ಸ್ಯಾಂಡಲ್ ವುಡ್ ನ ದೊಡ್ಡ ನಿರ್ಮಾಪಕರಲ್ಲಿ ರಮೇಶ್ ರೆಡ್ಡಿ ಕೂಡ ಒಬ್ಬರು. ಸದ್ಯ 45 ಸಿನಿಮಾಗೆ ಬಂಡವಾಳ ಹಾಕುವ ಮೂಲಕ ತೆರೆ ಮೇಲೆ ಮ್ಯಾಜಿಕ್ ಮಾಡಲು ರೆಡಿಯಾಗಿದ್ದಾರೆ. ಶಿವರಾಜ್ ಕುಮಾರ್, ಉಪೇಂದ್ರ ಅವರನ್ನು ಮತ್ತೆ ಒಟ್ಟಿಗೆ ನೋಡುವಂತೆ ಮಾಡುತ್ತಿದ್ದಾರೆ. ಅದರ ಜೊತೆಗೆ ರಾಜ್ ಬಿ ಶೆಟ್ಟಿ ಕೂಡ ಇರಲಿದ್ದಾರೆ. ಸಿನಿಮಾದ ಜೊತೆ ಜೊತೆಗೆ ಮಗಳ ಮದುವೆಯನ್ನು ಮಾಡಿದ್ದಾರೆ.
ನಿರ್ಮಾಪಕ ರಮೇಶ್ ರೆಡ್ಡಿ ಇತ್ತೀಚೆಗಷ್ಟೇ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಿದ್ದಾರೆ. ಪ್ಯಾಲೇಸ್ ಗ್ರೌಂಡ್ ನಲ್ಲಿ ಸಿನಿಮಾ ತಾರೆಯರನ್ನೆಲ್ಲಾ ಕರೆದು ಸಂಭ್ರಮದಿಂದ ಮಗಳ ಮದುವೆ ಮಾಡಿದ್ದಾರೆ. ಕುಟುಂಬಸ್ಥರು, ಆಪ್ತರು, ಸ್ಯಾಂಡಲ್ ವುಡ್ ಬಳಗದವರೆಲ್ಲ ರಮೇಶ್ ರೆಡ್ಡಿ ಮಗಳ ಮದುವೆಗೆ ಬಂದು ಹರಸಿ, ಹಾರೈಸಿದ್ದಾರೆ.
ಇನ್ನು ರಮೇಶ್ ರೆಡ್ಡಿ ಅವರಿಗೆ ಇನ್ಫೋಸಿಸ್ ಸುಧಾಮೂರ್ತಿ ಎಂದರೆ ಸ್ಪೂರ್ತಿ ಎಂಬುದು ಈಗಾಗಲೇ ತಿಳಿದಿದೆ. ಸುಧಾಮೂರ್ತಿ ಅವರ ಜೊತೆಗೆ ಸೇರಿ ಕೆಲಸ ಕಲಿತವರು ರಮೇಶ್ ರೆಡ್ಡಿ. ಅವರ ಮಗಳ ಮದುವೆಗೆ ರಮೇಶ್ ರೆಡ್ಡಿ ಅವರ ಕರೆಯೋಲೆಗೆ ಸುಧಾಮೂರ್ತಿ ಅವರು ಮದುವೆಗೆ ಬಂದಿದ್ದಾರೆ. ರಮೇಶ್ ರೆಡ್ಡಿ ಅವರ ಮಗಳು ತೇಜಸ್ವಿನಿ ರಮೇಶ್ ಅವರಿಗೆ ಶುಭ ಹಾರೈಸಿದ್ದಾರೆ.