ಧಾರಾವಾಹಿ ಮೂಲಕ ಮನೆಮಂದಿಗೆಲ್ಲ ಮನರಂಜನೆ ನೀಡೋ ಕಿರುತೆರೆ ತಾರೆಗಳು ಟೆಲಿವಿಷನ್ ಕ್ರಿಕೆಟ್ ಲೀಗ್ (ಟಿಸಿಎಲ್) ಮೂಲಕ ಬ್ಯಾಟ್ ಬಾಲ್ ಹಿಡಿದು ರಿಲ್ಯಾಕ್ಸ್ ಮೂಡ್ ನತ್ತ ಜಾರೋಕೆ ಸಜ್ಜಾಗಿದ್ದಾರೆ. ಪ್ರತಿ ವರ್ಷದಂತೆ ಈ ವರ್ಷವೂ ‘ಟೆಲಿವಿಷನ್ ಕ್ರಿಕೆಟ್ ಲೀಗ್’ ಕಲರ್ ಫುಲ್ ಆಗಿರಲಿದ್ದು ನಾಲ್ಕನೇ ಸೀಸನ್ ಡಿಸೆಂಬರ್ ನಲ್ಲಿ ಆರಂಭವಾಗಲಿದೆ.
ಈವಾರ ಚಿತ್ರಮಂದಿರಗಳಲ್ಲಿ ಬಹುನಿರೀಕ್ಷಿತ `ಕುಳ್ಳನ ಹೆಂಡತಿ’
ವಾಸವಿ ವೆಂಚರ್ಸ್ ನಡಿ ದೀಪಕ್, ಮಂಜೇಶ್ (ಮನು), ದಿವ್ಯ ಪ್ರಸಾದ್ ನೇತೃತ್ವದಲ್ಲಿ ನಡೆಯುವ ‘ಟಿಸಿಎಲ್’ ಈಗಾಗಲೇ ಮೂರು ಸೀಸನ್ ಯಶಸ್ವಿಯಾಗಿ ಪೂರೈಸಿದ್ದು, ನಾಲ್ಕನೇ ಸೀಸನ್ ಗೆ ಸಕಲ ರೀತಿಯಲ್ಲೂ ತಯಾರಿ ನಡೆಯುತ್ತಿದೆ. ಈ ಬಾರಿ ಒಟ್ಟು ಆರು ತಂಡಗಳಿರಲಿವೆ. ಗ್ಯಾಂಗ್ ಗರುಡಾಸ್, ಗಜಪಡೆ ವಾರಿಯರ್ಸ್, ಚಾಂಪಿಯನ್ ಚೀತಾಸ್, ಜಟಾಯು ಜಯಂಟ್ಸ್, ಕ್ರೇಜಿ ಕಿಲ್ಲರ್ಸ್, ರೋರಿಂಗ್ ಲಯನ್ಸ್ ಎಂದು ತಂಡಗಳಿಗೆ ಹೆಸರಿಡಲಾಗಿದೆ. ಮಾಸ್ಟರ್ ಆನಂದ್, ಕಿರಿಕ್ ಕೀರ್ತಿ, ವಿವಾನ್ ಸುನೀಲ್, ಹೇಮಂತ್, ಹರ್ಷ ಸಿ. ಎಂ ಗೌಡ, ಅರ್ಜುನ್ ಯೋಗಿ ತಂಡಗಳ ನಾಯಕತ್ವ ವಹಿಸಿಕೊಂಡಿದ್ದು, ಕಾರ್ತಿಕ್ ಮಹೇಶ್, ಹರೀಶ್ ಗೌಡ, ವಿಕಾಸ್, ಮಂಜು ಪಾವಗಡ, ಕರಿಬಸವ, ಶ್ರೀರಾಮ್ ಉಪನಾಯಕರಾಗಿದ್ದಾರೆ. ಆರು ತಂಡಗಳ ಮೂಲಕ ಒಟ್ಟು110 ಕಿರುತೆರೆ ಕಲಾವಿದರು ಕ್ರಿಕೆಟ್ ಲೀಗ್ ನಲ್ಲಿ ಪಾಲ್ಗೊಳ್ಳಲಿದ್ದಾರೆ. ಪ್ರತಿ ತಂಡಕ್ಕೂ ಸೆಲೆಬ್ರೆಟಿ ಅಂಬಾಸಿಡರ್ ಇರಲಿದ್ದು, ಒಂದೊಂದು ತಂಡಕ್ಕೆ ಮೂರು ಜನ ಅಂಬಾಸಿಡರ್ ಇರಲಿದ್ದಾರೆ. ವರ್ಷಿತಾ, ಅಮೂಲ್ಯ, ಅಕ್ಷಿತ ‘ಗಜಪಡೆ ವಾರಿಯರ್ಸ್’, ಶುಭ ರಕ್ಷಾ, ಸುಶ್ಮಿತಾ ರುದ್ರೇಶ್, ಆಶಿಯಾ ‘ರೋರಿಂಗ್ ಲಯನ್ಸ್’, ಯಶು, ಗಾನವಿ, ವಿಜಯಲಕ್ಷ್ಮಿ ‘ಚಾಂಪಿಯನ್ ಚೀತಾಸ್’, ಪಲ್ಲವಿ ಗೌಡ, ದ್ರವ್ಯ ಶೆಟ್ಟಿ, ತನಿಶಾ ಕುಪ್ಪಂಡ ‘ಗ್ಯಾಂಗ್ ಗರುಡಾಸ್’, ಶೃತಿ ರಮೇಶ್, ಸಾಕ್ಷಿ ಮೇಘನಾ, ಪೂಜಾ ಕ್ಷತ್ರಿಯ ‘ಜಟಾಯು ಜಯಂಟ್ಸ್’, ಮೇಘಾ ಎಸ್. ವಿ, ಅನ್ವಿತಾ, ರಶ್ಮಿತಾ ‘ಕ್ರೇಜಿ ಕಿಲ್ಲರ್ಸ್’ ತಂಡಕ್ಕೆ ಅಂಬಾಸಿಡರ್ ಆಗಿರಲಿದ್ದಾರೆ.
ಡಿಸೆಂಬರ್ ನಲ್ಲಿ ಬಹುನಿರೀಕ್ಷಿತ ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಚಿತ್ರದ ಟ್ರೈಲರ್ ಬಿಡುಗಡೆ
ಪ್ರೋ ವೈಟಲ್ ಹೆಲ್ತ್ ‘ರೋರಿಂಗ್ ಲಯನ್ಸ್’, ಡಾ. ಚೇತನಾ ‘ಜಟಾಯು ಜಯಂಟ್ಸ್’, ಪ್ರಧಾನ್ ಟಿವಿ ‘ಚಾಂಪಿಯನ್ ಚೀತಾಸ್’, ಡಿಜಿ ಇನ್ಫೋಟೆಕ್ ‘ಕ್ರೇಜಿ ಕಿಲ್ಲರ್ಸ್’, ಅಮ್ಮಾಸ್ ಫುಡ್ ‘ಗ್ಯಾಂಗ್ ಗರುಡಾಸ್’, ಕಿರೀಟಿ ವೆಂಚರ್ಸ್ ‘ಗಜಪಡೆ ವಾರಿಯರ್ಸ್’ ತಂಡದ ಮಾಲೀಕತ್ವ ಹೊಂದಿದ್ದಾರೆ. ಪ್ರತಿ ಬಾರಿಯಂತೆ ಈ ಬಾರಿಯೂ ಟ್ರಿಂಕೋ ಇನ್ಫ್ರಾ ಪ್ರೈವೆಟ್ ಲಿಮಿಟೆಡ್ ಟೈಟಲ್ ಸ್ಪಾನ್ಸರ್ ಮಾಡುತ್ತಿದೆ. ‘ಟಿಸಿಎಲ್’ ಮೂರು ಸೀಸನ್ ಯಶಸ್ವಿಯಾಗಿ ಜರುಗಿದ್ದು, ನಾಲ್ಕನೇ ಸೀಸನ್ ಕೂಡ ಯಶಸ್ವಿಗೊಳಿಸಲು ಸಕಲ ರೀತಿಯಲ್ಲೂ ಸಿದ್ದತೆ ಮಾಡಿಕೊಳ್ಳುತ್ತಿದ್ದಾರೆ ಆಯೋಜಕರು. ಟಿಸಿಎಲ್ ಸೀಸನ್- 4 ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಯೋಜಕರಾದ ದೀಪಕ್ ನವೆಂಬರ್ ಕೊನೆಯಲ್ಲಿ ಟೆಲಿವಿಷನ್ ಕ್ರಿಕೆಟ್ ಲೀಗ್ ಲಾಂಚ್ ಕಾರ್ಯಕ್ರಮ ದೊಡ್ಡ ಮಟ್ಟದಲ್ಲಿ ನಡೆಯಲಿದೆ. ಲಾಂಚ್ ಈವೆಂಟ್ ನಲ್ಲಿ ಸಾರ್ವಜನಿಕರಿಗೂ ಭಾಗವಹಿಸಲು ಅವಕಾಶವಿದೆ. ಸ್ಯಾಂಡಲ್ ವುಡ್ ಸೆಲೆಬ್ರೆಟಿಯಿಂದ ‘ಟಿಸಿಲ್’ ಲಾಂಚ್ ಕಾರ್ಯಕ್ರಮ ನಡೆಯಲಿದ್ದು ಡಿಸೆಂಬರ್ ನಲ್ಲಿ ಲೀಗ್ ಆರಂಭವಾಗಲಿದೆ. ಹಿಂದಿನ ಸೀಸನ್ ಗಳಿಗಿಂತ ಅದ್ದೂರಿಯಾಗಿ ಈ ಸೀಸನ್ ನಡೆಸಲು ತಯಾರಿ ಮಾಡಿಕೊಂಡಿದ್ದೇವೆ. ಎಲ್ಲಾ ಕಿರುತೆರೆ ವಾಹಿನಿಯ ಕಲಾವಿದರನ್ನು ಒಂದೆಡೆ ಸೇರಿಸುವ ಪ್ರಯತ್ನ ಇದಾಗಿದ್ದು ಕ್ರೀಡೆ ಜೊತೆಗೆ ಸ್ನೇಹವನ್ನು ಬೆಸೆಯುವ ಉದ್ದೇಶವನ್ನು ‘ಟಿಸಿಎಲ್’ ಹೊಂದಿದೆ ಎಂದು ದೀಪಕ್ ತಿಳಿಸಿದ್ದಾರೆ.