Sandalwood Leading OnlineMedia

ಫೆಬ್ರವರಿ 2 ರಂದು ಬಿಡುಗಡೆಯಾಗಲಿದೆ ನಿಶ್ಚಿತ್ ಕರೋಡಿ ಅಭಿನಯದ “ಸಪ್ಲೆಯರ್ ಶಂಕರ” . .

 

ತ್ರಿನೇತ್ರ ಫಿಲಂಸ್ ಲಾಂಛನದಲ್ಲಿ ಎಂ ಚಂದ್ರಶೇಖರ್ ಹಾಗೂ ಎಂ.ನಾಗೇಂದ್ರ ಸಿಂಗ್ ನಿರ್ಮಿಸಿರುವ ಹಾಗೂ ರಂಜಿತ್ ನಿರ್ದೇಶನದಲ್ಲಿ “ಗಂಟು ಮೂಟೆ” ಹಾಗೂ “ಟಾಮ್ & ಜರ್ರಿ” ಖ್ಯಾತಿಯ ನಿಶ್ಚಿತ್ ಕರೋಡಿ ನಾಯಕನಾಗಿ ನಟಿಸಿರುವ ಬಹು ನಿರೀಕ್ಷಿತ “ಸಪ್ಲೆಯರ್ ಶಂಕರ” ಚಿತ್ರ ಫೆಬ್ರವರಿ 2 ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ಬಿಡುಗಡೆಯಾಗಲಿದೆ. ಆನಂದ್ ಆಡಿಯೋ ಮೂಲಕ ಟೀಸರ್ ಹಾಗೂ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ಬಿಡುಗಡೆ ದಿನಾಂಕವನ್ನು ತಿಳಿಸಿದೆ.


ಇದನ್ನೂ ಓದಿ  ಮಲೆನಾಡು ಭಾಗದ ಮೀನು ಬೇಟೆಗೆ ನಟ ಧನಂಜಯ, ದಿನಕರ್ ಸಾಥ್: ಕೆರೆಬೇಟೆ ಟೀಸರ್ ರಿಲೀಸ್
“ಸಪ್ಲೆಯರ್ ಶಂಕರ” ಬಾರ್ ಸಪ್ಲೆಯರ್ ಒಬ್ಬನ ಸುತ್ತ ನಡೆಯುವ ಕಥೆಯಾಗಿದೆ. ನಿಶ್ಚಿತ್ ಕರೋಡಿ ಈ ಚಿತ್ರದಲ್ಲಿ “ಸಪ್ಲೆಯರ್ ಶಂಕರ” ನಾಗಿ ಕಾಣಿಸಿಕೊಂಡಿದ್ದಾರೆ. ದೀಪಿಕಾ ಆರಾಧ್ಯ ಈ ಚಿತ್ರದ ನಾಯಕಿ. ಗೋಪಾಲಕೃಷ್ಣ ದೇಶಪಾಂಡೆ, ನವೀನ್ ಪಡೀಲ್, ಜ್ಯೋತಿ ರೈ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಇದನ್ನೂ ಓದಿ ಸಂಕ್ರಾಂತಿಗೆ ತಮಿಳು, ತೆಲುಗು ಸ್ಟಾರ್ ಸಿನಿಮಾಗಳ ಅಬ್ಬರ

ಮರ್ಡರ್ ಮಿಸ್ಟರಿ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ ನಿರ್ದೇಶಕ ರಂಜಿತ್ ಅವರೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.
ಸತೀಶ್ ಕುಮಾರ್ ಛಾಯಾಗ್ರಹಣ , ಸತೀಶ್ ಚಂದ್ರಯ್ಯ ಅವರ ಸಂಕಲನ ಹಾಗೂ ಬಾಲಾಜಿ ಅವರ ಕಲಾ ನಿರ್ದೇಶನ “ಸಪ್ಲೆಯರ್ ಶಂಕರ” ಚಿತ್ರಕ್ಕಿದೆ.

Share this post:

Related Posts

To Subscribe to our News Letter.

Translate »