Sandalwood Leading OnlineMedia

ತೆಲುಗಿನಲ್ಲಿ ಬ್ಯಾನ್​ ಆಗ್ತಾರ ಚಂದನ್​?

ತೆಲುಗಿನ ಸೀರಿಯಲ್ ಸೆಟ್‌ನಲ್ಲಿ ಕನ್ನಡ ನಟ ಚಂದನ್‌ (Chandan) ಮೇಲೆ ಹಲ್ಲೆ ವಿಚಾರವಾಗಿ ಈಗಾಗಲೇ ಹಲವಾರು ಸುದ್ದಿಗಳು ಹರಿದಾಡಿದೆ. ಚಂದನ್ ಸಹ ನಿನ್ನೆಯಷ್ಟೇ ಸುದ್ದಿಗೋಷ್ಠಿ ನಡೆಸಿ ಮಾಡದ ತಪ್ಪಿಗೆ ತನ್ನ ಮೇಲೆ ತೆಲುಗು ಸೀರಿಯಲ್ ಸೆಟ್‌ನಲ್ಲಿ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿದ್ದರು. ಅಲ್ಲದೇ, ಈ ಕಾರಣದಿಂದ ನಾನು ಮತ್ತೆಂದೂ ತೆಲುಗಿನ ಸಿರೀಯಲ್‌ಗೆ ಹೋಗಲ್ಲ ಎಂದು ಚಂದನ್ ಹೇಳಿದ್ದರು. ಆದರೆ ಇದೀಗ ತೆಲುಗಿನ ಟಿಲಿವಿಶನ್ ಟೆಕ್ನೀಶಿಯನ್ಸ್ ಹಾಗು ವರ್ಕರ್ಸ್ ಫೆಡರೇಶನ್ ಬರೆದಿರುವ ಪತ್ರವೊಂದು ವೈರಲ್​ ಆಗಿದ್ದು, ಈ ಕಥೆಗೆ ಬೇರೆ ಟ್ವಿಸ್ಟ್​ ಸಿಕ್ಕಿದೆ.

ಈಗ ಚಂದನ್ ಕುಮಾರ್ (Chandan Kumar) ಅವರ ಮೇಲೆ ಕನಿಷ್ಠ ಎರಡು ವರ್ಷ ಬ್ಯಾನ್ (2 years ban) ಹೇರುವಂತೆ ಆಗ್ರಹ ಕೇಳಿ ಬಂದಿದೆ. ‘ತೆಲುಗು ಕಿರುತೆರೆ ವಿರುದ್ಧ ಚಂದನ್ ಸುಳ್ಳು ಆರೋಪ ಮಾಡಿದ್ದಾರೆ. ಹೀಗಾಗಿ, ಅವರು ತೆಲುಗು ಒಟಿಟಿ ಮತ್ತು ಟಿವಿಯಲ್ಲಿ ಕೆಲಸ ಮಾಡದಂತೆ ಅವರ ಮೇಲೆ ನಿಷೇಧ ಹೇರಬೇಕು’ ಎಂದು ತೆಲುಗು ಟಿವಿ ಟೆಕ್ನೀಶಿಯನ್ಸ್​ ಹಾಗೂ ವರ್ಕರ್ಸ್​ ಇಂಡಸ್ಟ್ರಿ ಫೆಡರೇಷನ್​ ಅವರು ತೆಲುಗು ಟೆಲಿವಿಶನ್ ನಿರ್ಮಾಪಕರ ಮಂಡಳಿಗೆ ಮನವಿ ಪತ್ರ ಸಲ್ಲಿಕೆ ಮಾಡಿದ್ದಾರೆ.

ಶ್ರೀಮತಿ ಶ್ರೀನಿವಾಸ್ (Srimati Srinivas) ಶೂಟಿಂಗ್ ಸಂದರ್ಭದಲ್ಲಿ ರಂಜಿತ್ ಅವರು ನಿರ್ದೇಶಕರ ಆಣತಿಯಂತೆ ಚಂದನ್ ಅವರನ್ನು ಕರೆದಿದ್ದಾರೆ. ಈ ವೇಳೆ ಚಂದನ್​ ಕುಮಾರ್ ಅವರು ರಂಜಿತ್​ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿದ್ದಾರೆ. ಇದರಲ್ಲಿ ರಂಜಿತ್ ಅವರ ತಪ್ಪು ಇಲ್ಲ. ಚಂದನ್ ಅವರನ್ನು ಕನಿಷ್ಠ ಎರಡು ವರ್ಷಗಳ ಕಾಲ ತೆಲುಗು ಒಟಿಟಿ ಹಾಗೂ ತೆಲುಗು ಧಾರಾವಾಹಿಗಳಿಂದ ಬ್ಯಾನ್ ಮಾಡಬೇಕು ಎಂಬುದು ನಮ್ಮ ಕೋರಿಕೆ’ ಎಂದು ಟಿವಿ ಟೆಕ್ನೀಶಿಯನ್ಸ್​ ಹಾಗೂ ವರ್ಕರ್ಸ್​ ಇಂಡಸ್ಟ್ರಿ ಫೆಡರೇಷನ್​ ಅವರು ಟೆಲಿವಿಶನ್ ನಿರ್ಮಾಪಕರ ಮಂಡಳಿಗೆ ಸಲ್ಲಿಕೆ ಮಾಡಿದ ಮನವಿಯಲ್ಲಿ ಕೋರಿದ್ದಾರೆ.

 

 

Share this post:

Translate »