ಸದ್ಯ ಉಪೇಂದ್ರ ನಿರ್ದೇಶಿಸಿ ನಟಿಸಿರುವ ‘ಯುಐ’ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡ್ತಿದೆ. ಅದರ ಬೆನ್ನಲ್ಲೇ ‘ಮ್ಯಾಕ್ಸ್’ ಎಂಟ್ರಿ ಆಗುತ್ತಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ನಿರ್ಮಾಣ ಆಗಿದೆ. ತಮಿಳಿನ ಕಲೈಪುಲಿ ಎಸ್ ತನು ಚಿತ್ರಕ್ಕೆ ಹಣ ಹೂಡಿದ್ದಾರೆ. ವಿಜಯ್ ಕಾರ್ತಿಕೇಯನ್ ಆಕ್ಷನ್ ಕಟ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ UI Review: ಪ್ರೇಕ್ಷಕನನ್ನೇ ವಿಮರ್ಶೆಗೆ ಒಡ್ಡುವ ಉಪ್ಪಿ ಪ್ರಪಂಚ!
‘ಮ್ಯಾಕ್ಸ್’ ಚಿತ್ರದಲ್ಲಿ ಒಂದು ರಾತ್ರಿಯಲ್ಲಿ ನಡೆಯುವ ಕಥೆಯಿದೆ. ಹಾಗಾಗಿ ಮಾಮೂಲಿ ಕಮರ್ಷಿಯಲ್ ಸಿನಿಮಾಗಳಲ್ಲಿ ಇರುವ ಅಂಶಗಳು ಇರಲ್ಲ. ಬದಲಿಗೆ ಮಾಸ್ ಪ್ರೇಕ್ಷಕರಿಗಾಗಿ ಭರ್ಜರಿ ಮನರಂಜನೆ ಕಾದಿದೆ. ಆಕ್ಷನ್ ಡೋಸ್ ಕೊಂಚ ಹೆಚ್ಚೇ ಇರುತ್ತದೆ ಎನ್ನುವುದು ಸ್ಯಾಂಪಲ್‌ಗಳಲ್ಲಿ ಗೊತ್ತಾಗುತ್ತಿದೆ. ಈಗಾಗಲೇ ಸೆನ್ಸಾರ್ ಮುಗಿಸಿ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ.
ಸೆನ್ಸಾರ್ ಮಂಡಳಿ ‘ಮ್ಯಾಕ್ಸ್’ ಚಿತ್ರಕ್ಕೆ ಸಣ್ಣ ಸಣ್ಣ ಬದಲಾವಣೆಗಳನ್ನು ಸೂಚಿಸಿದೆ. ಮುಖ್ಯವಾಗಿ ಕೆಲ ಸನ್ನಿವೇಶಗಳಲ್ಲಿ “ಧೂಮಪಾನ ಆರೋಗ್ಯಕ್ಕೆ ಹಾನಿಕರ” ಎನ್ನುವ ಡಿಸ್ಕ್‌ಕ್ಲಮೇರ್ ಹಾಕುವಂತೆ ಸೂಚಿಸಿದೆ. ದೃಶ್ಯವೊಂದರಲ್ಲಿ ನಟಿಸಿರುವ ಹುಡುಗಿಯ ಪೋಷಕರಿಂದ NOC ಪಡೆಯುವಂತೆ ಹೇಳಿದೆ. ಡ್ರಗ್ ಬಳಕೆಯ ಸನ್ನಿವೇಶವೊಂದರಲ್ಲಿ ಡಿಸ್ಕ್‌ಕ್ಲಮೇರ್ ಹಾಕುವಂತೆ ಸೂಚಿಸಲಾಗಿದೆ. ಕೆಲವು ಕಡೆ ಆಡಿಯೋ ಮ್ಯೂಟ್ ಅಥವಾ ಬದಲಿಸುವಂತೆ ಹೇಳಲಾಗಿದೆ. ಸಾಕಷ್ಟು ಕಡೆಗಳಲ್ಲಿ ಸ್ಮೋಕಿಂಗ್ ದೃಶ್ಯಗಳನ್ನು ಕಮ್ಮಿ ಮಾಡುವಂತೆ ತಿಳಿಸಿದೆ. ನಾಯಕ ಅರ್ಜುನ್ ಮಹಾಕ್ಷನ್ ಸಿಗರೇಟ್ ಹೊತ್ತಿಸಿಕೊಳ್ಳುವ ದೃಶ್ಯಗಳನ್ನು ತಿದ್ದಿ ತೀಡುವಂತೆ ಹೇಳಲಾಗಿದೆ. ಒಟ್ಟಾರೆ ಸಿನಿಮಾ ನೋಡಿ ಸೆನ್ಸಾರ್ ಮಂಡಳಿ ಯು/ಎ ಸರ್ಟಿಫಿಕೇಟ್ ಕೊಟ್ಟಿದೆ.