ನಯನತಾರಾ ಮತ್ತು ವಿಘ್ನೇಶ್ ಶಿವನ್ ಒಂದಲ್ಲಾ ಒಂದು ವಿಚಾರವಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ನಯನತಾರಾ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಸುದ್ದಿ ಹೊರ ಬಿದ್ದಿದೆ. ಪತಿ ವಿಘ್ನೇಶ್ ಮಾಡಿದ ಕೆಲಸದಿಂದ ನಯನ ಆಸ್ಪತ್ರೆ ಸೇರುವಂತಾಗಿದೆ. ಸದ್ಯ ಈ ವಿಚಾರ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಪತಿ ವಿಘ್ನೇಶ್ ಶಿವನ್ ನಯನತಾರಾ ಮೇಲಿನ ಪ್ರೀತಿಯಿಂದ ವೀಕೆಂಡ್ ಸ್ಪೆಷಲ್ ಅಡುಗೆ ಮಾಡಿದ್ದಾರೆ. ಇದನ್ನು ತಿಂದ ನಯನತಾರಾ ಆರೋಗ್ಯ ಹದಗೆಟ್ಟಿದೆಯಂತೆ. ಪತಿ ಮಾಡಿದ ಅಡುಗೆ ನಯನತಾರಾ ಫುಲ್ ವಾಂತಿ ಮಾಡಿಕೊಂಡಿದ್ದಾರಂತೆ.
ವೈದ್ಯರು ನಯನತಾರಾಳನ್ನು ಕೆಲ ಗಂಟೆಗಳ ಕಾಲ ನಿಗಾದಲ್ಲಿಟ್ಟು ಚೇತರಿಸಿಕೊಂಡ ಬಳಿಕ ಡಿಸ್ಚಾರ್ಜ್ ಮಾಡಿದ್ದಾರೆ. ಈಗಷ್ಟೇ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಮನೆಗೆ ಹೋಗಿದ್ದಾರಂತೆ. ಆದರೆ ಈ ಸುದ್ದಿಗೆ ನಯನತಾರಾ ಅಥವಾ ವಿಘ್ನೇಶ್ ಯಾವುದೇ ಅಧಿಕೃತ ಸ್ಪಷ್ಟನೆ ನೀಡಿಲ್ಲ.