ಭಾಗ್ಯಾಳನ್ನು ತಾಂಡವ್ ಯಾವಾಗಲೂ ಪ್ರಾಣಿಗಳಿಗೇನೆ ಹೋಲಿಸುತ್ತಾನೆ. ಮನೆಯನ್ನು ನಿಭಾಯಿಸುವುದಕ್ಕೆ ಯಾರಿಗೂ ಹೇಳದಂತೆ ಭಾಗ್ಯಾ ಕೆಲಸಕ್ಕೆ ಹೋಗುತ್ತಿದ್ದಾಳೆ. ಆದರೆ ಇದೇ ಸಂದರ್ಭದಲ್ಲಿ ಗುಂಡಣ್ಣ ಅಡುಗೆ ಮನೆಯಲ್ಲಿ ಏನೋ ಮಾಡಲು ಹೋಗಿ ಕೈ ಸುಟ್ಟುಕೊಂಡಿದ್ದಾನೆ. ಭಾಗ್ಯಾ ಬಂದ ಮೇಲೆ ತಾಂಡವ್ ಅವಳಿಗೆ ಕ್ಲಾಸ್ ತೆಗೆದುಕೊಂಡಿದ್ದಾನೆ.
ಮನೆಯಲ್ಲಿ ಸುನಂದಾ ಪದೇ ಪದೆ ಕುಸುಮಾ ವಿರುದ್ಧ ಮಾತನಾಡುತ್ತಲೇ ಇದ್ದಾಳೆ. ಅತ್ತೆ ಸೊಸೆ ಇಬ್ಬರೂ ಮನೆಯಲ್ಲಿ ಇರುವುದಿಲ್ಲ, ಎಲ್ಲಿ ಹೋಗ್ತಾರೆ ಏನು ಮಾಡ್ತಾರೆ ಯಾರಿಗೂ ತಿಳಿಯುತ್ತಿಲ್ಲ. ನನ್ನ ಮಗಳಂತೂ ನನ್ನ ಮಾತು ಕೇಳುತ್ತಿಲ್ಲ. ಗಂಡ ಹೆಂಡತಿ ಯಾವಾಗ ಸರಿ ಆಗುತ್ತಾರೋ ಎಂದು ಗೋಳಾಡುತ್ತಾಳೆ.
ಹಾಗೇ ಸುನಂದಾ ಧರ್ಮರಾಜ್ಗೆ ಏರುದನಿಯಲ್ಲಿ ಮಾತನಾಡುವುದನ್ನು ನೋಡಿದ ಕುಸುಮಾ, ಅವರು ನಿಮ್ಮ ಬೀಗರು ಸ್ವಲ್ಪ ಗೌರವ ಕೊಟ್ಟು ಮಾತನಾಡಿ. ನನ್ನ ಸೊಸೆ ಜವಾಬ್ದಾರಿ ನನ್ನದು ಎನ್ನುತ್ತಾಳೆ. ಅಷ್ಟರಲ್ಲಿ ಅಲ್ಲಿಗೆ ಬರುವ ತಾಂಡವ್, ಇದೇ ಸಮಯಕ್ಕಾಗಿ ಕಾಯುತ್ತಿರುತ್ತಾನೆ. ಭಾಗ್ಯಾ ಇನ್ನೂ ಮನೆಗೆ ಬಂದಿಲ್ವಾ.
ಮೊದಲೆಲ್ಲಾ ಮನೆಯಲ್ಲೇ ಇರುತ್ತಿದ್ದವಳು ಈಗ ಎಲ್ಲಿಗೆ ಹೋಗುತ್ತಿದ್ದಾಳೆ ಎಂದು ಪ್ರಶ್ನಿಸುತ್ತಾನೆ. ಪಕ್ಕದ ಮನೆಯವರಿಗೆ ನಮ್ಮ ಮನೆಯ ಉಸಾಬರಿ ಬೇಡ ಎಂದು ಕುಸುಮಾ ತಾಂಡವ್ ಹಾಗೂ ಸುನಂದಾ ಬಾಯಿ ಮುಚ್ಚಿಸುತ್ತಾಳೆ.ಅಷ್ಟರಲ್ಲಿ ಭಾಗ್ಯಾ ಮನೆಗೆ ಬರುತ್ತಾಳೆ. ಮಗ ಗುಂಡಣ್ಣ ಕೈ ಸುಟ್ಟುಕೊಂಡಿರುವುದನ್ನು ನೋಡಿ ಮಕ್ಕಳಿಗೆ ಊಟ ಕೊಡದ ಪರಿಸ್ಥಿತಿ ಬಂತಲ್ಲಾ ಎಂದು ನೋವು ವ್ಯಕ್ತಪಡಿಸುತ್ತಾಳೆ. ಮಗನ ಕೈಗೆ ಮುಲಾಮು ಹಚ್ಚುತ್ತಾಳೆ. ಭಾಗ್ಯಾ ಹೋಟೆಲ್ಗೆ ಏಕೆ ಬಂದಿದ್ದು ಎಂಬುದನ್ನು ತಿಳಿದುಕೊಳ್ಳಲು ತಾಂಡವ್, ಮೃಗೀಯವಾಗಿ ವರ್ತಿಸಿದ್ದಾನೆ.
ಹೇಯ್ ಎಮ್ಮೆ ನೀನು ದೇವಸ್ಥಾನಕ್ಕೆ ಹೋಗಿದ್ಯಾ ಅಥವಾ ಬೇರೆ ಎಲ್ಲಾದರೂ ಹೋಗಿದ್ದಾ ಎಂದು ಕೊಂಕು ಮಾತನಾಡುತ್ತಾನೆ. ತಾಂಡವ್ ಮಾತಿಗೆ ಭಾಗ್ಯಾ ಗಾಬರಿ ಆಗುತ್ತಾಳೆ. ಇವರೇಕೆ ಹೀಗೆ ಕೇಳುತ್ತಿದ್ದಾರೆ, ನಾನು ಹೋಟೆಲ್ಗೆ ಹೋಗಿದ್ದು ಇವರೇನಾದರೂ ನೋಡಿದ್ರಾ ಎಂದುಕೊಳ್ಳುತ್ತಾಳೆ.
ಸೊಸೆ ಪರ ನಿಲ್ಲುವ ಕುಸುಮಾ, ಭಾಗ್ಯಾ ನೀನು ಯಾರ ಮಾತಿಗೂ ತಲೆ ಕೆಡಿಸಿಕೊಳ್ಳಬೇಡ ಸುಮ್ಮನಿರು ಎನ್ನುತ್ತಾಳೆ. ಆದರೆ ತಾಂಡವ್ ಮಾತುಗಳಿಗೆ ವೀಕ್ಷಕರ ವಿರೋಧವಿದೆ.