Sandalwood Leading OnlineMedia

ಜೈಲರ್; ಮಿಲ್ಕಿ ಬ್ಯೂಟಿ ತಮನ್ನಾ ಜೊತೆ ಸೂಪರ್ ಸ್ಟಾರ್ ರಜನಿಕಾಂತ್ ಸೂಪರ್ ಸ್ಟೆಪ್!

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಜೈಲರ್ ಸಿನಿಮಾದ ಮಾಸ್ ಲಿರಿಕ್ ಸಾಂಗ್ ರಿಲೀಸ್ ಆಗಿದೆ. ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಈ ಗೀತೆಯಲ್ಲಿ ರಜನಿಗೆ ಜೋಡಿಯಾಗಿ ಮಸ್ತ್ ಡ್ಯಾನ್ಸ್ ಮಾಡಿದ್ದಾರೆ.
ಜೈಲರ್ ಚಿತ್ರದ ಕಾವಾಲಾ ಹಾಡು ಪಕ್ಕಾ ಮಾಸ್ ಸಾಂಗ್ ಆಗಿದೆ.ಇಡೀ ಹಾಡನ್ನ ಆದಿವಾಸಿ ಸೆಟ್‌ನಲ್ಲಿಯೇ ಚಿತ್ರೀಕರಿಸಲಾಗಿದೆ. ಈ ಹಾಡು ರಿಲೀಸ್ ಆದ ಒಂದೇ ಗಂಟೆಯಲ್ಲಿ 1 ಮಿಲಿಯನ್‌ಗೂ ಅಧಿಕ ವೀವ್ಸ್ ಬಂದಿರೋದು ವಿಶೇಷ ಅಂತಲೇ ಹೇಳಬಹುದು. ಸೂಪರ್ ಸ್ಟಾರ್ ಕ್ರೇಜ್ ಇನ್ನೂ ಕಡಿಮೆ ಆಗಿಲ್ಲ ಅನ್ನೋದಕ್ಕೂ ಇದು ಸಾಕ್ಷಿ ಆಗಿದೆ ನೋಡಿ.
ರಜನಿಕಾಂತ್ ಸಿನಿಮಾ ಜೀವನದಲ್ಲಿ ಜೈಲರ್ ವಿಶೇಷ ಸಿನಿಮಾ ಆಗಿದೆ. ಈ ಸಿನಿಮಾದ ನಿರೀಕ್ಷೆ ಕೂಡ ತುಂಬಾನೇ ಇದೆ. ಈ ಹಿನ್ನೆಲೆಯಲ್ಲಿ ಇನ್ನೂ ಒಂದು ಉದಾಹರಣೆ ಕೊಡೋದಾದ್ರೆ, ಈ ಹಾಡಿನ ರೀಲ್ಸ್ ಗಳು ಈಗಾಗಲೇ ಲಕ್ಷ ಲಕ್ಷ ವೀವ್ಸ್ ಕೂಡ ಪಡೆಯುತ್ತಿವೆ.
ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಮತ್ತು ರಜನಿಕಾಂತ್ ಜೊತೆಗೆ ಸಖತ್ ನೃತ್ಯ ಮಾಡಿರೋ ಈ ಹಾಡು ವೈರಲ್ ಆಗುತ್ತಲೇ ಇದೆ. ಜುಲೈ-6 ರಂದು ಸಂಜೆ 6 ಗಂಟೆ ಈ ಕಾವಾಲಾ ಹಾಡನ್ನ ರಿಲೀಸ್ ಮಾಡಲಾಗಿದೆ.ಜೈಲರ್ ಸಿನಿಮಾದ ಸಂಗೀತ ಕೂಡ ಜಬರ್‌ದಸ್ತ್ ಆಗಿದೆ. ಅನಿರುದ್ಧ್ ರವಿಚಂದರ್ ಸಂಗೀತದಲ್ಲಿ ಮಸ್ತ್ ಮಾಸ್ ಸಾಂಗ್ ಬಂದಿದೆ. ಕೇಳುವ ಪ್ರತಿಯೊಬ್ಬರು ಕುಳಿತಲ್ಲಿಯೇ ಹೆಜ್ಜೆ ಹಾಕೋ ರೀತಿಯಲ್ಲಿಯೆ ಇಡೀ ಹಾಡು ಸಂಯೋಜನೆ ಆಗಿದೆ.
ಅರುಣರಾಜಾ ಕಾಮರಾಜ್ ಈ ಒಂದು ಗೀತೆಯನ್ನ ಬರೆದಿದ್ದಾರೆ. ಇದನ್ನ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದರ್ ಹಾಡಿದ್ದಾರೆ. ಶಿಲ್ಪಾ ರಾವ್ ಕೂಡ ಸಾಥ್ ಕೊಟ್ಟಿದ್ದಾರೆ. ಜಾನಿ ಮಾಸ್ಟರ್ ಕೋರಿಯೋಗ್ರಾಫಿ ಮಾಡಿದ್ದಾರೆ. ಪಲ್ಲವಿ ಸಿಂಗ್ ಕಾಸ್ಟೂಮ್ ಡಿಸೈನ್ ಮಾಡಿದ್ದಾರೆ.ಡೈರೆಕ್ಟರ್ ನೆಲ್ಸನ್ ನಿರ್ದೇಶನದ ಈ ಚಿತ್ರದಲ್ಲಿ ಆಯಕ್ಷನ್ ಇದೆ. ಕಾಮಿಡಿಗೂ ಏನೂ ಕೊರತೆ ಇಲ್ಲ. 200 ಕೋಟಿ ಬಜೆಟ್‌ನಲ್ಲಿ ತಯಾರಾಗಿರೊ ಈ ಚಿತ್ರ ಇದೇ ವರ್ಷ ಆಗಸ್ಟ್-10 ರಂದು ರಿಲೀಸ್ ಆಗುತ್ತಿದೆ.
https://youtu.be/RVLNBVK8auM

Share this post:

Related Posts

To Subscribe to our News Letter.

Translate »