ತೆಲುಗು ನಟ ವಿಜಯ್ ವರ್ಮಾ ಹಾಗೂ ನಟಿ ತಮನ್ನಾ ಭಾಟಿಯಾ ಅವರು ಪರಸ್ಪರ ಲವ್ ಮಾಡುತ್ತಿರುವುದು ಎಲ್ಲರಿಗೂ ಗೊತ್ತು. ಆದರೆ ಈ ಜೋಡಿ ನಿಜಕ್ಕೂ ಪ್ರೀತಿಯಲ್ಲಿಲ್ವಾ? ಇಬ್ಬರೂ ಡೇಟ್ ಮಾಡುತ್ತಿರುವುದು ಪಬ್ಲಿಸಿಟಿ ಗಿಮಿಕ್ ಆಗಿತ್ತಾ?ವಿಜಯ್ ವರ್ಮಾ ಅವರು ಇತ್ತೀಚಿನ ವರ್ಷಗಳಲ್ಲಿ ಇನ್ನೂ ಬೆಳೆಯುತ್ತಿರುವ ನಟ.ಆದರೆ ತಮನ್ನಾ ಈಗಾಗಲೇ ಪ್ರಸಿದ್ಧ ನಟಿಯಾಗಿ ಬೆಳೆದಿದ್ದಾರೆ. ಇವರಿಬ್ಬರು ಲಸ್ಟ್ ಸ್ಟೋರಿಸ್ 2ನಲ್ಲಿ ಒಟ್ಟಿಗೆ ನಟಿಸಿದ್ದು ಫೇಮಸ್ ಆಗಿದ್ದಾರೆ.
ಇತ್ತೀಚಿನ ಇಂಟರ್ವ್ಯೂನಲ್ಲಿ ತಮನ್ನಾ ಅವರು ವಿಜಯ್ ವರ್ಮಾ ಅವರ ಹ್ಯಾಪಿ ಪ್ಲೇಸ್ ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ಈಗ ಅದಕ್ಕೆ ಉತ್ತರಿಸಿರುವ ವಿಜಯ್ ವರ್ಮಾ ತಮ್ಮದು ಪಬ್ಲಿಸಿಟಿ ಲವ್ ಅಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದ್ದಾರೆ.ನಿಮ್ಮದು ಪಬ್ಲಿಸಿಟಿ ಲವ್ ಆಗಿದೆಯಾ ಎಂದು ಕೇಳಿದಾಗ ನಟ ನಾನು ತಮನ್ನಾ ಅವರನ್ನು ತುಂಬಾ ಪ್ರೀತಿಸುತ್ತಿದ್ದೇನೆ ಎಂದು ಹೇಳಿದ್ದಾರೆ. ನಾನು ನನ್ನ ಜೀವನದ ರೊಮ್ಯಾನ್ಸ್ ಕಾಲದಲ್ಲಿ ಇರುವುದಾಗಿ ನಟ ಹೇಳಿದ್ದಾರೆ.
ನಾವಿಬ್ಬರೂ ಪರಸ್ಪರ ಡೇಟ್ ಮಾಡುತ್ತಿದ್ದೇವೆ ಎಂದು ಈಗ ಎಲ್ಲರಿಗೂ ಗೊತ್ತಾಗಿರುತ್ತದೆ. ನಾನು ತುಂಬಾ ಖುಷಿಯಿಂದ ಅವರ ಪ್ರೀತಿಯಲ್ಲಿ ಹ್ಯಾಪಿಯಾಗಿದ್ದೇನೆ ಎಂದಿದ್ದಾರೆ. ನನ್ನ ವಿಲನ್ ಕಾಲಘಟ್ಟ ಮುಗಿಯಿತು. ನಾನು ಈಗ ರೊಮ್ಯಾನ್ಸ್ ಕಾಲಕ್ಕೆ ಬಂದಿದ್ದೇನೆ ಎಂದಿದ್ದಾರೆ.ಇಂಟರ್ವ್ಯೂ ಸಂದರ್ಭ ತಮನ್ನಾ ಅವರು ರಿಲೇಷನ್ಶಿಪ್ ಬಗ್ಗೆ ಮಾತನಾಡಿದ್ದಾರೆ. ನಿಮ್ಮ ಸಹನಟರಾಗಿರುವುದಕ್ಕೆ ನೀವು ಅವರ ಜೊತೆ ಆಕರ್ಷಿತರಾಗಲು ಸಾಧ್ಯವಿಲ್ಲ. ನಾನು ಬಹಳಷ್ಟು ಸಹನಟರೊಂದಿಗೆ ಕೆಲಸ ಮಾಡಿದ್ದೇನೆ.ಯಾರಿಗಾದರೂ ಯಾರಾದರೂ ಇಷ್ಟವಾಗಬೇಕೆಂದರೆ ಅವರ ನಡುವೆ ಖಂಡಿತವಾಗಿಯೂ ವಿಶೇಷ ಸಂಬಂಧವಿರುತ್ತದೆ. ಆ ಸಂದರ್ಭದಲ್ಲಿ ಆ ವ್ಯಕ್ತಿ ಜೀವಿಸಲು ಯಾವ ಕೆಲಸ ಮಾಡುತ್ತಾರೆ, ಕಾರಣಗಳೇನೂ ಬೇಕಿಲ್ಲ , ಹಾಗೆಯೇ ಪ್ರೀತಿಯಾಗುತ್ತದೆ ಎಂದಿದ್ದಾರೆ.
ಜನಪ್ರಿಯ ವೆಬ್ ಸೀರಿಸ್ ನ ಲಸ್ಟ್ ಸ್ಟೋರೀಸ್ 2ನೇ ಪಾರ್ಟ್ ನೆಟ್‍ಫ್ಲಿಕ್ಸ್ ನಲ್ಲಿ ರಿಲೀಸ್ ಆಗಿದೆ. ಈ ಸೀರಿಸ್ ಮಹಿಳೆಯರ ಲೈಂಗಿಕ ಆಸಕ್ತಿಗಳನ್ನು ಕುರಿತ ವಿಚಾರಗಳನ್ನು ಒಳಗೊಂಡಿದೆ.ಲಸ್ಟ್ ಸ್ಟೋರೀಸ್ 2 ವೆಬ್ ಸೀರಿಸ್ ಗಾಗಿ ತಮನ್ನಾ ಭಾಟಿಯಾ ಮೊದಲ ಬಾರಿಗೆ ಲಿಪ್ ಲಾಕ್ ಮಾಡಿದ್ದಾರೆ. ಇದು ಎಲ್ಲೆಡೆ ಚರ್ಚೆಗೆ ಕಾರಣವಾಗಿತ್ತು. ಯಾಕಂದ್ರೆ ಈ ಸೀರಿಸ್ ಮಹಿಳೆಯರ ಲೈಂಗಿಕ ಆಸಕ್ತಿಗಳನ್ನು ಕುರಿತದ್ದಾಗಿದೆ.ಈ ವೆಬ್ ಸೀರಿಸ್ ನೋಡಿ ಕೆಲವರು, ತಮನ್ನಾ ನೀವು ಈ ಸಿನಿಮಾಗೆ ಯಾಕೆ ಒಪ್ಪಿದ್ರೀ? ನಿಮ್ಮ ಮೇಲೆ ಈ ಮೊದಲು ತುಂಬಾ ಗೌರ ಇತ್ತು. ಈ ರೀತಿ ಸಿನಿಮಾ ಮಾಡಬೇಡಿ ಎಂದು ಹೇಳಿದ್ದಾರೆ.