Sandalwood Leading OnlineMedia

Sugar Factory Movie Review: ನಗುವಿನ ಕಡಲಲ್ಲಿ ರೋಚಕ ಒಲವಿನ ಪಯಣ

ವಿವಾಹಿತ ಸಂಬ0ಧವು ಸವಾಲುಗಳಿಂದ ಕೂಡಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಯಾಕೆಂದರೆ ಮದುವೆಯಾದ ತಕ್ಷಣ ದಂಪತಿಗಳ ಮೇಲೆ ಹೆಚ್ಚುವರಿ ಜವಾಬ್ದಾರಿಗಳ ಹೊರೆ ಬರುವುದು ಮಾತ್ರವಲ್ಲದೆ, ತಮ್ಮ ಸಂಬ0ಧವನ್ನು ಉಳಿಸಿಕೊಳ್ಳಲು ಹಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಈ ಹೊಂದಾಣಿಕೆ ಎಂಬ ಧರ್ಮಸಂಕಟವೇ ಬೇಡ ಅನ್ನುವ ಎರಡು ಮನಸುಗಳ ಮಧ್ಯೆ ನಡೆಯವ ಆಸಕ್ತಿ ದಾಯಕ ಕಥೆ ಹೊತ್ತ ಸಿನಿಮಾವೇ `ಶುಗರ್ ಫ್ಯಾಕ್ಟರಿ’. ಡಾರ್ಲಿಂಗ್ ಕೃಷ್ಣ, ಸೋನಾಲ್ ಮೊಂತೇರೊ, ಅದ್ವಿತಿ ಶೆಟ್ಟಿ ಮತ್ತು ರುಹಾನಿ ಶೆಟ್ಟಿ ನಟಿಸಿರುವ ಶುಗರ್ ಫ್ಯಾಕ್ಟರಿ, ಹೊಡಿ-ಬಡಿ-ಕಡಿ ಚಿತ್ರಗಳ ಮಧ್ಯೆ ತುಂಬಾ ಫ್ರೆಶ್ ಆಗಿ ಕಾಣುತ್ತದೆ. ದೀಪಕ್ ಅರಸ್ ನಿರ್ದೇಶನದ ಈ ಚಿತ್ರವು ಕಚಗುಳಿಯಿಡುವ ದೃಶ್ಯಗಳ ಮೂಲಕ ಪ್ರೇಮ-ಪ್ರಣಯದ ಹಲವು ಮಜಲುಗಳನ್ನು ಪ್ರೇಕ್ಷಕರ ಮುಂದೆ ಬಿಚ್ಚಿಡುತ್ತದೆ.

Garadi Movie Review : ಮೋಡಿ ಮಾಡದ ಗರಡಿ : ಭಟ್ರು ಎಡವಿದ್ದೆಲ್ಲಿ?

 

ನಾಲ್ಕು ಇಂಟ್ರೆಸ್ಟಿ0ಗ್ ಪಾತ್ರಗಳ ಸುತ್ತ ಚಿತ್ರದ ಕಥೆ ಕೇಂದ್ರೀಕೃತವಾಗಿದೆ. ಬದುಕಿನ ನಾಗಾಲೋಟದಲ್ಲಿ ಹಲವು ಅನಿವಾರ್ಯ ಸಂದರ್ಭಗಳನ್ನು ಎದುರುಗೊಳ್ಳುವ ಈ ನಾಲ್ಕೂ ಪಾತ್ರಗಳು, ನೋಡುಗನನ್ನು ನಗಿಸುತ್ತದೆ, ಕೆದಕುದತ್ತೆ ಮತ್ತು ಅಳಿಸುತ್ತದೆ ಕೂಡಾ. ಆರ್ಯ ಎಂಬ ಯಂಗ್ ಅಂಡ್ ಎನೆರ್ಜಿಟಿಕ್ ಪಾತ್ರದಲ್ಲಿ ನಟ ಡಾರ್ಲಿಂಗ್ ಕೃಷ್ಣ ಪಾದರಸದಂತೆ ನಟಿಸಿದರೆ, ಅದಕ್ಕೆ ಪೂರಕವಾಗಿ ಸೋನಾಲ್ ಮೊಂಟೇರೊ, ಅದ್ವಿತಿ ಶೆಟ್ಟಿ, ಹಾಗೂ ರುಹಾನಿ ಶೆಟ್ಟಿ ಜಿದ್ದಿಗೆ ಬಿದ್ದವರಂತೆ ನಟಿಸಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. trailer ಮತ್ತು ಹಾಡುಗಳ ಮೂಲಕ ನಿರೀಕ್ಷೆ ಹುಟ್ಟಿಸಿದ್ದ ಚಿತ್ರ ನಿರೀಕ್ಷೆ ಹುಸಿ ಮಾಡುವುದಿಲ್ಲ. ಆದುನಿಕ ಯುವ ಪೀಳಿಗೆಯ ಬದುಕು-ಬವಣೆಯ ಮೇಲೆ ಬೆಳಕು ಚೆಲ್ಲುವ ಚಿತ್ರ, ಬದುಕಿನ ಸಂಕೀರ್ಣತೆಯನ್ನು ಬಗ್ಗೆ ಕೂಡ ಹೇಳುತ್ತಾ ಸಾಗುತ್ತದೆ. ಕೆಲವು ಕಾಮಿಡಿ ಸನ್ನಿವೇಶಗಳು ನಗು ಹುಟ್ಟಿಸುವುದರ ಜೊತೆ ಜೊತೆಗೆ, ಬದುಕಿನ ಗಂಭೀರತೆಯ ಬಗ್ಗೆಯೂ ಹೇಳುತ್ತದೆ. ನಾಲ್ಕು ಪಾತ್ರಗಳ ಮೂಲಕ ಹಲವು ಲೇಯರ್‌ಗಳಲ್ಲಿ ಕಥೆ ಹೇಳಿರುವ ನಿರ್ದೇಶಕ ದೀಪಕ್ ಅರಸ್ ಅವರಿಂದ ಇನ್ನಷ್ಟು ಸದಭಿರುಚಿಯ ಚಿತ್ರಗಳನ್ನು ನಿರೀಕ್ಷಿಸಬಹುದು.

Baanadariyalli Review: ದಾರಿ ತಪ್ಪಿದ ಬಾನ`ದಾರಿ’, ಪ್ರೇಕ್ಷಕನಿಗಿದು ದುಬಾರಿ!

 

 

ಚಿತ್ರದಲ್ಲಿ ಗೋವಿಂದೇಗೌಡ, ಸೂರಜ್ ಕುಮಾರ್, ಮಹಾಂತೇಶ್, ಮತ್ತು ಪವನ್, ಎಸ್.ನಾರಾಯಣ್ ಅವರ ಪಾತ್ರಗಳ ಪಾತ್ರ ಪೋಷಣೆ ಚೆನ್ನಾಗಿ ಮೂಡಿಬಂದಿದ್ದು ಪ್ರತಿಯೊಬ್ಬ ನಟರೂ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ರಂಗಾಯಣ ರಘು ಅಭಿನಯ ಚಿತ್ರದ ಹೈಲೈಟ್‌ಗಳಲ್ಲೊಂದು. ಅವರ ಲೀಲಾಜಾಲವಾದ ನಟನೆ, ಡೈಲಾಗ್ ಡೆಲಿವರಿ ನಿಜಕ್ಕೂ ನೋಡಗುನನ್ನು ಸೆಳೆಯುತ್ತದೆ. ರೊಮಾಂಟಿಕ್ ಕಮ್ ಕಾಮಿಡಿ ಜಾನರ್‌ನ ಶುಗರ್ ಫ್ಯಾಕ್ಟರಿ ಚಿತ್ರ ಎಲ್ಲಿಯೂ ನೋಡುಗ ಮೊಬೈಲ್ ಹೊಕ್ಕದಂದೆ ಆಸಕ್ತಿದಾಯಕವಾಗಿ ನೋಡಿಸಿಕೊಂಡು ಹೋಗುತ್ತದೆ. ಒಮ್ಮೊಮ್ಮೆ ಒಂದು ಘಟನೆಯಿಂದ ಇನ್ನೊಂದು ಘಟನೆಯ ಮಧ್ಯೆ ಲಾಜಿಕ್ ಇಲ್ಲ ಎಂದೆನಿಸುವಾಗಲೇ, ಅರಸ್ ಅವರ ನಿರೂಪಣಾ ಶೈಲಿ ಮ್ಯಾಜಿಕ್ ಮಾಡಿಬಿಡುತ್ತದೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣ, ಕಬೀರ್ ರಫೀ ಸಂಗೀತ, ಕೆ.ಎಮ್.ಪ್ರಕಾಶ್ ಸಂಕಲನ, ಧನಂಜಯ.ಬಿ ನೃತ್ಯ ನಿರ್ದೇಶನ.. ಹೀಗೆ ಚಿತ್ರದ ಎಲ್ಲಾ ವಿಭಾಗಗಳೂ ಅಚ್ಚುಕಟ್ಟಾಗಿ ಮೂಡಿ ಬಂದಿದೆ. ಕೊನೆಯದಾಗಿ, ಚಿತ್ರಕ್ಕೆ `ಶುಗರ್ ಫ್ಯಾಕ್ಟರಿ’ ಎಂಬ ಟೈಟಲ್ ಯಾಕೆ ಎಂಬುದನ್ನು ಸಿನಿಮಾ ನೋಡಿಯೇ ಅನುಭವಿಸಬೇಕು. ನೀವು ರೋಮಾಂಟಿಕ್-ಕಾಮಿಡಿ ಚಿತ್ರ ಪ್ರಿಯರಾಗಿದ್ದಾರೆ `ಶುಗರ್ ಫ್ಯಾಕ್ಟರಿ’ ಮಿಸ್ ಮಾಡದೇ, ಚಿತ್ರ ಮಂದಿರದಲ್ಲೇ ನೋಡಿ.

Share this post:

Related Posts

To Subscribe to our News Letter.

Translate »