ಕನ್ನಡದಲ್ಲಿ ವೆಬ್ ಸಿರೀಸ್ ಗಳ ಸಂಖ್ಯೆ ಹೆಚ್ಚಾಗುತ್ತಿದೆ. ಪ್ರತಿಭಾನ್ವಿತ ಕಲಾವಿದರ ತಂಡಗಳು ಉತ್ತಮ ಕಟೆಂಟ್ ಗಳುಳ್ಳ ವೆಬ್ ಸಿರೀಸ್ ಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಈ ಪಟ್ಟಿಗೆ ಹೊಸದಾಗಿ ಸೇರ್ಪಡೆಯಾಗಿದೆ ಯುವತಂಡವನ್ನು ಹೊಂದಿರುವ 666 ವೆಬ್ ಸಿರೀಸ್. ಕಿರುಚಿತ್ರ ನಿರ್ದೇಶಿಸಿ ಗಮನ ಸೆಳೆದಿದ್ದ ರಂಗಸ್ವಾಮಿ ಮೊದಲ ಬಾರಿ ವೆಬ್ ಸಿರೀಸ್ ನಿರ್ದೇಶಿಸಿ ನಿರ್ಮಾಣ ಮಾಡಿದ್ದು ಇಂದು ಚಿತ್ರದ ಮೋಷನ್ ಟೀಸರ್ ಬಿಡುಗಡೆಯಾಗಿದೆ.
ಕುತೂಹಲ ಹುಟ್ಟಿಸಿದೆ ನೈಜಘಟನೆ ಆಧಾರಿತ “ರಾಂಚಿ” ಚಿತ್ರದ ಟೀಸರ್.
ಸ್ವಿಗ್ಗಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ ರಂಗಸ್ವಾಮಿ ಸಿನಿಮಾ ನಿರ್ದೇಶನದ ಮೇಲೆ ಅಪಾರ ಪ್ಯಾಶನ್ ಇಟ್ಟುಕೊಂಡಿದ್ದು, 275, ಡೋಂಟ್ ವಿಸ್ಪರ್, ನಿಹಾರಿಕ, ಸೇರಿದಂತೆ ಹಲವು ಕಿರುಚಿತ್ರಗಳನ್ನು ಕೆಲಸ ನಿರ್ವಹಿಸುತ್ತಲೇ ನಿರ್ದೇಶಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಇದೀಗ ಕಿರುಚಿತ್ರ ನಿರ್ದೇಶಿಸಿದ್ದ ಅನುಭಗಳನ್ನೆಲ್ಲ ಇಟ್ಟುಕೊಂಡು ಮೊದಲ ಬಾರಿ ಏಳು ಕಂತುಗಳುಳ್ಳ ವೆಬ್ ಸಿರೀಸ್ ನಿರ್ದೇಶಿಸಿ ನಿರ್ಮಾಣವನ್ನು ಮಾಡಿದ್ದಾರೆ.
ಸೆಟ್ಟೇರಿತು ಪವನ್ ಒಡೆಯರ್ ಹಿಂದಿ ಸಿನಿಮಾ- ಚಿತ್ರಕ್ಕೆ ‘ನೋಟರಿ’ ಟೈಟಲ್
ಕೋಡೆಕ್ಸ್ ಗಿಗಾಸ್ ಆಧರಿಸಿ 666 ವೆಬ್ ಸಿರೀಸ್ ಕಥೆ ಹೆಣೆಯಲಾಗಿದ್ದು, ಕಥೆ ಚಿತ್ರಕಥೆಯನ್ನು ರಂಗಸ್ವಾಮಿಯವರೇ ಹೆಣೆದಿದ್ದಾರೆ. ಹಾರಾರ್ ಥ್ರಿಲ್ಲರ್ ಜಾನರ್ ಒಳಗೊಂಡ 666 ವೆಬ್ ಸಿರೀಸ್ ಏಳು ಕಂತುಗಳನ್ನು ಒಳಗೊಂಡಿದ್ದು, ಐದು ಭಾಷೆಯಲ್ಲಿ ನಿರ್ಮಾಣವಾಗಿದೆ. ಬಹುತೇಕ ಚಿತ್ರೀಕರಣ ಕಂಪ್ಲೀಟ್ ಆಗಿದ್ದು, ಕ್ಲೈಮ್ಯಾಕ್ಸ್ ಚಿತ್ರೀಕರಣ ಬಾಕಿಯಿದೆ. ಮೋಷನ್ ಟೀಸರ್ ಮೂಲಕ ಪ್ರಚಾರ ಕಾರ್ಯ ಆರಂಭಿಸಿರುವ ಸಿನಿಮಾ ತಂಡ ಡಿಸೆಂಬರ್ ನಲ್ಲಿ 666 ವೆಬ್ ಸಿರೀಸ್ ಬಿಡುಗಡೆ ಮಾಡಲು ತಯಾರಿ ಮಾಡಿಕೊಂಡಿದೆ. ದರ್ಶಿನಿ ಒಡೆಯರ್, ಶಿವಾನಿ, ಗಣೇಶ್ ನಾಯಕ್, ಕೀರ್ತಿ, ಮಂಜುನಾಥ್, ವಿವೇಕ್ ವೀಣಾ ಈ ವೆಬ್ ಸಿರೀಸ್ ನಲ್ಲಿ ನಟಿಸಿದ್ದಾರೆ. ಸಿನಿಮಾರಂಗ ಬ್ಯಾನರ್ ನಡಿ ನಿರ್ದೇಶಕ ರಂಗಸ್ವಾಮಿ ವೆಬ್ ಸಿರೀಸ್ ನಿರ್ಮಾಣ ಮಾಡಿದ್ದು, ಸಚಿನ್ ಬಸ್ರೂರು ಸಂಗೀತ ನಿರ್ದೇಶನ, ಅರುಣ್ ಭಾಗವತ್ ಕ್ಯಾಮೆರ ನಿರ್ದೇಶನ ಹಾಗೂ ಸಂಕಲನವಿದೆ.