Sandalwood Leading OnlineMedia

ಸಖತಾಗಿದೆ “ಸಪ್ಲೇಯರ್ ಶಂಕರ” ಚಿತ್ರದ ಪ್ರೇಮಗೀತೆ .

ತ್ರಿನೇತ್ರ ಫಿಲಂಸ್ ಲಾಂಛನದಲ್ಲಿ ಎಂ ಚಂದ್ರಶೇಖರ್ ಹಾಗೂ ಎಂ.ನಾಗೇಂದ್ರ ಸಿಂಗ್ ನಿರ್ಮಿಸಿರುವ ಹಾಗೂ ರಂಜಿತ್ ನಿರ್ದೇಶನದಲ್ಲಿ ನಿಶ್ಚಿತ್ ಕರೋಡಿ ನಾಯಕನಾಗಿ ನಟಿಸಿರುವ “ಸಪ್ಲೇಯರ್ ಶಂಕರ” ಚಿತ್ರದ ಎರಡನೇ ಹಾಡು ಆನಂದ್ ಆಡಿಯೋ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ.

ಇನ್ನೂ ಓದಿ  ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ “ಕಾಟೇರ” ಚಿತ್ರದ ಬಹುತೇಕ ಚಿತ್ರೀಕರಣ ಮುಕ್ತಾಯ .

ಪ್ರಮೋದ್ ಮರವಂತೆ ಬರೆದಿರುವ “ಮಾಡೊ ಕೆಲಸವ ನೀನು ಮರೆಸಿದೆ” ಎಂಬ ಈ ಪ್ರೇಮಗೀತೆ ನಕುಲ್ ಅಭಯಂಕರ್ ಹಾಗೂ ಐಶ್ವರ್ಯ ರಂಗರಾಜನ್ ಅವರ ಕಂಠದಲ್ಲಿ ಸುಮಧುರವಾಗಿ ಮೂಡಿಬಂದಿದ್ದು, ಆರ್ ಬಿ ಭರತ್ ಸಂಗೀತ ನೀಡಿದ್ದಾರೆ. ಹಾಡು ಬಿಡುಗಡೆಯಾದ ತಕ್ಷಣದಿಂದಲೇ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಅಧಿಕ ಸಂಖ್ಯೆಯಲ್ಲಿ ವೀಕ್ಷಣೆಯಾಗುತ್ತಿದೆ.

ಇನ್ನೂ ಓದಿ ರಾಧಾ ಭಗವತಿ “ವಸಂತಕಾಲದ ಹೂಗಳು” ಚಿತ್ರಕ್ಕೆ ನಾಯಕಿ .

“ಸಪ್ಲೇಯರ್ ಶಂಕರ” ಬಾರ್ ಸಪ್ಲೇಯರ್ ಒಬ್ಬನ ಸುತ್ತ ನಡೆಯುವ ಕಥೆಯಾಗಿದೆ. “ಗಂಟು ಮೂಟೆ” ಮತ್ತು “ಟಾಮ್ & ಜೆರ್ರಿ” ಚಿತ್ರಗಳ ಮೂಲಕ ಜನಪ್ರಿರಾಗಿರುವ ನಿಶ್ಚಿತ್ ಕರೋಡಿ ಈ ಚಿತ್ರದಲ್ಲಿ “ಸಪ್ಲೇಯರ್ ಶಂಕರ” ನಾಗಿ ಕಾಣಿಸಿಕೊಂಡಿದ್ದಾರೆ. ದೀಪಿಕಾ ಆರಾಧ್ಯ ಈ ಚಿತ್ರದ ನಾಯಕಿ. ಗೋಪಾಲಕೃಷ್ಣ ದೇಶಪಾಂಡೆ, ನವೀನ್ ಪಡೀಲ್, ಜ್ಯೋತಿ ರೈ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.

ಇನ್ನೂ ಓದಿ  ಕಾಡುವ `ಕಾಗೆ’ಯ ಕಥೆಯೊಂದಿಗೆ ಬರ‍್ತಾ ಇದೆ `ರಾವೆನ್’: ಸಿನಿಮಾ ಕ್ಷೇತ್ರದಲ್ಲೊಂದು ವಿಭಿನ್ನ ಪ್ರಯತ್ನ

ನಿರ್ದೇಶಕ ರಂಜಿತ್ ಅವರೆ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದಿದ್ದಾರೆ.
ಲವ್, ಕಾಮಿಡಿ, ತಾಯಿ-ಮಗನ ಸೆಂಟಿಮೆಂಟ್, ಬಾರ್ ಸಪ್ಲೇಯರ್ ಜೀವನದ ಜೊತೆಗೆ ಸಸ್ಪೆನ್ ಥ್ರಿಲ್ಲರ್ ಕಥಾಹಂದರವನ್ನು ಈ ಚಿತ್ರ ಒಳಗೊಂಡಿದೆ.
ಸತೀಶ್ ಕುಮಾರ್ ಛಾಯಾಗ್ರಹಣ , ಸತೀಶ್ ಚಂದ್ರಯ್ಯ ಅವರ ಸಂಕಲನ ಹಾಗೂ ಬಾಲಾಜಿ ಅವರ ಕಲಾ ನಿರ್ದೇಶನ “ಸಪ್ಲೇಯರ್ ಶಂಕರ” ಚಿತ್ರಕ್ಕಿದೆ.

ಇನ್ನೂ ಓದಿ  ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ದಿನ ಅಲ್ಲು ಅರ್ಜುನ್ ಅಭಿಮಾನಿಗಳಿಗೆ ಡಭಲ್ ಧಮಾಕ! ಇಲ್ಲಿದೆ ಸಂಪೂರ್ಣ ಮಾಹಿತಿ

ಈಗಾಗಲೇ ಚಿತ್ರೀಕರಣ ಮುಗಿಸಿರುವ “ಸಪ್ಲೇಯರ್ ಶಂಕರ”, ಪೋಸ್ಟ್ ಪ್ರೊಡಕ್ಷನ್ ವರ್ಕ್ ನಲ್ಲಿ ಬ್ಯುಸಿಯಾಗಿದ್ದಾನೆ. ಈ ವರ್ಷದ ಕೊನೆಗೆ ತೆರೆಯ ಮೇಲೆ ರಾರಾಜಿಸಲಿದ್ದಾನೆ.

Share this post:

Related Posts

To Subscribe to our News Letter.

Translate »