Sandalwood Leading OnlineMedia

ಟೀಸರ್ ನಲ್ಲೇ ಕುತೂಹಲ ಮೂಡಿಸಿದ “ಸಪ್ಲೇಯರ್ ಶಂಕರ” .

ತ್ರಿನೇತ್ರ ಫಿಲಂಸ್ ಲಾಂಛನದಲ್ಲಿ ಎಂ ಚಂದ್ರಶೇಖರ್ ಹಾಗೂ ಎಂ.ನಾಗೇಂದ್ರ ಸಿಂಗ್ ನಿರ್ಮಿಸಿರುವ ಹಾಗೂ ರಂಜಿತ್ ನಿರ್ದೇಶನದಲ್ಲಿ ನಿಶ್ಚಿತ್ ಕರೋಡಿ ನಾಯಕನಾಗಿ ನಟಿಸಿರುವ “ಸಪ್ಲೇಯರ್ ಶಂಕರ” ಚಿತ್ರದ ಟೀಸರ್ ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಚಿತ್ರದ ನಿರ್ಮಾಪಕರಾದ ಚಂದ್ರಶೇಖರ್ ಹಾಗೂ ನಾಗೇಂದ್ರ ಸಿಂಗ್ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿದರು.

 

ಇದನ್ನೂ ಓದಿ ವಿಭಿನ್ನವಾಗಿ ಲಾಂಚ್ ಆಯ್ತು ಪ್ರಿಯಾಂಕಾ ನಟನೆಯ ‘ಕ್ಯಾಪ್ಚರ್’ ಚಿತ್ರದ ಟೈಟಲ್ ಪೋಸ್ಟರ್

ನಿರ್ದೇಶಕ ರಂಜಿತ್ ಹೇಳಿದ ಕಥೆ ಇಷ್ಟವಾಗಿ ನಿರ್ಮಾಣಕ್ಕೆ ಮುಂದಾದೆವು. ಚಿತ್ರ ಈಗ ತೆರೆಗೆ ಬರಲು ಸಿದ್ದವಾಗಿದೆ. ಸದ್ಯದಲ್ಲೇ ತೆರೆಗೆ ತರುತ್ತೇವೆ ಎಂದು ನಿರ್ಮಾಪಕರಾದ ಚಂದ್ರಶೇಖರ್ ಹಾಗೂ ನಾಗೇಂದ್ರ ಸಿಂಗ್ ತಿಳಿಸಿದರು.

ಇದನ್ನೂ ಓದಿ  ವಿಭಿನ್ನ ರೀತಿಯಲ್ಲಿ ಬಿಡುಗಡೆಯಾಯಿತು “ಅರ್ದಂಬರ್ಧ” ಪ್ರೇಮ ಕಥೆಯ ಮೊದಲ ಹಾಡು

ಕಳೆದವರ್ಷ ಫೆಬ್ರವರಿಯಲ್ಲಿ ಈ ಚಿತ್ರಕ್ಕೆ ಚಾಲನೆ ದೊರೆಯಿತು ಎಂದು ಮಾತು ಪ್ರಾರಂಭಿಸಿದ ನಿರ್ದೇಶಕ ರಂಜಿತ್, “ಸಪ್ಲೇಯರ್ ಶಂಕರ” ಬಾರ್ ಸಪ್ಲೇಯರ್ ಒಬ್ಬನ ಕಥೆ. ನಾನೇ ಕಥೆ ಬರೆದಿದ್ದೇನೆ. ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಈ ಪಾತ್ರಕ್ಕಾಗಿ ನಾಯಕ ನಿಶ್ಚಿತ್ ಕರೋಡಿ ಬಹಳ ಶ್ರಮಪಟ್ಟಿದ್ದಾರೆ. ನನ್ನ ಕಥೆಗೆ ಜೀವ ತುಂಬಿದ್ದು ನಿರ್ಮಾಪಕರಾದ ಚಂದ್ರಶೇಖರ್ ಹಾಗೂ ನಾಗೇಂದ್ರ ಸಿಂಗ್. ಈ ಚಿತ್ರದಲ್ಲಿ ಹೆಚ್ಚಾಗಿ ಹೊಸತಂಡ ಕಾರ್ಯ ನಿರ್ವಹಿಸಿದೆ. ಇಂದು ಟೀಸರ್ ಬಿಡುಗಡೆಯಾಗಿದೆ. ಶೀಘ್ರದಲ್ಲೇ “ಸಪ್ಲೇಯರ್ ಶಂಕರ” ನಿಮ್ಮ ಮೆಚ್ಚಿನ ಚಿತ್ರಮಂದಿರಗಳಿಗೆ ಬರುತ್ತಾನೆ ಎಂದರು‌.

ಇದನ್ನೂ ಓದಿ “ಗನ್ಸ್ ಅಂಡ್ ರೋಸಸ್” ಚಿತ್ರದ ಚಿತ್ರೀಕರಣ ಮುಕ್ತಾಯ ಹಂತದಲ್ಲಿ .

ನಾನು ಈ ಹಿಂದೆ “ಗಂಟು ಮೂಟೆ” ಹಾಗೂ “ಟಾಮ್ & ಜೆರ್ರಿ” ಚಿತ್ರಗಳಲ್ಲಿ ನಟಿಸಿದ್ದೆ. ಇದು ಮೂರನೇ ಚಿತ್ರ. ಬಾರ್ ಸಪ್ಲೇಯರ್ ಪಾತ್ರ ನನ್ನದು. ಹಾಗಾಂತ ಈ ಚಿತ್ರದಲ್ಲಿ ಬರೀ ಸಪ್ಲೇಯರ್ ಕಥೆ ಮಾತ್ರ ಇಲ್ಲ. ಕಾಮಿಡಿ, ಸೆಂಟಿಮೆಂಟ್, ಲವ್, ಥ್ರಿಲ್ಲರ್ ಎಲ್ಲವೂ ಇದೆ. ನಿರ್ದೇಶಕ ರಂಜಿತ್ ಒಳ್ಳೆಯ ಕಥೆ ಆಯ್ಕೆ ಮಾಡಿಕೊಂಡಿದ್ದಾರೆ. ನಮ್ಮ ಚಿತ್ರಕ್ಕೆ ನಿಮ್ಮ ಪ್ರೋತ್ಸಾಹವಿರಲಿ ಎಂದರು ನಾಯಕ ನಿಶ್ಚಿತ್ ಕರೋಡಿ.

  ಇದನ್ನೂ ಓದಿ  “ಗನ್ಸ್ ಅಂಡ್ ರೋಸಸ್” ಚಿತ್ರದ ಚಿತ್ರೀಕರಣ ಮುಕ್ತಾಯ ಹಂತದಲ್ಲಿ .

ಶಿಕ್ಷಕಿ ಪಾತ್ರ ನಿರ್ವಹಿಸಿರುವುದಾಗಿ ನಾಯಕಿ ದೀಪಿಕಾ ಆರಾಧ್ಯ ಹೇಳಿದರು. ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಆರ್ ಬಿ ಭರತ್ ಮಾಹಿತಿ ನೀಡಿದರು. ಛಾಯಾಗ್ರಾಹಕ ಸತೀಶ್ ಕುಮಾರ್ , ಸಂಕಲನಕಾರ ಸತೀಶ್ ಚಂದ್ರಯ್ಯ ಮುಂತಾದವರು “ಸಪ್ಲೇಯರ್ ಶಂಕರ” ಚಿತ್ರದ ಕುರಿತು ಮಾತನಾಡಿದರು.

Share this post:

Related Posts

To Subscribe to our News Letter.

Translate »