Sandalwood Leading OnlineMedia

“ತುರ್ತು ನಿರ್ಗಮನ” ದ ಮೂಲಕ ಸುನೀಲ್ ರಾವ್ ರೀ ಎಂಟ್ರಿ.

ಚಿತ್ರದ ವಿಭಿನ್ನ ಟ್ರೇಲರ್ ಗೆ ಭಾರಿ ಮೆಚ್ಚುಗೆ.

ಕೆಲವೊಂದು ಚಿತ್ರಗಳು ಹೇಗಿರಬಹುದು? ಎಂದು ಟ್ರೇಲರ್ ನೋಡಿದಾಗ ತಿಳಿಯುತ್ತದೆ. ಇತ್ತೀಚೆಗೆ ಬಿಡುಗಡೆಯಾದ ಹೇಮಂತ್ ಕುಮಾರ್ ನಿರ್ದೇಶಿಸಿರುವ “ತುರ್ತು ನಿರ್ಗಮನ” ಚಿತ್ರದ ವಿಭಿನ್ನ ಹಾಗೂ ವಿಶೇಷ ಟ್ರೇಲರ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಚಿತ್ರ ಇದೇ ಜೂನ್ 24 ರಂದು ಚಿತ್ರ ಬಿಡುಗಡೆಯಾಗುತ್ತಿದೆ. “ಎಕ್ಸ್ ಕ್ಯೂಸ್ ಮಿ” ಚಿತ್ರದ ಮೂಲಕ ಕನ್ನಡಿಗರ ಮನ ಗೆದ್ದ ನಟ ಸುನೀಲ್ ರಾವ್.  ‘12 ವರ್ಷಗಳ ನಂತರ ಮತ್ತೆ ಚಿತ್ರದಲ್ಲಿ ನಟಿಸಬೇಕು ಎಂದುಕೊಂಡಾಗ ಸಿಕ್ಕ ಸಿನಿಮಾ ತುರ್ತು ನಿರ್ಗಮನ. ಯಾರೇ ನಟರು ಕೇಳಿದ್ದರೂ, ಬೇಡ ಎನ್ನಲು ಆಗದಂತಹ ಕತೆ ಇದು. ತುಂಬಾ ವರ್ಷಗಳ ನಂತರ ಒಳ್ಳೆಯ ಚಿತ್ರದಲ್ಲಿ ನಟಿಸಿದ ಖುಷಿ ಇದೆ’ ಎಂದರು ಸುನೀಲ್‌ ರಾವ್‌.

ಹೇಮಂತ್‌ ಕುಮಾರ್‌ ಅವರು ಈ ಹಿಂದೆ ಹೇಮಂತ್‌ ರಾವ್‌ ಅವರ ಬಳಿ ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರಕ್ಕೆ ಕೆಲಸ ಮಾಡಿದವರು. ‘ಈ ರೀತಿಯ ಕತೆ ಆಧರಿಸಿ ಚಿತ್ರ ಮಾಡಬೇಕೆಂಬ ಆಸೆಯಿತ್ತು. ಅದು ಈಡೇರಿದೆ. ಚಿತ್ರತಂಡದ ಎಲ್ಲರ ಸಹಕಾರವನ್ನು ನೆನೆಯುತ್ತೇನೆ. ನಿಮ್ಮ ದುಡ್ಡಿಗೆ ಮೋಸವಾಗದ ಸಿನಿಮಾ ಮಾಡಿದ್ದೇನೆ ಎಂಬ ಭರವಸೆಯೊಂದಿಗೆ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಆಹ್ವಾನಿಸುತ್ತೇನೆ’ ಎಂದಿದ್ದು ನಿರ್ದೇಶಕರು.

ಹಿತಾ ಚಂದ್ರಶೇಖರ್‌ ಚಿತ್ರದ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ನಾವು ಬೇರೆ ಭಾಷೆಗಳಲ್ಲಿ ವಿಭಿನ್ನ ಕಥೆಯ ಚಿತ್ರಗಳು ಬಂದರೆ ಹೋಗಿ ನೋಡುತ್ತೇವೆ. “ತುರ್ತು ನಿರ್ಗಮನ” ಕೂಡ ಒಂದು ಪ್ರಯೋಗಾತ್ಮಕ ಚಿತ್ರ. ಇಂತಹ ಚಿತ್ರಕ್ಕೆ ನಿಮ್ಮ ಬೆಂಬಲವಿರಲಿ. ಎಲ್ಲರೂ ಚಿತ್ರಮಂದಿರಕ್ಕೆ ಬಂದು ಚಿತ್ರ ನೋಡಿ ಎಂದರು ಹಿತ ಚಂದ್ರಶೇಖರ್.

ರಾಜ್‌ ಬಿ ಶೆಟ್ಟಿ ಇಲ್ಲಿ ಕ್ಯಾಬ್‌ ಡ್ರೈವರ್‌ ಪಾತ್ರ ಮಾಡಿದ್ದಾರೆ. ‘ಒಂದು ಮೊಟ್ಟೆಯ ಕಥೆ’ ಚಿತ್ರ ಬಿಡುಗಡೆ ಆದಾಗ ನಿರ್ದೇಶಕ ಹೇಮಂತ್‌ ಕುಮಾರ್‌ ಕಳುಹಿಸಿದ ಮೂರು ಪುಟಗಳ ಸಂಭಾಷೆಯನ್ನು ಆಡಿಷನ್‌ನಲ್ಲಿ ಹೇಳುವ ಮೂಲಕ ಈ ಚಿತ್ರಕ್ಕೆ ರಾಜ್‌ ಬಿ ಶೆಟ್ಟಿಆಯ್ಕೆ ಆದರಂತೆ. ಸಂಯುಕ್ತ ಹೆಗಡೆ ಕ್ರಿಕೆಟ್‌ ಕೋಚ್‌ ಪಾತ್ರದಲ್ಲಿ ನಟಿಸಿದ್ದಾರೆ.

ನನಗೆ ಮೊದಲು ನಿರ್ದೇಶಕರು ಕಥೆ ಹೇಳಿದಾಗ ಅಷ್ಟು ಅರ್ಥವಾಗಲಿಲ್ಲ. ಕ್ರಮೇಣ ನಟಿಸುತ್ತಾ ಅರ್ಥವಾಯಿತು. ಸಿನಿಮಾ ಪೂರ್ಣವಾದ ಮೇಲಂತೂ ಇಂತಹ ಚಿತ್ರದಲ್ಲಿ ನಟಿಸಿದ್ದಿನಲ್ಲಾ ಎಂಬ ಖುಷಿಯಿದೆ ಎಂದರು ಅಮೃತ.

ನಾನು ಚಿತ್ರರಂಗಕ್ಕೆ ಬಂದು ಮೂವತ್ತಾರು ವರ್ಷಗಳಾಯಿತು. ಬೇಕಾದಷ್ಟು ಚಿತ್ರಗಳಲ್ಲಿ ಬೇರೆ, ಬೇರೆ ಪಾತ್ರಗಳನ್ನು ಮಾಡಿದ್ದೀನಿ. ಆದರೆ ಈ ರೀತಿಯ ಪಾತ್ರ ಮಾಡಿರುವುದು ಇದೇ ಮೊದಲು. ನನ್ನ ಮೊದಲ ಚಿತ್ರ “ಆನಂದ್” ನಲ್ಲಿ ನಟಿಸಿದ್ದಾಗ ಆಗಿದ್ದ ಸಂತೋಷ ಈ ಚಿತ್ರದಲ್ಲಿ ನಟಿಸಿದ ಮೇಲೇ ಆಗಿದೆ ಎಂದರು ನಟಿ ಸುಧಾರಾಣಿ.

ನನ್ನ “ಒಂದು ಮೊಟ್ಟೆಯ ಕಥೆ” ಚಿತ್ರ ಆಗಷ್ಟೇ ರಿಲೀಸ್ ಆಗಿತ್ತು. ಆಗ ಈ ಚಿತ್ರದ ಆಡಿಷನ್ ನಡೆಯುತ್ತಿತ್ತು. ನನಗೆ ಹೇಮಂತ್ ಕುಮಾರ್ ಮೂರು ಪುಟಗಳ ಸಂಭಾಷಣೆ ಕಳುಹಿಸಿದ್ದರು. ಅದನ್ನು ನೋಡಿ ನಾನು ಈ ಸಿನಿಮಾದಲ್ಲಿ ಅಭಿನಯಿಸಬೇಕೆಂದು ನಿರ್ಧಾರ ಮಾಡಿದೆ. ಆಡಿಷನ್ ನಲ್ಲಿ ಸೆಲೆಕ್ಟ್ ಆದೆ ಎಂದ ರಾಜ್ ಬಿ ಶೆಟ್ಟಿ, ಈ ಚಿತ್ರದಲ್ಲಿ ಕ್ಯಾಬ್ ಡ್ರೈವರ್ ಪಾತ್ರದಲ್ಲಿ ಕಾಣಿಸಿಕೊಂಡಿರುವುದಾಗಿ ಹೇಳಿದರು.ಹಾಡುಗಳ ಬಗ್ಗೆ ಧೀರೇಂದ್ರ ದಾಸ್ ಮೂಡ್, ಛಾಯಾಗ್ರಹಣದ ಕುರಿತು ಪ್ರಯಾಗ್ ಹಾಗೂ ಚಿತ್ರ ಸಾಗಿ ಬಂದ ಬಗ್ಗೆ ಕಾರ್ಯಕಾರಿ ನಿರ್ಮಾಪಕ ಶರತ್ ಭಗವಾನ್ ಮಾತನಾಡಿದರು.

 

 

Share this post:

Related Posts

To Subscribe to our News Letter.

Translate »