ದಳಪತಿ ವಿಜಯ್ ಈಗ ತಮಿಳುನಾಡು ವಿಧಾನಸಭಾ ಚುನಾವಣೆಗೆ ಸಿದ್ಧತೆಗಳಲ್ಲಿ ಬ್ಯುಸಿಯಾಗಿದ್ದಾರೆ. ರಾಜ್ಯದ ಪ್ರಚಾರದ ಜೊತೆ ಜೊತೆಗೆ, ಅಭಿಮಾನಿಗಳನ್ನು ಮರೆಯಲಿಲ್ಲ – ದೀಪಾವಳಿಗೆ ಅಭಿಮಾನಿಗಳಿಗೆ ಸರ್ಪ್ರೈಸ್ ಗಿಫ್ಟ್ ನೀಡಲು ಯೋಜನೆ ರೂಪಿಸಿದ್ದಾರೆ.

ಮುಂದಿನ ವರ್ಷದ ಆರಂಭದಲ್ಲಿ “ಜನನಾಯಕನ್ (Jana Nayagan)” ಚಿತ್ರದ ಮೂಲಕ ಚಿತ್ರಮಂದಿರಗಳಲ್ಲಿ ಬಲವಾದ ಪ್ರವೇಶ ಮಾಡಲಿದ್ದಾರೆ. ಚಿತ್ರದ ಆಡಿಯೋ ರಿಲೀಸ್ ಡಿಸೆಂಬರ್ 27 ರಂದು ಮಲೇಶಿಯಾದಲ್ಲಿ ನಡೆಯಲಿದೆ. ಅದಕ್ಕೂ ಮುನ್ನ, ವಿಶೇಷವಾಗಿ ವಿಜಯ್ ಅವರ ಧ್ವನಿಯಲ್ಲಿ ಮೊದಲ ಹಾಡನ್ನು ಬಿಡುಗಡೆ ಮಾಡುವುದಾಗಿ ಮಾಹಿತಿ ಲಭ್ಯವಾಗಿದೆ.

ಟಿವಿಕೆ ಹೆಸರಲ್ಲಿ ಹೊಸ ಪಕ್ಷವನ್ನು ಸ್ಥಾಪಿಸಿರುವ ವಿಜಯ್, ರಾಜಕೀಯ ಕಾರ್ಯಗಳಲ್ಲಿ ತೊಡಗಿರುವ ಮಧ್ಯೆ, ತಮ್ಮ ಸಿನಿಮಾ ಅಭಿಮಾನಿಗಳನ್ನು ಕೂಡ ಸಂತೋಷಪಡಿಸಲು, ಈ ಸರ್ಪ್ರೈಸ್ ಹಾಡನ್ನು ದೀಪಾವಳಿಗೆ ನೀಡಲು ಸಜ್ಜಾಗಿದ್ದಾರೆ. ನಿರ್ಮಾಣ ಸಂಸ್ಥೆ ಕೆಲವೇ ದಿನಗಳಲ್ಲಿ ಅಧಿಕೃತವಾಗಿ ಘೋಷಣೆ ಮಾಡಲಿದೆ.
ಮಾಸ್ ಪ್ರೇಕ್ಷಕರ ಮಹಾನಟ ವಿಜಯ್ ಫ್ಯಾನ್ಸ್‌ಗಾಗಿ ಇದು ವಿಶೇಷ ಟ್ರೀಟ್ ಆಗಿದ್ದು, ಅಭಿಮಾನಿಗಳು ಉತ್ಸಾಹದಿಂದ ಕಾಯುತ್ತಿದ್ದಾರೆ.
