Sandalwood Leading OnlineMedia

‘ಸದ್ದು ವಿಚಾರಣೆ ನಡೆಯುತ್ತಿದೆ’ ನವೆಂಬರ್ 25ಕ್ಕೆ ರಾಜ್ಯಾದ್ಯಂತ ಬಿಡುಗಡೆ

ಎಂ. ಎಂ. ಸಿನಿಮಾಸ್ ಬ್ಯಾನರ್ ನಡಿ ಭಾಸ್ಕರ್ ಆರ್ ನೀನಾಸಂ ನಿರ್ದೇಶಿಸಿರುವ ಸದ್ದು ವಿಚಾರಣೆ ನಡೆಯುತ್ತಿದೆ ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ಇಂಟ್ರಸ್ಟಿಂಗ್ ಟ್ರೇಲರ್, ಚೆಂದದ ಹಾಡುಗಳ ಮೂಲಕ ಚಿತ್ರ ಪ್ರೇಮಿಗಳ ಮನಗೆದ್ದಿರುವ ಚಿತ್ರ ನವೆಂಬರ್ 25ಕ್ಕೆ ಪ್ರೇಕ್ಷಕರೆದುರು ಬರಲು ರೆಡಿಯಾಗಿದೆ.

 

 

“ಕೊರಗಜ್ಜ ದೈವ”ದ ನಿಜಜೀವನದ ಕಥೆಯ “ಕರಿ ಹೈದ….ಕರಿ ಅಜ್ಜ …”

ರಂಗಭೂಮಿ ಪ್ರತಿಭೆ ಭಾಸ್ಕರ್ ಆರ್ ನೀನಾಸಂ ನಿರ್ದೇಶನದ ಮೊದಲ ಸಿನಿಮಾವಿದು. ಚಿತ್ರಕ್ಕೆ ಅಶ್ವಿನಿ ಕೆ ಎನ್ ಕಥೆ ಬರೆದಿದ್ದು, ಭಾಸ್ಕರ್ ಆರ್ ನೀನಾಸಂ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ನೈಜ ಘಟನೆಗಳಿಂದ ಸ್ಪೂರ್ತಿ ಪಡೆದು ಹೆಣೆದ ಈ ಚಿತ್ರ ಸಸ್ಪೆನ್ಸ್ ಥ್ರಿಲ್ಲರ್ ಕಥಾಹಂದರ ಒಳಗೊಂಡಿದೆ. ಪಾವನ ಗೌಡ, ರಾಕೇಶ್ ಮಯ್ಯ, ಮಧುನಂದನ್ ಚಿತ್ರದ ಮುಖ್ಯಭೂಮಿಕೆಯಲ್ಲಿ ನಟಿಸಿದ್ದು, ಅಚ್ಯುತ್ ಕುಮಾರ್, ಕೃಷ್ಣ ಹೆಬ್ಬಾಳೆ, ರಾಘು ಶಿವಮೊಗ್ಗ, ಜಾಹಂಗೀರ್, ರೋಹಿಣಿ ರಘುನಂನಂದನ್ ಒಳಗೊಂಡ ತಾರಾಬಳಗ ಚಿತ್ರದಲ್ಲಿದೆ.

 

 

“ಸಿರಿ ಲಂಬೋದರ ವಿವಾಹ”ಕ್ಕೆ ಶುಭಕೋರಿದ ರಮೇಶ್ ಅರವಿಂದ್

ಬೆಂಗಳೂರು, ಸಕಲೇಶಪುರ, ಮಂಗಳೂರು, ಮೈಸೂರಿನಲ್ಲಿ ಸಿನಿಮಾವನ್ನು ಸೆರೆ ಹಿಡಿಯಲಾಗಿದ್ದು, ಎಂ. ಎಂ. ಸಿನಿಮಾಸ್ ಬ್ಯಾನರ್ ನಡಿ ಸುರಭಿ ಲಕ್ಷ್ಮಣ್ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ರಾಜ್ ಕಾಂತ ಕ್ಯಾಮೆರಾ ನಿರ್ದೇಶನ, ಸಚಿನ್ ಬಸ್ರೂರು ಸಂಗೀತ, ಶಶಿಧರ್ ಪಿ ಸಂಕಲನ, ಗಂಗಮ್ ರಾಜ್ ನೃತ್ಯ ನಿರ್ದೇಶನ, ದಕ್ಷಿಣ ಮೂರ್ತಿ ಸಂಭಾಷಣೆ ಚಿತ್ರಕ್ಕಿದೆ.
ಪ್ರಮೋದ್ ಮರವಂತೆ, ಕಿನ್ನಾಳ್ ರಾಜ್ ಸಾಹಿತ್ಯದಲ್ಲಿ ಅರಳಿದ ಹಾಡುಗಳು ಸಿನಿಮಾದಲ್ಲಿದ್ದು, ಎಲ್ಲಾ ಹಾಡುಗಳು ಕೇಳುಗರ ಮನಗೆದ್ದಿವೆ. ರಘು ದೀಕ್ಷಿತ್, ರವಿ ಬಸ್ರೂರು, ಪಂಚಮ್ ಜೀವ ಚಿತ್ರದ ಹಾಡುಗಳಿಗೆ ದನಿಯಾಗಿದ್ದಾರೆ. ಸಾಕಷ್ಟು ಇಂಟ್ರಸ್ಟಿಂಗ್ ಅಂಶಗಳನ್ನು ಹೊತ್ತ ‘ಸದ್ದು ವಿಚಾರಣೆ ನಡೆಯುತ್ತಿದೆ’ ಸಿನಿಮಾ ನವೆಂಬರ್ 25ಕ್ಕೆ ರಾಜ್ಯಾದ್ಯಂತ ತೆರೆ ಕಾಣುತ್ತಿದೆ.

Share this post:

Related Posts

To Subscribe to our News Letter.

Translate »