“ಪರಮಪೂಜ್ಯ ಜಗದ್ಗುರು ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಸ್ವಾಮಿಗಳು” ಸುತ್ತೂರು ಮಠದಲ್ಲಿ 4000 ವಿಧ್ಯಾರ್ಥಿಗಳ ಜೊತೆ “ತನುಜಾ” ಚಿತ್ರ ವೀಕ್ಷಣೆ ಮಾಡಿ ನಮ್ಮ ಚಿತ್ರ ತಂಡವನ್ನು ಅಭಿನಂದಿಸಿದರು. ಮುಂದಿನ ದಿನಗಳಲ್ಲಿ ಜೆ.ಎಸ್.ಎಸ್ ಶಿಕ್ಷಣ ಸಂಸ್ಥೆಗಳಲ್ಲಿ ಎಲ್ಲ ವಿಧ್ಯಾರ್ಥಿಗಳಿಗೆ ಪ್ರೇರಣೆ ನೀಡುವ “ತನುಜಾ” ಸಿನಿಮಾವನ್ನು ಪ್ರದರ್ಶನ ಮಾಡಲು ಚಾಲನೆ ನೀಡಿದರು
ಸಿನಿಮಾ ವೀಕ್ಷಣೆ ಮಾಡಿದ “ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಸ್ವಾಮೀಗಳ ಮಾತುಗಳು:
*ನ್ಯಾಚುರಲ್ ಸ್ಟಾರ್ ನಾನಿ ಅಭಿನಯದ ‘ದಸರಾ’ ಟ್ರೇಲರ್ ರಿಲೀಸ್ – ಮಾರ್ಚ್ 30ಕ್ಕೆ ವರ್ಲ್ಡ್ ವೈಡ್ ಸಿನಿಮಾ ಬಿಡುಗಡೆ*
ಸಿನಿಮಾ ಎಲ್ಲರಿಗೂ ಇಷ್ಟವಾಯ್ತಾ? ಎಂದು ಮಕ್ಕಳನ್ನು ಪ್ರಶ್ನಿಸುವುದರ ಮೂಲಕ ಮಾತು ಆರಂಭಿಸಿದ ಶ್ರೀಗಳು, ಸಿನಿಮಾದ ಪ್ರತಿಯೊಂದು ಸನ್ನಿವೇಶಗಳಿಗೆ ಮಕ್ಕಳ ಹರ್ಷೋದ್ಗಾರವನ್ನು ಕಂಡು ಶ್ರೀಗಳು ಆಶ್ಚರ್ಯ ಚಕಿತರಾದರು.ಶ್ರದ್ಧೆ ಎಲ್ಲಿರುತ್ತೆ ಅಲ್ಲಿ ಅವಕಾಶ ಇರುತ್ತೆ. ಒಬ್ಬ ವಿದ್ಯಾರ್ಥಿ ಮನಸ್ಸು ಮಾಡಿದರೆ,ಹಾಗೂ ಶ್ರದ್ಧೆ, ನಿಷ್ಟೆಯಿದ್ದರೆ ಅವಕಾಶಗಳು ತಾನಾಗಿಯೇ ಒದಗಿ ಬರುತ್ತವೆ ಎನ್ನುವುದಕ್ಕೆ ತನುಜಾ ಸಿನಿಮಾ ಒಂದು ನಿದರ್ಶನ. ಒಂದು ಆಡಳಿತ ವವ್ಯಸ್ಥೆ ಮನಸ್ಸು ಮಾಡಿದರೆ ಅಸಾಧ್ಯವಾದದ್ದನ್ನ ಸಾಧ್ಯವಾಗಿಸುತ್ತೆ ಎನ್ನುವುದಕ್ಕೆ ಈ ತನುಜಾ ಘಟನೆ ಸಾಕ್ಷಿ. ಪ್ರದೀಪ್ ಈಶ್ವರ್ ರವರ ಸಂಕಲ್ಪ ಹಾಗೂ ಮಕ್ಕಳಿಗಾಗಿ ವೈದ್ಯಕೀಯ ಕೋಚಿಂಗ್ ಸೆಂಟರ್ ತೆಗೆಯುವುದರ ಮೂಲಕ ಮಕ್ಕಳಿಗೆ ಆತ್ಮಸ್ಥೈರ್ಯ ತುಂಬಿ ಮಕ್ಕಳ ಭವಿಷ್ಯ ರೂಪಿಸುತ್ತಿರುವುದು ಶ್ಲಾಘನೀಯ,
*ವಿನಯ್ ರಾಜ್ ಕುಮಾರ್ ನಟನೆಯ ‘ಒಂದು ಸರಳ ಪ್ರೇಮಕಥೆ’ ಪೋಸ್ಟರ್ ರಿಲೀಸ್*
ವಿಶ್ವವಾಣಿಯ ಹೆಸರಾಂತ ಪತ್ರಕರ್ತರಾದ ವಿಶ್ವೇಶ್ವರ್ ಭಟ್ ರವರು ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಿ.ಎಸ್ ಯಡಿಯೂರಪ್ಪ ರವರ ಗಮನಕ್ಕೆ ತಂದು ಡಾ|| ಕೆ. ಸುಧಾಕರ್ ರವರು ಮುಖಾಂತರ ಆ ಹೆಣ್ಣು ಮಗುವಿಗೆ ಎಕ್ಸಾಂ ತೆಗೆದುಕೊಳ್ಳುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದಾರೆ. ಎಲ್ಲ ಪಾತ್ರಗಳು ಕ್ಲಿಷ್ಟಕರ ಸಂದರ್ಭದಲ್ಲಿ ಸ್ಪಂದಿಸಿದ ರೀತಿ ತನುಜಾ ಸಿನಿಮಾದಲ್ಲಿ ಮಾದರಿಯಾಗಿ ರೂಪಿತವಾಗಿದೆ. ಇಂತಹ ಅದ್ಭುತ ಸಿನಿಮಾವನ್ನ ನಿರ್ದೇಶನ ಮಾಡಿದ ಹರೀಶ್ ಎಂ.ಡಿ ಹಳ್ಳಿಯವರು ಒಂದು ನೈಜ ಘಟನೆಯನ್ನ ತುಂಬಾ ನೈಜವಾಗಿ ಕಟ್ಟಿಕೊಟ್ಟಿದ್ದಾರೆ. ಈಗ ಎಲ್ಲಾ ಪರೀಕ್ಷೆಗಳು ಪ್ರಾರಂಭವಾಗುತ್ತೆ ಹಾಗಾಗಿ ಶಾಲೆಗಳು ಪುನಾರಂಭವಾದಾಗ ನಮ್ಮ ಎಲ್ಲಾ ಜೆ.ಎಸ್.ಎಸ್ ವಿದ್ಯಾಸಂಸ್ಥೆಗಳಲ್ಲಿ ಸ್ಪೂರ್ತಿದಾಯಕವಾಗಿರುವ ತನುಜಾ ಚಲನಚಿತ್ರವನ್ನ ಪ್ರದರ್ಶನ ಮಾಡುತ್ತೇವೆ ಎಂದರು. ಕೊನೆಗೆ ಎಲ್ಲಾ ಚಿತ್ರತಂಡದ ಪರಿಶ್ರಮವನ್ನು ಮೆಚ್ಚಿ ತಂಡವನ್ನ ಸನ್ಮಾನ ಮಾಡುವ ಮುಖಾಂತರ ಶ್ರೀಗಳು ಆಶೀರ್ವದಿಸಿದರು.