗಿದ್ದು, ನಾಯಕಿ ಪಾತ್ರದಲ್ಲಿ ಪ್ರೀತು ಪೂಜಾಅಭಿನಯಿಸಿದ್ದಾರೆ. ರಂಜನ್‌ಹಾಸನ್ ಅವರೇ ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ಭಾರತೀಶ ವಸಿಷ್ಠ ಹಾಗೂ ಸಂತೋಷ್ ಚಿಪ್ಪಾಡಿ ಎಂಬ ಇಬ್ಬರು ಯುವನಿರ್ದೇಶಕರು ಆಕ್ಷನ್ ಕಟ್ ಹೇಳಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ರಂಜನ್‌ಹಾಸನ್ ಚೆಕ್‌ಮೇಟ್ ಬುದ್ದಿವಂತರ ಆಟ. ನಿರ್ದೇಶಕರು ನನಗೆ ಈ ಕಥೆ ಹೇಳಿದಾಗ ತುಂಬಾ ಇಷ್ಟವಾಯಿತು. ಮೊದಲಬಾರಿಗೆ ನಿರ್ಮಾಣ ಮುಂದಾದೆ. ಸ್ನೇಹ, ಪ್ರೀತಿ, ಬದುಕು ಈ ಮೂರರಲ್ಲಿ ಯಾವುದು ಮುಖ್ಯ, ಬದುಕು ಅಂತ ಬಂದಾಗ ಸ್ನೇಹ, ಪ್ರೀತಿ ಎರಡೂ ಮರೆತುಹೋಗುತ್ತದೆ ಎಂಬ ಕಾನ್ಸೆಪ್ಟ್ ಇಟ್ಟುಕೊಂಡು ಈ ಚಿತ್ರವನ್ನು ನಿರೂಪಿಸಿದ್ದೇವೆ, ಫಸ್ಟ್ ಲಾಕ್‌ಡೌನ್ ವೇಳೆಗೆ ನಮ್ಮ ಚಿತ್ರದ ಅರ್ಧಭಾಗ ಶೂಟಿಂಗ್ ಮುಗಿದಿತ್ತು, ನಂತರ ಉಳಿದ ಭಾಗವನ್ನು ಮುಗಿಸಿಕೊಂಡು ಈಗ ಬಿಡುಗಡೆಯ ಹಂತಕ್ಕೆ
ಬಂದಿದ್ದೇವೆ ಎಂದು ಹೇಳಿದರು. ನಂತರ ನಿರ್ದೇಶಕ ಭಾರತೀಶ ಮಾತನಾಡಿ ನಾಲ್ವರು ಸ್ನೇಹಿತರ ನಡುವೆ ನಡೆಯೋ ಕಥೆಯಿದು. ಫಸ್ಟ್ಹಾಫ್‌ನಲ್ಲಿ ಇವವೆಲ್ಲರ ಪಾತ್ರಗಳನ್ನು ಪರಿಚಯ ಮಾಡಿಸಿ, ಸೆಕೆಂಡ್ ಹಾಫ್‌ನಲ್ಲಿಮೇನ್ ಕಾನ್ಸೆಪ್ಟ್ ಹೇಳಿದ್ದೇವೆ. ಈ ನಾಲ್ವರು ಸ್ನೇಹಿತರು ತಮ್ಮ ಪ್ರೀತಿಯಲ್ಲಿ ವಿಫಲರಾಗಿ, ಬ್ರೇಕಪ್ ಪಾರ್ಟಿ ಮಾಡಲೆಂದು ಒಂದೆಡೆ ಸೇರಿದಾಗ ಅಲ್ಲಿ ಅವರಿಗೆ ಆಗೋ ಅನುಭವಗಳೇನು, ಅವರ ವರ್ತನೆ ಹೇಗಿರುತ್ತೆ
`ಶ್ರೀಮಂತ’ ಮೂಲಕ ಕನ್ನಡಕ್ಕೆ ಸೋನುಸೂದ್
ಅಂತ ಚೆಕ್‌ಮೇಟ್ ಚಿತ್ರದ ಮೂಲಕ ಹೇಳಿದ್ದೇವೆ. ಆರಂಭದಲ್ಲಿ ಕ್ರೌಡ್‌ಫಂಡಿಂಗ್ ಮೂಲಕ ಚಿತ್ರವನ್ನುಮಾಡಬೇಕೆಂದುಕೊಂಡಿದ್ದೆವು. ಆಗ ರಂಜನ್‌ಹಾಸನ್ ಅವರು ನಾನೇ ನಿರ್ಮಾಣ ಮಾಡುತ್ತೇನೆಂದು ಮುಂದೆಬಂದರು ಎಂದು ವಿವರಿಸಿದರು. ನಟಿ ಪ್ರೀತು ಪೂಜಾ ಈ ಚಿತ್ರದಲ್ಲಿ ಡೀಸೆಂಟ್ ಹುಡುಗಿ ಮೌನಳ ಪಾತ್ರವನ್ನು ನಿರ್ವಹಿಸಿದ್ದಾರೆ. ವಿಜಯ್ ಚೆಂಡೂರ್, ಪ್ರದೀಪ್ ಪೂಜಾರಿ ಹಾಗೂ ವಿಶ್ವವಿಜೇತ್ ನಾಯಕನ ಸ್ನೇಹಿತರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸರ್ದಾರ್ ಸತ್ಯ ಮತ್ತೊಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತನ್ನ ಪಾತ್ರದ ಕುರಿತು ಮಾತನಾಡಿದ ಸತ್ಯ, ರಂಜನ್ ನನ್ನ ಸ್ನೇಹಿತ, ಎಲ್ಲರೂ ಇಷ್ಟಪಡುವಂಥ ಪಾತ್ರವನ್ನು ಕೊಟ್ಟಿದ್ದಾರೆ, ಹಾಲಿವುಡ್, ಕೊರಿಯನ್, ಮಲಯಾಳಂ ಸಿನಿಮಾಗಳನ್ನು ಮೀರಿಸುವಂತೆ ಈ ಚಿತ್ರ ಮೂಡಿಬಂದಿದೆ ಎಂದು ಹೇಳಿದರು. ಬೆಂಗಳೂರು ಸುತ್ತಮುತ್ತ ಅಲ್ಲದೆ ಒಂದು ಮನೆಯಲ್ಲಿ ಬಹುತೇಕ ಭಾಗದ ಚಿತ್ರೀಕರಣವನ್ನು ೫೮ ಕ್ಕೂ ಹೆಚ್ಚು ದಿನಗಳ ಕಾಲ ನಡೆಸಲಾಗಿದೆ. ಈಗಾಗಲೇ ಚಿತ್ರದ ಸೆನ್ಸಾರ್ ಕೂಡ ಮುಗಿದಿದ್ದು, ಅಕ್ಟೋಬರ್ ೭ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಂಡಿದ್ದೇವೆ ಎಂದು ಚಿತ್ರದನಾಯಕ ಹಾಗೂ ನಿರ್ಮಾಪಕ ರಂಜನ್ ಹಾಸನ್ ಅವರು ತಿಳಿಸಿದ್ದಾರೆ. ಗಾಯಕ ಶಷಾಂಕ್ ಶೇಷಗಿರಿ ಅವರು ಈಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಸತೀಶ್ ರಾಜೇಂದ್ರನ್ ಅವರ ಛಾಯಾಗ್ರಹಣ, ಈ.ಎಸ್. ಈಶ್ವರ್ ಅವರ ಸಂಕಲನ, ವಯಲೆಂಟ್ ವೇಲು ಅವರ ಸಾಹಸ, ಪ್ರಮೋದ್ ಅವರ ಕಲಾನಿರ್ದೇಶನ ಈ ಚಿತ್ರಕ್ಕಿದೆ.ರಾಜಶೇಖರ್(ಮಜಾಟಾಕೀಸ್), ನೀನಾಸಂ ಅಶ್ವಥ್, ಕಾಕ್ರೋಚ್ ಸುಧಿ, ಮಜಾಟಾಕೀಸ್ ಹರಿ ಕಾರ್ತಿಕ್, ಕಿಲ್ಲರ್ ಮಂಜು ಚೆಕ್‌ಮೇಟ್ ಚಿತ್ರದ ಉಳಿದ ತಾರಾಗಣದಲ್ಲಿದ್ದಾರೆ.