Sandalwood Leading OnlineMedia

ಭಾಗ್ಯಾ ಮುಂದೆ ಅಹಂಕಾರ ತೋರಿಸಲು ಹೋಗಿ ತಗಲಾಕಿಕೊಂಡ ತಾಂಡವ್..!

ಭಾಗ್ಯಾಳಿಂದ ದೂರ ಹೋಗಬೇಕು ಎಂದು ತಾಂಡವ್ ಮಾಸ್ಟರ್ ಪ್ಲಾನ್ ಮಾಡುತ್ತಿದ್ದರೆ , ಭಾಗ್ಯಾ ಮಾತ್ರ ಹೇಗಾದರೂ ಮಾಡಿ ನನ್ನ ಸಂಸಾರವನ್ನು ಉಳಿಸಿಕೊಳ್ಳಬೇಕು ಎಂದು ಹೆಣಗಾಡುತ್ತಿದ್ದಾಳೆ. ನನ್ನ ಜೀವನದಲ್ಲಿ ಏನೆಲ್ಲಾ ಆಗುತ್ತಿದೆಯೋ ಅದೆಲ್ಲವೂ ಭಾಗ್ಯಾಳಿಂದ. ಅವಳು ನನ್ನ ಜೀವನದಿಂದ ಹೊರ ಹೋದರೆ ಎಲ್ಲವೂ ಸರಿ ಆಗುತ್ತದೆ ಎಂದುಕೊಳ್ಳುತ್ತಾನೆ.

ಭಾಗ್ಯಾ ಬಟ್ಟೆಗಳು ತನ್ನ ಕಪಾಟಿನಲ್ಲಿ ಇರುವುದನ್ನು ನೆನಪಿಸಿಕೊಳ್ಳುವ ತಾಂಡವ್, ಮನೆ ಇಬ್ಭಾಗವಾದ ಮೇಲೂ ಅವಳ ಬಟ್ಟೆಗಳು ನನ್ನ ಕಪಾಟಿನಲ್ಲಿ ಏಕಿರಬೇಕು? ಇವರಿಗೆಲ್ಲಾ ಮನೆ ಭಾಗವಾಗುವುದು ಎಂದರೆ ಏನೆಂದು ತಿಳಿಸಿಕೊಡುತ್ತೇನೆ ಎಂದು ಭಾಗ್ಯಾ ಬಟ್ಟೆಗಳನ್ನು ತೆಗೆದುಕೊಂಡು ಬಂದು ಅವರಿರುವ ಭಾಗಕ್ಕೆ ಎಸೆಯುತ್ತಾನೆ.

ಇದನ್ನೂ ಓದಿ:ಈ ಶುಕ್ರವಾರ ತೆರೆಗೆ ಬರ್ತಿದೆ ‘ನಾಲ್ಕನೇ ಆಯಾಮ’..ಯುವ ಪ್ರತಿಭೆ ಗೌತಮ್ ಜೊತೆ ರಚನಾ ಯಾನ

ಇದನ್ನು ನೋಡಿದ ಸುನಂದಾ ಹಾಗೂ ಪೂಜಾ ಬೇಸರಗೊಳ್ಳುತ್ತಾರೆ. ಎಷ್ಟು ದಿನ ಹೀಗೆ ಮಾಡುತ್ತೀರಿ? ದ್ವೇಷ ಸಾಧಿಸುತ್ತಲೇ ಇರುತ್ತೀರಿ ಎಂದು ಕೇಳುತ್ತಾರೆ. ಅದೇ ಸಮಯಕ್ಕೆ ಕುಸುಮಾ, ಧರ್ಮರಾಜ್, ಭಾಗ್ಯಾ ಹಾಗು ಮಕ್ಕಳು ಅಲ್ಲಿಗೆ ಬರುತ್ತಾರೆ. ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿರುವುದನ್ನು ನೋಡಿ ಗೊಂದಲಕ್ಕೆ ಒಳಗಾಗುತ್ತಾರೆ.

ನೀನು ಆದಷ್ಟು ಬೇಗ ನನ್ನ ಜೀವನದಿಂದ ಹೊರ ಹೋಗು. ಈ ಮನೆಯನ್ನು ಬಿಟ್ಟು ಹೋಗಲು ನಿನಗೆ ಏನು ಬೇಕು ಹೇಳು. ಒಡವೆ ಬೇಕಾ? ಹಣ ಬೇಕಾ? ನೀನು ಏನು ಕೇಳಿದರೂ ನಾನು ಕೊಡುತ್ತೇನೆ. ದಯವಿಟ್ಟು ನನ್ನ ಜೀವನದಿಂದ ಹೊರ ಹೋಗು ಎನ್ನುತ್ತಾನೆ.

ಇದನ್ನೂ ಓದಿ :ಒಲವಿನ ಪತ್ನಿ ಕಂಡಂತೆ ದ್ವಾರಕೀಶ್

ಇದನ್ನೂ ಓದಿ :ದಪ್ಪ ಆಗಿದ್ದೀನಿ ಅಂದ್ರೆ ಯಾರದ್ದೋ ಜೊತೆಗೆ ಮಜಾ ಮಾಡ್ತಿದ್ದೀನಿ ಅಂದಿದ್ರು : ಜನರ ಮಾತಿಗೆ ನೀತೂ ಕಣ್ಣೀರು

ತನ್ನ ಜೇಬಿನಿಂದ ಹಣ, ಕ್ರೆಡಿಟ್ ಕಾರ್ಡ್ ಎಲ್ಲವನ್ನೂ ಭಾಗ್ಯಾ ಮುಂದೆ ಎಸೆಯುತ್ತಾನೆ. ತಾನು ಏನು ಮಾಡುತ್ತಿದ್ದೇನೆ ಎಂದು ಜ್ಞಾನವೇ ಇಲ್ಲದೆ ತಾಂಡವ್ ಅಂದು ತಾನು ಕದ್ದಿದ್ದ ಭಾಗ್ಯಾ ಹಾಲ್ ಟಿಕೆಟನ್ನೂ ಎಸೆಯುತ್ತಾನೆ. ಅದನ್ನು ತನ್ವಿ ನೋಡಿ, ಅಮ್ಮ ನಿನ್ನ ಹಾಲ್ ಟಿಕೆಟ್ ಎನ್ನುತ್ತಾಳೆ.

ಇದನ್ನೂ ಓದಿ :ದ್ವಾರಕೀಶ್ ಬಯಸಿದಂತೆ ಬಂದಿದೆ ಸಾವು..!

ಅದನ್ನು ನೋಡುವ ಭಾಗ್ಯಾ ಹಾಗೂ ಮನೆ ಮಂದಿಯೆಲ್ಲಾ ಶಾಕ್ ಆಗುತ್ತಾರೆ. ನನ್ನ ಹಾಲ್ ಟಿಕೆಟ್ ನಿಮ್ಮ ಬಳಿ ಹೇಗೆ ಬಂತು. ಅದು ಕಳೆದುಹೋಗಿದ್ದಾ, ಕದ್ದಿದ್ದಾ ಎಂದು ದನಿಯೇರಿಸಿ ಕೇಳುತ್ತಾಳೆ.

Share this post:

Translate »