Sandalwood Leading OnlineMedia

ವಿಭಿನ್ನ ಕಥಾಹಂದರ ಹೊಂದಿರುವ “ಟೇಲ್ಸ್ ಆಫ್ ಬೆಂಗಳೂರು” ಸೆಪ್ಟೆಂಬರ್ 15 ರಂದು ತೆರೆಗೆ .

ಹೆಸರಾಂತ ನಿರ್ದೇಶಕ “ಗೆಜ್ಜೆನಾದ” ವಿಜಯ್ ಕುಮಾರ್ ಪುತ್ರ ಅಥರ್ವ್ ನಾಯಕನಾಗಿ ನಟಿಸಿರುವ “ಟೇಲ್ಸ್ ಆಫ್ ಬೆಂಗಳೂರು” ಚಿತ್ರ ಸೆಪ್ಟೆಂಬರ್ 15 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಈ ಕುರಿತು ಮಾಧ್ಯಮಗೋಷ್ಠಿಯಲ್ಲಿ ಚಿತ್ರತಂಡದ ಸದಸ್ಯರು ಮಾಹಿತಿ ನೀಡಿದರು.

ನನ್ನ ಮಗ ಅಥರ್ವ್ ಹಾಗೂ ನಿರ್ದೇಶಕ ಕಿರಣ್ ಈ ಚಿತ್ರದ ಕಥೆ ಸಿದ್ದ ಮಾಡಿಕೊಂಡು ನಿರ್ಮಾಪಕರ ಹುಡುಕಾಟದಲ್ಲಿದ್ದರು. ಆನಂತರ ಕಥೆ ಇಷ್ಟವಾಗಿ ನಾನೇ ನಿರ್ಮಾಣಕ್ಕೆ ಮುಂದಾದೆ. ಕಿಚ್ಚ ಸುದೀಪ್ ಈ ಚಿತ್ರದ ಟೀಸರ್ ಗೆ ಧ್ವನಿ ನೀಡಿ ಪ್ರೋತ್ಸಾಹಿಸಿದ್ದಾರೆ. ಮಾಮ ಫೀಸ್ಟ್ ಅವರು ನಮ್ಮೊಟ್ಟಿಗಿದ್ದಾರೆ. ಧರ್ಮೇಂದ್ರ ಎಂ ರಾವ್ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ.
ಟ್ರೇಲರ್ ಸಹ ಬಿಡುಗಡೆಯಾಗಿದ್ದು, ಜನಮನ್ನಣೆ ಪಡೆಯುತ್ತಿದೆ. ಚಿತ್ರ ಸೆಪ್ಟೆಂಬರ್ 15 ತೆರೆಗೆ ಬರುತ್ತಿದ್ದು, ನೀವೆಲ್ಲಾ ನೋಡಿ ಹಾರೈಸಿ ಎಂದರು ನಿರ್ಮಾಪಕ ಗೆಜ್ಜೆನಾದ ವಿಜಯ್ ಕುಮಾರ್.

“ಪುನರ್ ವಿವಾಹ” ಹಾಗೂ “ಪತ್ತೆಧಾರಿ ಪ್ರತಿಭಾ” ಧಾರಾವಾಹಿಗಳಲ್ಲಿ ಅಭಿನಯಿಸಿದ್ದ ನನಗೆ ಇದು ಮೊದಲ ಚಿತ್ರ ಎಂದು ಮಾತನಾಡಿದ ಅಥರ್ವ್, ಈ ಚಿತ್ರದ ಮೊದಲಾರ್ಧ ಮೂರು ಬೇರೆ ಕಥೆಗಳ ಸುತ್ತ ಸಾಗುತ್ತದೆ. ದ್ವಿತೀಯಾರ್ಧದಲ್ಲಿ ಮೂರು ಕಥೆಗಳು ಒಂದೇ ಆಗುತ್ತದೆ. ನಾನು, ಮೊದಲು ನಮ್ಮ ಅಪ್ಪನ ಕೈಯಲ್ಲಿ ದುಡ್ಡು ಹಾಕಿಸುವುದು ಬೇಡ. ನಾನೇ ನಿರ್ಮಾಪಕರನ್ನು ಹುಡುಕುತ್ತೇನೆ ಅಂದಿದ್ದೆ. ಆದರೆ ಅದು ಆಗಲಿಲ್ಲ ಅಪ್ಪನೇ ನಿರ್ಮಾಪಕರಾದರು. ಈ ವಿಭಿನ್ನ ಕಥಾನಕವನ್ನು ಸೆಪ್ಟೆಂಬರ್ 15 ರಂದು ತೆರೆಗೆ ತರುತ್ತಿದ್ದೇವೆ. ಎಲ್ಲರೂ ನೋಡಿ ಎಂದರು.

ನಾನು ಎಂಜಿನಿಯರ್ ವಿದ್ಯಾರ್ಥಿ. ಸಿನಿಮಾ ಮಾಡುವುದು ನನ್ನ ಕನಸು ಅದು ಈಗ ಈಡೇರಿದೆ ಎಂದರು ನಿರ್ದೇಶಕ ಕಿರಣ್ ವೆನಿಯಲ್.ನಾಯಕಿ ರೆಮೋಲ , ನಟ ಆರ್ ಜೆ ಅನೂಪ ಹಾಗೂ ನಾಗರಾಜ್ ತಮ್ಮ ಪಾತ್ರದ ಬಗ್ಗೆ ಮಾತನಾಡಿದರು. ಸಂಕಲನಕಾರ ಪ್ರದೀಪ್ ಗೋಪಾಲ್ ಪತ್ರಿಕಾಗೋಷ್ಠಿಯಲ್ಲಿದ್ದರು. ಸಿದ್ದಾರ್ಥ್ ಪರಾಶರ್ ಈ ಚಿತ್ರದ ಸಂಗೀತ ನಿರ್ದೇಶಕರು.

Share this post:

Related Posts

To Subscribe to our News Letter.

Translate »