Sandalwood Leading OnlineMedia

ತಮಿಳುನಾಡಿನಲ್ಲಿ ಅತಿ ಹೆಚ್ಚು ತೆರಿಗೆ ಕಟ್ತಾರೆ ರಜನಿಕಾಂತ್..!

ತಮಿಳುನಾಡಿನಲ್ಲಿ ಅತೀ ಹೆಚ್ಚು ತೆರಿಗೆ ಕಟ್ಟುವ ನಟ ಸೂಪರ್ ಸ್ಟಾರ್ ರಜನಿಕಾಂತ್. ಆದಾಯ ತೆರಿಗೆ ಇಲಾಖೆ ತಲೈವಾಗೆ ಪ್ರಮಾಣ ಪತ್ರ ನೀಡಿ ಗೌರವಿಸಿದೆ.

ನಟ ರಜನಿಕಾಂತ್ ಅವರು ಚಿತ್ರರಂಗದಲ್ಲಿ ಈಗಲೂ ಸಖತ್ ಬೇಡಿಕೆ ಹೊಂದಿದ್ದಾರೆ. ತಮಿಳು ನಾಡಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟ ಎಂಬ ಖ್ಯಾತಿ ಅವರಿಗೆ ಇದೆ. ಹಣ ಗಳಿಸುವುದು ಮಾತ್ರವಲ್ಲ, ತೆರಿಗೆ ಪಾವತಿಸುವುದರಲ್ಲೂ ಅವರೇ ನಂಬರ್ ಒನ್. ಹೌದು, ತಮಿಳುನಾಡಿನಲ್ಲಿ ಅತಿ ಹೆಚ್ಚು ಟ್ಯಾಕ್ಸ್ ಕಟ್ಟಿದ ವ್ಯಕ್ತಿ ರಜನಿಕಾಂತ್ ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. ಸೂಕ್ತ ಸಮಯದಲ್ಲಿ ತೆರಿಗೆ ಪಾವತಿಸಿದ ಅವರಿಗೆ ಇಲಾಖೆ ಕಡೆಯಿಂದ ಮೆಚ್ಚುಗೆ ಸೂಚಿಸಲಾಗಿದೆ.

ಆದಾಯ ತೆರಿಗೆ ಇಲಾಖೆ ತಲೈವಾಗೂ ಪ್ರಮಾಣ ಪತ್ರ ನೀಡಿ ಗೌರವಿಸಿದೆ. ಮಗಳು ಐಶ್ವರ್ಯಾ ರಜನಿಕಾಂತ್ ಪ್ರಮಾಣ ಪತ್ರ ಸ್ವೀಕರಿಸಿದ್ದಾರೆ. ಜುಲೈ 24 ರಂದು ಸೂಪರ್‌ಸ್ಟಾರ್ ರಜನಿಕಾಂತ್ ಅವರಿಗೆ ಆದಾಯ ತೆರಿಗೆ ಇಲಾಖೆ ಸನ್ಮಾನಿಸಿತು. ಸಮಾರಂಭದಲ್ಲಿ ಅವರ ಪುತ್ರಿ ಐಶ್ವರ್ಯಾ ಅವರು ತೆಲಂಗಾಣ ರಾಜ್ಯಪಾಲ ತಮಿಳಿಸೈ ಸೌಂದರರಾಜನ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದರು. ರಜನಿಕಾಂತ್ ಅವರು ಹಲವಾರು ವರ್ಷಗಳಿಂದ ತಮಿಳುನಾಡಿನಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ಹಾಗೂ ಅತೀ ಹೆಚ್ಚು ತೆರಿಗೆ ಪಾವತಿ ಮಾಡುವ ನಟರಾಗಿದ್ದಾರೆ.

 

ಅವರ ಪರವಾಗಿ ಅವರ ಪುತ್ರಿ ಮತ್ತು ಚಲನಚಿತ್ರ ನಿರ್ಮಾಪಕಿ ಐಶ್ವರ್ಯ ಅವರು ಪತ್ರ ಸ್ವೀಕರಿಸಿದರು. ಸಮಾರಂಭದ ಫೋಟೋವನ್ನು ಹಂಚಿಕೊಂಡ ಐಶ್ವರ್ಯ, ಹೆಚ್ಚಿನ ಮತ್ತು ತ್ವರಿತ ತೆರಿಗೆದಾರರ ಹೆಮ್ಮೆಯ ಮಗಳು. ಎಂದು ಬರೆದುಕೊಂಡಿುದ್ದಾರೆ. #incometaxday2022 #onbehalfofmyfather ಎಂದು ಹ್ಯಾಶ್ ಟ್ಯಾಗ್ ಹಾಕಿದ್ದಾರೆ. ಇನ್ನು ಅಪ್ಪನನ್ನು ಗೌರವಿಸಿದ್ದಕ್ಕಾಗಿ ತಮಿಳುನಾಡು ಮತ್ತು ಪುದುಚೇರಿಯ ಆದಾಯ ತೆರಿಗೆ ಇಲಾಖೆಗೆ ತುಂಬಾ ಧನ್ಯವಾದಗಳು ಎಂದಿದ್ದಾರೆ.

https://www.instagram.com/p/CgZYT59vveV/

Share this post:

Translate »