ಚಿತ್ರರಂಗದ ಗಾಸಿಪ್ ಗಳ ಸುದ್ದಿಜಾಲಗಳ ವೂಹ ಪೋಹಗಳಿಗೆ ತಮನ್ನಾ ಮೌನ ಮುರಿದು ಮಾತನಾಡಿದ್ದಾರೆ. ವಿಜಯ್ ವರ್ಮಾ ನನ್ನ ಸಂತೋಷದ ಸ್ಥಳ, ನಾನು ಆಳವಾಗಿ ಕಾಳಜಿ ವಹಿಸುವ ವ್ಯಕ್ತಿ’ ಎಂದು ಹೇಳಿದ್ದಾರೆಇತ್ತೀಚಿನ ಸಂದರ್ಶನವೊಂದರಲ್ಲಿ, ತಮನ್ನಾ ಭಾಟಿಯಾ ನಟ ವಿಜಯ್ ವರ್ಮಾ ಜೊತೆಗಿನ ಡೇಟಿಂಗ್ ಬಗ್ಗೆ ಮನಸು ತೆರೆದುಕೊಂಡರು .ತಮನ್ನಾ ವಿಜಯ್ ವರ್ಮಾರನ್ನು ತನ್ನ ‘ಸಂತೋಷದ ಸ್ಥಳ’ ಎಂದು ಕರೆದು ಅವನ ಸುತ್ತಲೂ ಮೊಟ್ಟೆಯ ಚಿಪ್ಪಿದೆ ಅದರ ಮೇಲೆ ಯಾರೂ ನಡೆಯುವ ಅಗತ್ಯವಿಲ್ಲ ಎಂದು ಹೇಳಿದಳು.
ಇದನ್ನೂ ಓದಿ: ಮಾಸ್ ಮಹಾರಾಜ ರವಿತೇಜ ಹೊಸ ಸಿನಿಮಾಗೆ ಈಗಲ್ ಟೈಟಲ್ ಫಿಕ್ಸ್…ಸಂಕ್ರಾಂತಿ ಹಬ್ಬಕ್ಕೆ ತೆರೆಗೆ ಬರಲಿದೆ ಚಿತ್ರ
ನಮಗೆಲ್ಲಾ ತಮನ್ನಾ ಭಾಟಿಯ ಬಗ್ಗೆ ಎಲ್ಲರಿಗೂ ತಿಳಿದಿದೆ. ಉತ್ತರ ಭಾರತದ ಪಂಜಾಬಿ ಹುಡುಗಿಯಾದರೂ ನೆಲೆಕಂಡುಕೊಂಡಿದ್ದು ದಕ್ಷಿಣ ಭಾರತದಲ್ಲೇ. ಮತ್ತು ತಮನ್ನಾ ದಕ್ಷಿಣ ಭಾರತದವಳೇ ಆಗಿಹೋಗಿದ್ದಳು ಕೂಡ. ಇತ್ತೀಚೆಗಿನ ಕೆ ಜಿ ಎಫ್ ನಲ್ಲಿ “ಜೋಕೆ ನಾನು ಕತ್ತಿಯ ಅಂಚು” ಎಂದು ಕನ್ನಡದ್ಲಲೂ ಕಣ್ಣು ಹಾರಿಸಿದ್ದಳು ಆ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾವಾಗಿ ಹೆಸರುವಾಸಿ ಆಯಿತು ಈ ಚೆಂದುಳ್ಳಿ ಚೆಲುವೆಯ ಜೊತೆ ಬದುಕಿನ ದಾರಿ ತುಳಿಯುತ್ತಿರುವ ಈ ವಿಜಯ್ ವರ್ಮಾ ಮೂಲತಃ ಹೈದರಾಬಾದ್ ನ ಹುಡುಗ ವಿಜಯ್ ವರ್ಮಾರವರು ಹೈದರಾಬಾದ್‌ನಲ್ಲಿ ರಂಗಭೂಮಿ ಕಲಾವಿದರಾಗಿ ತಮ್ಮ ನಟನಾ ಪ್ರಯಾಣವನ್ನು ಪ್ರಾರಂಭಿಸಿದರು. FTII ನಲ್ಲಿ ನಟನಾ ಶಿಕ್ಷಣವನ್ನು ಪಡೆಯಲು ಎರಡು ವರ್ಷಗಳ ಕಾಲ ಪುಣೆಗೆ ತೆರಳಲು ನಿರ್ಧರಿಸಿದರು. ಮೊದಲು ಅವರು ಹಲವಾರು ನಾಟಕಗಳಲ್ಲಿ ಕೆಲಸ ಮಾಡಿದರು. ತಮ್ಮ ಸ್ನಾತಕೋತ್ತರ ಕೋರ್ಸ್ ಮುಗಿಸಿದ ನಂತರ, ಅವರು ನಟನೆಯ ಕೆಲಸವನ್ನು ಹುಡುಕುತ್ತಾ ಮುಂಬೈಗೆ ಬಂದು ನೆಲೆಯೂರಿದರು.
ಇದನ್ನೂ ಓದಿ: ‘ಆದಿಪುರುಷ್’ ಕನ್ನಡ ಸೆಲೆಬ್ರೆಟಿ ಶೋನಲ್ಲಿ ಯಾರೆಲ್ಲಾ ಭಾಗಿಯಾಗಲಿದ್ದಾರೆ ಗೊತ್ತಾ?
ಅವರ ಮೊದಲ ನಟನೆಯ ಕೆಲಸವೆಂದರೆ ರಾಜ್ ನಿಡಿಮೋರು ಮತ್ತು ಕೃಷ್ಣ ಡಿಕೆ ಅವರ ಶೋರ್ ಎಂಬ ಕಿರುಚಿತ್ರ, ಈ ಕಿರುಚಿತ್ರವು ಚಿತ್ರೋತ್ಸವಗಳಲ್ಲಿ ಹೆಚ್ಚು ಮೆಚ್ಚುಗೆ ಗಳಿಸಿತು ಮತ್ತು ಆ ವರ್ಷ ನ್ಯೂಯಾರ್ಕ್‌ನಲ್ಲಿ ನಡೆದ MIAAC ಉತ್ಸವದಲ್ಲಿ ಅತ್ಯುತ್ತಮ ಕಿರುಚಿತ್ರವನ್ನು ಗೆದ್ದುಕೊಂಡಿತು. ಅವರು ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದ ಪಿಂಕ್ ಚಿತ್ರದಲ್ಲೂ ನಟಿಸಿ ಗುರುತಿಸಿಕೊಂಡರು. ವಿಜಯ್ ವರ್ಮಾ ಹಿಂದಿ ಚಿತ್ರರಂಗದ ಮುಖ್ಯ ಭೂಮಿಕೆಯಲ್ಲಿ ಕೆಲಸ ಮಾಡುವ ಭಾರತೀಯ ನಟ . ವಿಜಯ್ ವರ್ಮಾ2006 ರಲ್ಲಿ ಬಿಡುಗಡೆಯಾದ ಪಿಂಕ್ ಚಿತ್ರದಲ್ಲಿನ ಪಾತ್ರದೊಂದಿಗೆ ಉತ್ತಮ ನಟನಾಗಿ ಗುರುತಿಸಿಕೊಂಡರು ಮತ್ತು ನಂತರ MCA, ಗಲ್ಲಿ ಬಾಯ್, ಬಾಘಿ 3, ಡಾರ್ಲಿಂಗ್ಸ್, ಮತ್ತು ವೆಬ್ ಸೀರಿಸ್ ನಲ್ಲಿ ನಟಿಸಿ ಖ್ಯಾತಿ ಪಡೆದಿದ್ದಾರೆ. ಇದೇ ವಿಜಯ್ ವರ್ಮಾ ಈಗ ತಮನ್ನಾ ಜೊತೆ ಸುದ್ದಿಯಲ್ಲಿದ್ದಾರೆ.