ಚೆನ್ನೈ: ದಳಪತಿ ವಿಜಯ್ ನಾಯಕರಾಗಿರುವ ಹೊಸ ಸಿನಿಮಾ ‘ಗೋಟ್’ ಮೊನ್ನೆಯಷ್ಟೇ ಘೋಷಣೆಯಾಗಿದ್ದು, ಫಸ್ಟ್ ಲುಕ್ ಕೂಡಾ ರಿವೀಲ್ ಮಾಡಲಾಗಿತ್ತು.
ಆದರೆ ಗೋಟ್ ಸಿನಿಮಾದ ಪೋಸ್ಟರ್ ನೋಡಿ ಅನೇಕರು ಟೀಕಾಪ್ರಹಾರ ನಡೆಸಿದ್ದಾರೆ. ಕಾರಣ ಇದು ಹಾಲಿವುಡ್ ನ ವಿಲ್ ಸ್ಮಿತ್ ನಟಿಸಿದ್ದ ಜೆಮಿನಿ ಮ್ಯಾನ್ ಸಿನಿಮಾದ ಕತೆಯ ನಕಲು ಎಂದು ಟೀಕೆಗಳು ಕೇಳಿಬಂದಿತ್ತು.
ಆದರೆ ಗೋಟ್ ಸಿನಿಮಾದ ಪೋಸ್ಟರ್ ನೋಡಿ ಅನೇಕರು ಟೀಕಾಪ್ರಹಾರ ನಡೆಸಿದ್ದಾರೆ. ಕಾರಣ ಇದು ಹಾಲಿವುಡ್ ನ ವಿಲ್ ಸ್ಮಿತ್ ನಟಿಸಿದ್ದ ಜೆಮಿನಿ ಮ್ಯಾನ್ ಸಿನಿಮಾದ ಕತೆಯ ನಕಲು ಎಂದು ಟೀಕೆಗಳು ಕೇಳಿಬಂದಿತ್ತು.
ಸಿನಿಮಾ ವಿಮರ್ಶಕರೊಬ್ಬರು ಪೋಸ್ಟರ್ ನೋಡಿ ಟ್ವಿಟರ್ ನಲ್ಲಿ ಟೀಕಿಸಿದ್ದು, ದಳಪತಿ ವಿಜಯ್ ಗೆ ಇಂತಹ ಸಿನಿಮಾಗಳು ಸರಿ ಹೊಂದಲ್ಲ. ಇದೆಲ್ಲಾ ಅಜಿತ್ ಕುಮಾರ್, ಮಹೇಶ್ ಬಾಬು ಅವರಂತಹ ನಟರಿಗೆ ಸರಿ. ಯಾಕೆ ಅವರಿಂದ ಇಂತಹ ಸಿನಿಮಾ ಮಾಡಿಸುತ್ತಿದ್ದೀರಿ ಎಂದು ಟೀಕಿಸಿದ್ದರು. ಇದರ ಬೆನ್ನಲ್ಲೇ ನಿರ್ದೇಶಕ ವೆಂಕಟ್ ಪ್ರಭು ಪ್ರತಿಕ್ರಿಯಿಸಿದ್ದು, ‘ಸಾರಿ ಸಹೋದರ. ನಿಮ್ಮಿಂದ ಇನ್ನಷ್ಟು ಉತ್ತಮ ಪ್ರತಿಕ್ರಿಯೆ ನಿರೀಕ್ಷಿಸಿದ್ದೆ’ ಎಂದು ಟಾಂಗ್ ಕೊಟ್ಟಿದ್ದಾರೆ.