ಬಟರ್ ಇಡ್ಲಿ, ತಟ್ಟೆ ಇಡ್ಲಿ, ರವಾ ಇಡ್ಲಿ, ಅರೆರೆ! ಇದೇನಿದು ಫಿಲಂ ಮ್ಯಾಗ್ಜಿನ್ ನಲ್ಲಿ ಹೋಟೆಲ್ ಮೆನು ಅಂತ ಕನ್ಫ್ಯೂಸ್ ಆದ್ರ?! ವೇಟ್, ನಾವು ಇಲ್ಲಿ ಹೋಟೆಲ್ ಇಡ್ಲಿ ಬಗ್ಗೆ ಅಲ್ಲ, ತಮಿಳು ಸ್ಟಾರ್ ಧನುಷ್ ಅವರ ಮುಂದಿನ ಚಿತ್ರದ ಟೈಟಲ್ ‘ಇಡ್ಲಿ ಕಡಾಯ್’ ಹೆಸರೇ ತುಂಬಾ ಕ್ಯಾಚಿ ಆಗಿದೆ. ಗ್ರಾಮೀಣ ಸೊಗಡಿನ ಕಥೆ ಎಂಬುದನ್ನು ಇದು ಸೂಚಿಸುತ್ತದೆ. ಆರುಮುಗ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಮೇಲೆ ಧನುಷ್ ಅಭಿಮಾನಿಗಳು ಹಾಗೂ ಸಿನಿಮಾ ಉತ್ಸಾಹಿಗಳಲ್ಲಿ ಸಾಕಷ್ಟು ಕುತೂಹಲ ಸೃಷ್ಟಿಸಿದೆ. ಈ ವರ್ಷದ ಏಪ್ರಿಲ್ ಅಂತ್ಯಕ್ಕೆ ಸಿನಿಮಾ ಅಭಿಮಾನಿಗಳು ಇಡ್ಲಿಯ ರುಚಿ ಸವಿಯಬಹುದು.
ತಮಿಳಿನ ಬೇಡಿಕೆಯ ಧನುಷ್ ನಿರ್ದೇಶಿಸಿ, ನಟಿಸಿರುವ ‘ಇಡ್ಲಿ ಕಡಾಯಿ’ ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಧನುಷ್, 2025ರ ಏಪ್ರಿಲ್ 10 ರಂದು ಚಿತ್ರ ಬಿಡುಗಡೆಯಾಗಲಿದೆ ಎಂದು ಹೇಳಿದ್ದಾರೆ. ಧನುಷ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ನಾಲ್ಕನೇ ಸಿನಿಮಾ ಇದಾಗಿದೆ. ಈ ಹಿಂದೆ 2012ರಲ್ಲಿ, ‘ಪಾ ಪಾಂಡಿ’ ಇತ್ತೀಚೆಗೆ ಬಿಡುಗಡೆಗೊಂಡ ‘ರಾಯನ್’ ಹಾಗೂ ಮೂರನೇ ಚಿತ್ರ ನಿಲುಕು ಎನ್ ಮೇಲ್ ಎನ್ನಾಡಿ ಕೋಬಂ ಚಿತ್ರವನ್ನು ಅವರು ನಿರ್ದೇಶನ ಮಾಡಿದ್ದರು. ಈ ಚಿತ್ರ ಇನ್ನಷ್ಟೇ ಬಿಡುಗಡೆಯಾಗಬೇಕಿದೆ.
ಡಾನ್ ಪಿಕ್ಚರ್ಸ್‌ನ ಆಕಾಶ್ ಬಾಸ್ಕರನ್ ಈ ಚಿತ್ರವನ್ನು ನರ‍್ಮಾಣ ಮಾಡಿದ್ದಾರೆ. ಅಸುರನ್, ಸೊರರೈ ಪೊಟ್ರುಗೆ ಸಂಗೀತ ನೀಡಿದ್ದ ಜಿ.ವಿ.ಪ್ರಕಾಶ್ ಕುಮಾರ್ ಅವರು ‘ಇಡ್ಲಿ ಕಡಾಯಿ’ ಚಿತ್ರಕ್ಕೂ ಸಂಗೀತ ನಿರ್ದೇಶನ ಮಾಡಿದ್ದಾರೆ.