ಕುಮಾರ್ ಹಾಗೂ ಸುದೀಪ್ ನಡುವೆ ಎದ್ದಿರುವ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದಿರುವ ಸಾರಾ ಗೋವಿಂದು, ‘ರನ್ನ’ ಬಿಡುಗಡೆ ಸಂದರ್ಭ ಎದ್ದಿದ್ದ 2.50 ಕೋಟಿ ರೂಪಾಯಿ ಬಾಕಿ ವಿವಾದ ನೆನಪಿಸಿದ್ದಾರೆ.
“ಸುದೀಪ್ ಗೆ ಹರ್ಟ್ ಆಗಿದೆ ಎಷ್ಟು ಅಂತಾ ಗೊತ್ತಿಲ್ಲಾ,”
ಸುದೀಪ್ ವಿರುದ್ಧ ನಿರ್ಮಾಪಕ ಎಂಎನ್ ಕುಮಾರ್ ಮಾಡಿರುವ ಆರೋಪಗಳಿಗೆ ಪ್ರತ್ಯುತ್ತರವಾಗಿ ನಟ ಸುದೀಪ್ ನ್ಯಾಯಾಲಯದ ಮೆಟ್ಟಿಲೇರಿದ್ದು, ತಮ್ಮ ವಿರುದ್ಧ ಆರೋಪ ಮಾಡಿದವರ ಮೇಲೆ 10 ಕೋಟಿ ರೂಪಾಯಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಇದರ ವಿರುದ್ಧ ನಿರ್ಮಾಪಕ ಕುಮಾರ್ ಫಿಲಂ ಚೇಂಬರ್ ಎದುರು ಧರಣಿ ಮಾಡುತ್ತಿದ್ದಾರೆ. ಇದೀಗ ಈ ಪ್ರಕರಣಕ್ಕೆ ಫಿಲಂ ಚೇಂಬರ್ ಮಾಜಿ ಅಧ್ಯಕ್ಷ ಸಾರಾ ಗೋವಿಂದು ಸಹ ಎಂಟ್ರಿ ಆಗಿದ್ದು, ಸುದೀಪ್ ವಾಣಿಜ್ಯ ಮಂಡಳಿಗೆ ಆಗಮಿಸಿ ಮಾತು-ಕತೆ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದಿದ್ದಾರೆ.
ಈ ಮದ್ಯೆ ರವಿಚಂದ್ರನ್ ಎಂಟ್ರಿ, ಸಿನಿಮಾದವರ ಪ್ರವೇಶ ಈ ವಿವಾದಕ್ಕೆ ಅತಿಯಾಗಿದೆ ಆದರೂ ಸಮಸ್ಯೆ ಅರ್ಥವೂ ಆಗುತ್ತಿಲ್ಲಾ ಇತ್ತಾ ಬಗೆಹರಿಯುತ್ತಲೂ ಇಲ್ಲಾ. ಪ್ರತಿ ದಿನ ಒಂದಕ್ಕೊಂದು ಸಮಸ್ಯೆ ಅಂಟಕೊಂಡು ಬೆಳೆಯುತ್ತಾ ಹೋಗುತ್ತಿದೆ, ಹೀಗೆ ಆದರೇ ಈ ವಿವಾದದಲ್ಲಿ ಇನ್ನಷ್ಟು ಹೊಸ ವಿಷಯ ಮತ್ತು ವಿವಾದಗಳು ಹೊರ ಬರುವ ಸಾಧ್ಯತೆಗಳಿವೆ,