ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಬಿಗ್ ಬಾಸ್ ಖ್ಯಾತಿಯ ರಾಶಿಕಾ ಶೆಟ್ಟಿ
‘ಬಿಗ್ ಬಾಸ್’ ಮೂಲಕ ಮನೆಮಾತಾದ Rashika Shetty ಈಗ ಸಿನಿಮಾಗಳಲ್ಲೂ ಬ್ಯುಸಿಯಾಗಿದ್ದಾರೆ. ಸುಮಾರು 2 ಲಕ್ಷಕ್ಕೂ ಹೆಚ್ಚು ಹಿಂಬಾಲಕರನ್ನು ಹೊಂದಿರುವ ರಾಶಿಕಾ, ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಆ್ಯಕ್ಟೀವ್ ಆಗಿದ್ದು, ಆಗಾಗ ಅಭಿಮಾನಿಗಳಿಗಾಗಿ ಹೊಸ ಫೋಟೋಗಳನ್ನು ಹಂಚಿಕೊಳ್ಳುತ್ತಾರೆ. ಇತ್ತೀಚೆಗೆ ಅವರು ಹಂಚಿಕೊಂಡಿರುವ ಸಾಂಪ್ರದಾಯಿಕ ಉಡುಗೆಯ ಫೋಟೋಶೂಟ್ ವೀಡಿಯೋ ವೈರಲ್ ಆಗಿದೆ. ಎಲಿಗಂಟ್ ಸ್ಟೈಲ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಅಭಿಮಾನಿಗಳು ಸೌಂದರ್ಯ ರಾಶಿ ಎಂದು ಕಾಮೆಂಟ್ ಮಾಡುತ್ತಿದ್ದಾರೆ.