Left Ad
ಸುದೀಪ್ ಐತಿಹಾಸಿಕ ಚಿತ್ರದಲ್ಲಿ ನಟಿಸದಿರಲು ಕಾರಣ ಏನು ಗೊತ್ತಾ?! - Chittara news
# Tags

ಸುದೀಪ್ ಐತಿಹಾಸಿಕ ಚಿತ್ರದಲ್ಲಿ ನಟಿಸದಿರಲು ಕಾರಣ ಏನು ಗೊತ್ತಾ?!

ಇತ್ತೀಚೆಗೆ ಹುಟ್ಟುಹಬ್ಬದ ಸಂಭ್ರಮದಲ್ಲಿ ಸುದೀಪ್ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದರು. ಸಿನಿಮಾ, ಬಿಗ್‌ಬಾಸ್, ರಾಜಕೀಯ ಹೀಗೆ ಸಾಕಷ್ಟು ವಿಚಾರಗಳ ಬಗ್ಗೆ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಕಿಚ್ಚ ಉತ್ತರಿಸಿದ್ದರು. ಈ ವೇಳೆ ಐತಿಹಾಸಿಕ ಸಿನಿಮಾಗಳಲ್ಲಿ ನಟಿಸುವ ಬಗ್ಗೆ ಪ್ರಶ್ನೆ ಎದುರಾಯಿತು. ತಾವು ಯಾಕೆ ಐತಿಹಾಸಿಕ ಸಿನಿಮಾ ಮಾಡದೇ ಕಮರ್ಷಿಯಲ್ ಆಕ್ಷನ್ ಸಿನಿಮಾ ಮಾಡ್ತಿದ್ದೀನಿ ಎಂದು ಸುದೀಪ್ ಸ್ಪಷ್ಟಪಡಿಸಿದ್ದಾರೆ.

“ಐತಿಹಾಸಿಕ ಸಿನಿಮಾಗಳಲ್ಲಿ ನಟಿಸುವ ಬಗ್ಗೆ ನನಗಿರುವ ಸಮಸ್ಯೆ ನೇರವಾಗಿ ಹೇಳ್ತೀನಿ ಕೇಳಿ. ನನಗೆ ಕುದುರೆ ಸವಾರಿ ಆಗೋಲ್ಲ. ಒಮ್ಮೆ ಇಂಥದ್ದೇ ಅವಕಾಶ ಬಂದು ಕುದುರೆ ಸವಾರಿ ಅಭ್ಯಾಸ ಮಾಡೋಕೆ ಹೋಗಿದ್ದೆ. ಒಂದು ವಾರ ಕಲಿತೆ. ಒಂದು ದಿನ ಇದ್ದಕ್ಕಿದಂತೆ ಕುದುರೆ ಎಗರಿ ನನ್ನನ್ನು 20 ಮೀಟರ್ ನನ್ನನ್ನು ಎಳ್ಕೊಂಡು ಹೋಯ್ತು. ಅವತ್ತು ಆಗಿದ್ದ ಭಯ ಇದ್ಯಲ್ಲ, ಪ್ರಪಂಚನೇ ನೋಡಿಬಿಟ್ಟೆ. ಆಗ ಗೊತ್ತಾಯ್ತು, ಯಾವುದೇ ವಾಹನದ ಮೇಲೆ ಹತ್ತಿದ್ರು, ಬ್ರೇಕ್, ಹ್ಯಾಂಡಲ್ ಎಲ್ಲಿದೆ ಅಂತ ಗೊತ್ತಿರಬೇಕು ಅಂತ. ಕುದುರೆಯಲ್ಲಿ ಎಲ್ಲಿರುತ್ತೋ ಗೊತ್ತಿಲ್ಲ” ಎಂದು ಸುದೀಪ್ ನಕ್ಕಿದ್ದರು.

ಎರಡನೇ ಬಾರಿ ಕುದುರೆ ಸವಾರಿ ಮಾಡಲು ಹೋಗಿ ಭಯಬಿದ್ದ ಘಟನೆಯನ್ನು ಕಿಚ್ಚ ನೆನಪಿಸಿಕೊಂಡಿದ್ದರು. “ಮತ್ತೊಮ್ಮೆ ದರ್ಶನ್ ಮೈಸೂರು ತೋಟಕ್ಕೆ ಹೋಗಿದ್ವಿ. ಅಲ್ಲಿ ಹೋದಾಗ ಕುದುರೆ ಹತ್ತೋಕೆ ಬಹಳ ಬಲವಂತ ಮಾಡ್ದ. ನೀನು ತಿಪ್ಪರಲಾಗ ಹಾಕಿದ್ರು, ನೀನು ಬೇಡ ನಿನ್ನ ಕುದುರೆ ಸಹವಾಸ ಕೂಡ ಬೇಡ ಎಂದಿದ್ದೆ. ಆದ್ರು ಕುದುರೆ ಹತ್ತಿಸಿದ್ರು. ಅವ್ನು ಕುದುರೆ ಏರಿ ಚೆನ್ನಾಗಿ ಸವಾರಿ ಮಾಡ್ತಿದ್ದ. ಇದ್ದಕ್ಕಿಂದಂತೆ ಜಾರಿ ಬಿದ್ದ. ಅದನ್ನು ಕಣ್ಣಾರೆ ನೋಡಿದ ನಾನು ಮತ್ತೆ ಕುದುರೆ ಏರುವ ಸಾಹಸ ಮಾಡ್ಲಿಲ್ಲ. ಐತಿಹಾಸಿಕ ಅಂದಾಕ್ಷಣ ಯುದ್ಧ, ಕುದುರೆ ಸವಾರಿ ಅಂತೀರಾ. ಈಗ ಮಾಡ್ತಿರೋ ಸಿನಿಮಾಗಳಲ್ಲಿ ಬೈಕ್ ಅಲ್ಲಿ ಬರ್ತೀನಿ, ಬೇಗ ಶೂಟಿಂಗ್ ಮುಗಿಯತ್ತೆ, ಮನೆಗೆ ಹೋಗ್ತೀನಿ” ಎಂದು ಸುದೀಪ್ ವಿವರಿಸಿದ್ದಾರೆ.

ಮಾತು ಮುಂದುವರೆಸಿದ ಕಿಚ್ಚ “ಬಿಲ್ಲ ರಂಗ ಬಾಷ ಚಿತ್ರದ ಒಂದು ಪಾತ್ರಕ್ಕೆ 2 ಗಂಟೆ ಮೇಕಪ್ ಹಾಕಿಕೊಳ್ಳಬೇಕು. ನನ್ನ ಲೈಫ್‌ನಲ್ಲಿ ಯಾವತ್ತು ಕೂಡ ಅಷ್ಟು ಹೊತ್ತು ಮೇಕಪ್ ಹಾಕಲಿಲ್ಲ. ಬಿಲ್ಲ ಪಾತ್ರಕ್ಕೆ ಹಾಕಿಕೊಳ್ಳುವ ಆ ಮೇಕಪ್ ತೆಗೆಯಲು ಅರ್ಧ ಗಂಟೆ ಬೇಕು” ಎಂದು ಸುದೀಪ್ ಹೇಳಿದ್ದಾರೆ. ‘ಬಿಲ್ಲ ರಂಗ ಬಾಷ’ ಜೊತೆ ‘ಮಾರ್ಕ್’ ಎಂಬ ಮತ್ತೊಂದು ಚಿತ್ರದಲ್ಲಿ ಸುದೀಪ್ ನಟಿಸುತ್ತಿದ್ದಾರೆ.

Spread the love
Translate »
Right Ad