Left Ad
ಸಂಕ್ರಾಂತಿಗೆ ತಮಿಳು, ತೆಲುಗು ಸ್ಟಾರ್ ಸಿನಿಮಾಗಳ ಅಬ್ಬರ - Chittara news
# Tags

ಸಂಕ್ರಾಂತಿಗೆ ತಮಿಳು, ತೆಲುಗು ಸ್ಟಾರ್ ಸಿನಿಮಾಗಳ ಅಬ್ಬರ

ಹೈದರಾಬಾದ್: ಸಂಕ್ರಾಂತಿ ಹಬ್ಬಕ್ಕೆ ಇಂದು ತೆಲುಗು, ತಮಿಳು ಭಾಷೆಯ ಸ್ಟಾರ್ ನಟರ ಸಿನಿಮಾಗಳು ಸಾಲು ಸಾಲಾಗಿ ಬಿಡುಗಡೆಗೆ ಸಜ್ಜಾಗಿದೆ.
ಸಂಕ್ರಾಂತಿ ಎಂದರೆ ದಕ್ಷಿಣ ಭಾರತೀಯರಿಗೆ ವಿಶೇಷ ಹಬ್ಬ. ಸಾಮಾನ್ಯವಾಗಿ ಈ ವಿಶೇಷ ದಿನಕ್ಕೆ ಸ್ಟಾರ್ ನಟರು ತಮ್ಮ ಸಿನಿಮಾ, ಸಿನಿಮಾ ಬಗ್ಗೆ ಅಪ್ ಡೇಟ್ ಕೊಡುವುದು ಸಾಮಾನ್ಯ.
ಈ ಬಾರಿ ಸಂಕ್ರಾಂತಿ ತಮಿಳು ಮತ್ತು ತೆಲುಗಿನ ಸ್ಟಾರ್ ನಟರ ಸಾಲು ಸಾಲು ಸಿನಿಮಾಗಳು ಬಿಡುಗಡೆಯಾಗುತ್ತಿವೆ. ತೆಲುಗಿನಲ್ಲಿ ಪ್ರಿನ್ಸ್ ಮಹೇಶ್ ಬಾಬು ನಾಯಕರಾಗಿರುವ ಗುಂಟೂರು ಖಾರಂ, ತೇಜಾ ನಾಯಕರಾಗಿರುವ ಹನುಮಾನ್, ದಗ್ಗುಬಟ್ಟಿ ವೆಂಕಟೇಶ್ ನಟನೆಯ ಸೈಂಧವ್, ರವಿತೇಜ ನಾಯಕರಾಗಿರುವ ಈಗಲ್, ಅಕ್ಕಿನೇನಿ ನಾಗಾರ್ಜುನ, ಆಶಿಕಾ ರಂಗನಾಥ್ ಪ್ರಮುಖ ಪಾತ್ರದಲ್ಲಿರುವ ನಾ ಸಾಮಿ ರಂಗ ಸಿನಿಮಾ ಸಂಕ್ರಾಂತಿಗೆ ರಿಲೀಸ್ ಆಗಲಿದೆ. ತಮಿಳಿನಲ್ಲಿ ಧನುಷ್ ನಾಯಕರಾಗಿರುವ ಕ್ಯಾಪ್ಟನ್ ಮಿಲ್ಲರ್, ಹಿಂದಿಯ ಮೇರಿ ಕ್ರಿಸ್ ಮಸ್ ಸಂಕ್ರಾಂತಿಗೆ ಬಿಡುಗಡೆಯಾಗುವುದಾಗಿ ಘೋಷಣೆಯಾಗಿದೆ.
Spread the love
Translate »
Right Ad