# Tags

ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಬಿಗ್ ಬಾಸ್ ಖ್ಯಾತಿಯ ರಾಶಿಕಾ ಶೆಟ್ಟಿ

‘ಬಿಗ್ ಬಾಸ್’ ಮೂಲಕ ಮನೆಮಾತಾದ Rashika Shetty ಈಗ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಸುಮಾರು 2 ಲಕ್ಷಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿರುವ ರಾಶಿಕಾ, ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಆ್ಯಕ್ಟೀವ್ ಆಗಿದ್ದು, ಆಗಾಗ ಅಭಿಮಾನಿಗಳಿಗಾಗಿ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಅವರು ಹಂಚಿಕೊಂಡಿರುವ ಸಾಂಪ್ರದಾಯಿಕ ಉಡುಗೆಯ ಫೋಟೋಶೂಟ್ ವೀಡಿಯೋ ವೈರಲ್ ಆಗಿದೆ. ಎಲಿಗಂಟ್ ಸ್ಟೈಲ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅಭಿಮಾನಿಗಳು ಸೌಂದರ್ಯ ರಾಶಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಸಿಂಪಲ್ ಲುಕ್‌ನಲ್ಲಿ ಕಾಂತಾರ ಬೆಡಗಿ ರುಕ್ಮಿಣಿ ವಸಂತ್

ಕಾಂತಾರ’ ಚಿತ್ರದ ಮೂಲಕ ವಿಶ್ವದಾದ್ಯಂತ ಮನೆಮಾತಾದ ನಟಿ Rukmini Vasanth ಇತ್ತೀಚೆಗೆ ಸಿಂಪಲ್ ಲುಕ್‌ನಲ್ಲಿ ಕಂಗೊಳಿಸಿ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಸರಳ ಸ್ಟೈಲಿಂಗ್‌ನಲ್ಲಿ ಕಾಣಿಸಿಕೊಂಡಿರುವ ರುಕ್ಮಿಣಿ, ತಮ್ಮ ನೈಸರ್ಗಿಕ ಸೌಂದರ್ಯದಿಂದ ಮತ್ತೊಮ್ಮೆ ಮೆಚ್ಚುಗೆ ಪಡೆದಿದ್ದಾರೆ. ಇತ್ತೀಚಿನ ಫೋಟೋಶೂಟ್‌ನಲ್ಲಿ ರುಕ್ಮಿಣಿ ವಸಂತ್ ಕಮಲದಂತೆ ಅರಳಿ ಕಾಣಿಸಿಕೊಂಡಿದ್ದಾರೆ. ಪ್ರತಿಯೊಂದು ಫ್ರೇಮ್‌ನಲ್ಲಿ ಅವರ ಆತ್ಮವಿಶ್ವಾಸ, ಶಾಂತ ಅಭಿವ್ಯಕ್ತಿ ಮತ್ತು ಕಾಲಾತೀತ ಸೌಂದರ್ಯ ಸ್ಪಷ್ಟವಾಗಿ ಮಿಂಚುತ್ತದೆ. ಸಿಂಪಲ್ ಆಗಿ ಸ್ಟೈಲ್ ಮಾಡಿದ ಲುಕ್, ಮಿನಿಮಲ್ ಎಕ್ಸ್‌ಪ್ರೆಷನ್‌ಗಳೊಂದಿಗೆ ಅವರ ವ್ಯಕ್ತಿತ್ವವನ್ನು ಮತ್ತಷ್ಟು ಹೊಳೆಯುವಂತೆ ಮಾಡಿದೆ. […]

ಸೀರೆಯಲ್ಲಿ ಸಂಜನಾ ಆನಂದ್ ಮಿನುಗು – ಅಭಿಮಾನಿಗಳ ಮೆಚ್ಚುಗೆ

ಕನ್ನಡ ಚಿತ್ರರಂಗದ ನಟಿ Sanjana Anand ಇತ್ತೀಚೆಗೆ ಸೀರೆಯಲ್ಲಿ ಮಿಂಚಿದ ಲುಕ್‌ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಎಲಿಗಂಟ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡಿರುವ ಸಂಜನಾ, ತಮ್ಮ ಸೌಂದರ್ಯದಿಂದ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ.ಸಂಜನಾ ಧರಿಸಿದ್ದ ಸೀರೆ ಲುಕ್‌ಗೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅವರ ಎಥ್ನಿಕ್ ಲುಕ್ ಫೋಟೋಗಳು ವೈರಲ್ ಆಗುತ್ತಿದ್ದು, “ಸಿಂಪಲ್ ಅಂಡ್ ಕ್ಲಾಸಿ” ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ.

Translate »